ಕಾದಂಬರಿ- ಸಂಚಿಕೆ -35

ಪ್ರೊ. ಸ. ಸ. ಮಾಳವಾಡ, ಲಿಂ. ಮಾತೋಶ್ರೀ ಅಂದಾನೆಮ್ಮ ಯಕ್ಕುಂಡಿಮಠ, ದಿ ಮಹಾಂತಪ್ಪ ಕೊಡ್ಲೆಪ್ಪ ಸಜ್ಜನರ ದತ್ತಿ ಉಪನ್ಯಾಸ

 ಧಾರವಾಡ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾ ವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಇಂದಿನ ಈ ಕಾರ್ಯಕ್ರಮವನ್ನು ನಾಡಿನ ಹಿರಿಯ ಸಾಹಿತಿಗಳು,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ಜೆ ಏನ್ ಯು ನಿವೃತ್ತ ಪ್ರಾಧ್ಯಾಪಕರು ಆದ ಶ್ರೀ ಪುರುಷೋತ್ತಮ ಬಿಳಿಮಲೆಯವರು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಕಾನೂನು ಮತ್ತು ಕನ್ನಡ ಸಾಹಿತ್ಯ ಹೇಗೆ ಪೂರಕವಾಗಿದೆ. ಕಳೆದ  ದಶಕದಿಂದ ಉತ್ತರ ಭಾರತದ ಭಾಷೆಗಳ ಬೆಳವಣಿಗೆ ಶೇಕಡಾ ೬೦ ರಷ್ಟು ಇದ್ದರೆ ನಮ್ಮ ಕನ್ನಡ ಭಾಷೆಯ ಬೆಳವಣಿಗೆ ಶೇಕಡಾ ೩.೬.ಇದು ಗಂಭೀರ ವಿಷಯ ಇಂದಿನ ಯುವಕರು ಅದರಲ್ಲೂ ಕಾನೂನು ವಿದ್ಯಾರ್ಥಿಗಳು ಈ ಕಡಗೆ ಗಮನ ಹರಿಸಬೇಕು.ವಕೀಲರಾಗಿದ್ದವರು ತಮ್ಮ ಪರಿಸರದ ಭಾಷೆ ಕನ್ನಡದ ಮೇಲೆ,ಕನ್ನಡದ ವಿವಿಧ ಶೈಲಿಯ ಮೇಲೆ ಹಿಡಿತವಿದ್ದರೆ ಮಾತ್ರ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಬಲ್ಲರು.ಅಂತಾ ಹೇಳಿದರು. 

ಇದೇ ಸಂದರ್ಭದಲ್ಲಿ ವಚನಸಾಹಿತ್ಯ ಮತ್ತು ಸಂವಿಧಾನ ಕುರಿತು ಮಾತನಾಡಿ ದ ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯವಾದಿಗಳಾದ ಡಾ. ಕೆ. ಎಸ್. ಕೋರಿಶೆಟ್ಟರ ಅವರು, ಅನುಭವ ಮಂಟಪದ ಮೂಲಕ ನ್ಯಾಯಾಲಯದ ಕಾನ್ಸೆಪ್ಟ್ ನ್ನು ಜಗತ್ತಿಗೆ ಒದಗಿಸಿಕೊಟ್ಟವರು ೧೨ ನೆಯ ಶತಮಾನದ ವಚನಕಾರರು. ಮಹಿಳೆಯರಿಗೆ, ಕೆಳವರ್ಗದವರಿಗೆ ಸರಿ ಸಮಾನ ಸ್ಥಾನಮಾನ ನೀಡಿದ ಶ್ರೇಯಸ್ಸು ವಚನಕಾರರದು ಎಂದು ಹೇಳುವುದರೊಂದಿಗೆ, ಅಕ್ಕ, ಅಣ್ಣ, ಅಯ್ಯ, ಎಂಬ ಸಂಬೋಧನೆಯ ಮೂಲಕ ಸರ್ವರನ್ನೂ ಸಮಾನ ದೃಷ್ಟಿಯಿಂದ ಕಂಡವರು ಶರಣರು ಎಂದು ಹೇಳಿ, ಹಲವಾರು ವಚನಗಳ ಮೂಲಕ ವಿವರಣೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಅವರು, ದತ್ತಿದಾನಿಗಳ ಕಾರ್ಯವನ್ನು ಸ್ಮರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ಆರ್. ಮಂಜುಳಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ದತ್ತಿದಾನಿಗಳಾದ ಚನ್ನಬಸಪ್ಪ ಮಾಳವಾಡ, ಎಸ್. ಜ, ಸಂಗಮೇಶ ಸಜ್ಜನರ. ಜಿಲ್ಲಾ ಕಸಾಪ ಗೌರವಕಾರ್ಯದರ್ಶಿ ಡಾ. ಜಿನದತ್ತ ಅ ಹಡಗಲಿ ಕೋಶಾಧ್ಯಕ್ಷ ಡಾ. ಎಸ್ ಎಸ್ ದೊಡಮನಿ , ಸೋಮಶೇಖರ್ ಇಟಗಿ, ಡಾ. ಆರ್ ಬಿ ಖಾದೀರನಾಯಕರ, ಎಸ್ ಬಿ ಕೊಡ್ಲಿ, ಶಿವಶಂಕರ್ ಹಿರೇಮಠ, ಪ್ರಮೀಳಾ ಜಕ್ಕನ್ನವರ, ಪ್ರೊ.ಶಶಿರೇಖಾ ಮಳುಗಿ ಮುಂತಾದವರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ