ಆಧ್ಯಾತ್ಮ ಮತ್ತು ಲೌಕಿಕ ವನ್ನು ಸಂಗಮ ಗೊಳಿಸಿದವರು ಡಾ. ರಾಜಕುಮಾರ - ಡಾ. ನಿತಿನ್‌ಚಂದ್ರ ಹತ್ತಿಕಾಳ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಆಯೋಜಿಸಿದ್ದ,ಪೂಜ್ಯ ಶ್ರೀ ಮಹಾಂತಪ್ಪ ಅರ್ಬನ್ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಗಮ ನಿಯಮಿತ ಶ್ರೀಮತಿ ಸುಮಂಗಲ ಕೊಟ್ರೆಗೌಡ ಪಾಟೀಲ ದತ್ತಿ, ಶ್ರೀಮತಿ ಯಮನಮ್ಮ ಆನಂತಪ್ಪ ಹಡಗಲಿ ದತ್ತಿ, ಶ್ರೀಮತಿ ನಾಗಮ್ಮ ಈರಪ್ಪ ಅಳಗುಂಡಗಿ ದತ್ತಿ, ಪ್ರೊ .ಪ್ರಕಾಶ ನಾಯಕ ದತ್ತಿ ಅಂಗವಾಗಿ ಬಾನಿಗೊಂದು ಎಲ್ಲೆ ಎಲ್ಲಿದೆ. ಡಾ. ರಾಜಕುಮಾರ ಅವರು ನಟಿಸಿದ ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಖ್ಯಾತ ವೈದ್ಯ ಡಾ. ನೀತನ್ ಚಂದ್ರ ಹತ್ತಿಕಾಳ ಇವರು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇವರು ಶ್ರೇಷ್ಠ ನಟ, ಗಾಯಕ ಅಣ್ಣಾವ್ರ ಹಾಡುಗಳು ಎಂದೆಂದೂ ಅಜರಾಮರ ಎಂದು ಹೇಳುತ್ತಾ ರಾಜಕುಮಾರ ಇವರು ಅನೇಕ ಭಕ್ತಿ ಗೀತೆ ಹಾಡುವ ಮೂಲಕ ಭಕ್ತಿ ಪಥ ಸಾರಿದ ವ್ಯಕ್ತಿ ತಮ್ಮ ಹಾಡಿನ ಮೂಲಕ ಅನೇಕ ನೀತಿಯುತ ಸಂದೇಶಗಳನ್ನು ಸಮಾಜಕ್ಕೆ ತಿಳಿಯಪಡಿಸಿದ್ದಾರೆ ಎಂದು ತಿಳಿಸಿದರು. ಶ್ರೀಮತಿ ವಿಶೇಶ್ವರಿ ಹೀರೆಮಠ ಇವರು ಕರ್ನಾಟಕ ಏಕೀಕರಣ ಕುರಿತು ಉಪನ್ಯಾಸ ನೀಡಿ ಗೋಕಾಕ ಚಳುವಳಿಯಲ್ಲಿ ಡಾ.ರಾಜಕುಮಾರ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಮಹಿಳಾ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ವಿಶ್ವೇಶ್ವರಿ ಹೀರೆಮಠ ಹಾಗೂ ಕೋಶಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶ್ರೀ ಸತೀಶ ತುರಮರಿ ಇವರನ್ನು ಸನ್ಮಾನಿಸಲಾಯಿತು.. ಶ್ರೀ ಸತೀಶ ತುರಮರಿ ಮಾತನಾಡಿದರು.
ಡಾ. ಲಿಂಗರಾಜ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.. ದತ್ತಿ ದಾನಿಗಳಾದ ಶ್ರೀಮತಿ ಸುಜಾತಾ ಜಿನದತ್ತ ಹಡಗಲಿ ಡಾ. ಜಿನದತ್ತ ಹಡಗಲಿ ಮಾತನಾಡಿ ವಿಜೇತರಾದವರಿಗೆ ಬಹುಮಾನ ಘೋಷಣೆ ಮಾಡಿದರು. ಮುಖ್ಯ ಅತಿಥಿಗಳು ಆಗಿ ರಮೇಶ ಮಹದೇವಪ್ಪನವರು ಮತ್ತು ನಾರಾಯಣ ಭಜಂತ್ರಿ, ,ಮಲ್ಲಿಕಾರ್ಜುನ ಮಠಪತಿ, ಎಂ ಸಿ ಯಲಿಗಾರ, ಶ್ರೀಶೈಲಗೌಡ ಕಮತರ ಸಿ ಎಸ್ ಹೊಸಗೌಡರ ಆಗಮಿಸಿದ್ದರು. ನಿರ್ಣಾಯಕರಾಗಿ ಬಾಬಾಜಾನ ಮುಲ್ಲಾ, ಪ್ರಮೀಳಾ ಜಕ್ಕನ್ನವರ, ಮೇಘಾ ಹುಕ್ಕೇರಿ, ಉಮಾದೇವಿ ಬಾಗಲಕೋಟೆ ಭಾಗವಹಿಸಿದ್ದರು. ಒಟ್ಟು ೩೫ ಗಾಯಕರು ಸುಶ್ರಾವ್ಯವಾಗಿ ಡಾ. ರಾಜಕುಮಾರ್ ಅವರ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಪ್ರಾರಂಭದಲ್ಲಿ ಪ್ರಮೀಳಾ ಜಕ್ಕನ್ನವರ ಪ್ರಾರ್ಥಿಸಿದರು.ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ ನರೇಗಲ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಾ ಹುಕ್ಕೇರಿ ನಿರೂಪಿಸಿದರು ಉಮಾದೇವಿ ಬಾಗಲಕೋಟೆ ವಂದಿಸಿದರು. ಎಫ್ ಬಿ. ಕಣವಿ ಇವರು ಗೀತ ಗಾಯನ ಕಾರ್ಯಕ್ರಮ ನಿರೂಪಿದರು.ಕಾರ್ಯಕ್ರಮದಲ್ಲಿ ಪ್ರಭಾಕರ ಲಗಮಣ್ಣವರ, , ವಿಜಯಾ ಗುತ್ತಲ, ಆಶಾ ಸೈಯದ್,ಸುಮಂಗಲಾ ದಂಡಿನ, ಗೀತಾ ಕುಲಕರ್ಣಿ ವಿಜಯಲಕ್ಷ್ಮಿ ಕಲ್ಯಾನಶೆಟ್ಟರ, ಚಿಂತನ್ ಹತ್ತಿಕಾಲ, ಮುರುಗೇಶ್ ಹತ್ತಿಕಾಲ್, ರಾಜೀವ ಸಿಂಗ ಹಲವಾಯಿ, ಸುವರ್ಣ ಸುರುಕೊಡ್ ಮುಂತಾದವರು ಉಪಸ್ಥಿತರಿದ್ದರು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ