ಆನ್
ದತ್ತಿ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಧಾರವಾಡ ೨೮ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಧಾರವಾಡ, ಕರ್ನಾಟಕ ಸಂಗ್ರಾಮ ಸೇನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದ ರಾಜು ತಾಳಿಕೋಟಿ ನಿರ್ದೇಶಕರು ರಂಗಾಯಣ ಧಾರವಾಡ ಇವರು ಮಕ್ಕಳ ಸೂಕ್ತ ಪ್ರತಿಭೆ ಹೊರಹಾಕಲು ಇಂತಹ ವೇದಿಕೆಗಳು ಅವಶ್ಯ. ಈ ಕೆಲಸವನ್ನು ಮಕ್ಕಳ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಶ್ಲಾಘನೀಯ ಎಂದರು. ಮಕ್ಕಳ ಬೆಳವಣಿಗೆಗೆ ಪೋಷಕರು ಅವರಿಲ್ಲಿರುವ ಉತ್ತಮ ಕಲೆಯನ್ನು ಗುರುತಿಸಿ ಮಾರ್ಗದರ್ಶನ ಮಾಡುವುದರ ಜೊತೆಗೆ ಜೀವನ ಪಾಠ ಹೇಳಿಕೊಟ್ಟಾಗ ಮಾತ್ರ ಅವರು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು. ಸಸಿಗೆ ನೀರೆರೆವುದರ ಮೂಲಕ ಜಯಶ್ರೀ ಗೌಳಿ ಅಧ್ಯಕ್ಷರು ಪರಿಸರ ಸಮಿತಿ ಧಾರವಾಡ ರವರು ನಮ್ಮ ಸುತ್ತಲು ಇರುವ ಈ ಸುಂದರ ಪರಿಸರದ ಅಳಿವು ಉಳಿವಿನ ಕುರಿತು ನಮಗಿರುವ ಜವಾಬ್ದರಿಯನ್ನು ಮನದಟ್ಟು ಮಾಡಿ. ಪ್ರತಿಯೊಬ್ಬರಿಗೂ ಸಸಿ ನೀಡಿ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡಿದರು.
ಶರಣಪ್ಪ ಎಂ ಕೊಟಗಿ ರಾಷ್ಟ್ರೀಯ ಅಧ್ಯಕ್ಷರು ಅ.ಭಾ ವೀರಶೈವ ಲಿಂಗಾಯತ ಒ.ಪ ಒಕ್ಕೂಟ ಇವರು ಸಮಾಜದಲ್ಲಿ ಮಕ್ಕಳ ಕುರಿತು ನಡೆಯುವ ಇಂತಹದೊಂದು ಕಾರ್ಯಕ್ರಮ ಅರ್ಥಪೂರ್ಣವಾದುದು ಎಂದರು. ಎಸ್ ಎಸ್ ಕೆಳದಿಮಠ ಡಿಡಿಪಿಅಯ್ ರವರು ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ಮಕ್ಕಳನ್ನು ಸನ್ಮಾನಿಸಿ, ನಮ್ಮ ಇಲಾಖೆ ಮಾಡುವ ಕೆಲಸವನ್ನು ನಮಗಿಂತ ಮುಂಚಿತವಾಗಿಯೇ ಮಕ್ಕಳ ಪರಿಷತ್ತು ಮಾಡುತ್ತಿದೆ. ನಿಮ್ಮ ಯಶಸ್ಸಿಗೆ ಪ್ರತಿಯೊಬ್ಬರ ಶ್ರಮ ಅಡಗಿದೆ. ಭವಿಷ್ಯ ಉತ್ತಮವಾಗಲಿ ಎoದು ಮಕ್ಕಳನ್ನು ಮಾರ್ಗದರ್ಶನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವ ಧುಮಕನಾಳ ಜಿಲ್ಲಾ ಅಧ್ಯಕ್ಷರು ಮಸಾಪ ಧಾರವಾಡರವರು ವಹಿಸಿಕೊಂಡು ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ಸರ್ವರನ್ನೂ ನೆನಪಿಸಿಕೊಂಡರು. ಸರ್ಕಾರ ಇಲಾಖೆ ಮತ್ತು ಸಾರ್ವಜನಿಕರ ದುಡ್ಡು ಮಕ್ಕಳ ಉತ್ತಮ ಕೆಲಸ ಕಾಯ೯ಗಳಿಗೆ ಸದ್ವಿನಿಯೋಗ ಪಡಿಸಿಕೊಂಡು ಮಕ್ಕಳ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದೆ. ಬರುವ ದಿನಗಳಲ್ಲಿ ರಾಜ್ಯ ಜಿಲ್ಲಾ ಹಂತದಲ್ಲಿ ಮೂರು ದಿನಗಳ ಮಕ್ಕಳ ಸಾಹಿತ್ತಿಕ ಕಾಯ೯ಕ್ರಮಗಳು ಹಮ್ಮಿಕೊಳ್ಳಲಾಗುವುದು ಎಂದರು. ಹನುಮಾಕ್ಷಿ ಗೋಗಿ, ಬಸನಗೌಡ ಪಾಟೀಲ, ರವಿ ಅಂಬೋಜಿ ಮುಂತಾದ ಗಣ್ಯಮಾನ್ಯರು ಭಾಗವಹಿಸಿದ್ದರು.
ಜೊತೆಗೆ ಮ.ಸಾ.ಪ ತಾಲೂಕು ಅಧ್ಯಕ್ಷರಾದ ಅಕ್ಬರಅಲಿ ಸೋಲಾಪೂರ, ರಂಜನಾ ಪಂಚಾಳ, ಪ್ರಕಾಶ ಹೂಗಾರ, ಸೋಮಲಿಂಗ ಒಡೆಯರ, ಲೋಕೇಶ ಸರಾವರಿ, ಲಲಿತಾ ಸಾಲಿಮಠ, ನೇತ್ರಾ ರುದ್ರಾಪೂರಮಠ ಭಾಗವಸಿದ್ದರು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ