ಕಾದಂಬರಿ- ಸಂಚಿಕೆ -35

ಕರ್ನಾಟಕ ಪತ್ರಕರ್ತರ ಒಕ್ಕೂಟವನ್ನು ಬಲಿಷ್ಠಗೊಳಿಸಿ :ಡಾ|| ಶಂಕರ ಸುಗತೆ

 ಕರ್ನಾಟಕ ರಾಜ್ಯದಲ್ಲಿರುವ ಸಣ್ಣ ಪುಟ್ಟ ಪತ್ರಕರ್ತರನ್ನು ಒಗ್ಗೊಡಿಸಿಕೊಂಡು ವಾರ,ಮಾಸಿಕ ಹಾಗು ತ್ರೈಮಾಸಿಕ ಪತ್ರಿಕೆಯ ಪತ್ರಕರ್ತರು ಡಿಜಿಟಲೀ ಕರಣ ಮಾಡುವುದು ಅವಶ್ಯವಾಗಿದೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಣ್ಣ ಪುಟ್ಟ ಪತ್ರಕರ್ತರನ್ನು ಗುರುತಿಸಿ ಅವರಿಗೆ ಉಚಿತವಾಗಿ ಬಸ್ ಪಾಸ್ ಮತ್ತು ವಸತಿ ವ್ಯವಸ್ಥೆಯನ್ನು ಸರಕಾರ ಮಾಡಬೇಕಿದೆ ಎಂದು  ಕರ್ನಾಟಕ ರಾಜ್ಯ ಪತ್ರಕರ್ತರ ಒಕ್ಕೂಟದ  ಗೌರವ ಅಧ್ಯಕ್ಷರಾದ ಡಾ।। ಶಂಕರ ಸುಗತೆ ಅವರು ತಮ್ಮ ಭಾಷಣದಲ್ಲಿ  ತಿಳಿಸಿದರು.


 ಕರ್ನಾಟಕ ರಾಜ್ಯ ಪತ್ರಕರ್ತರ ಒಕ್ಕೂಟದ  ರಾಜ್ಯಾಧ್ಯಕ್ಷರಾಗಿ ನೂತನವಾಗಿ ಪದಗ್ರಹಣಗೊಂಡ   ಕಾರ್ತಿಕ ಜ್ಯೋತಿಭಾ ಶಿಂದೆ ಯವರು  ಮಾತನಾಡಿ ಪ್ರಿಂಟ್ ಮತ್ತು ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ನಮ್ಮ ಒಕ್ಕೂಟದ  ಸದಸ್ಯತ್ವವನ್ನು ಪಡೆಯುವಂತೆ ಪ್ರೇರೇಪಿಸುವದರೊಂದಿಗೆ ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಮೂಲ ಸೌಕರ್ಯ ಸಿಗುವವರೆಗೆ ನಿರಂತರ ಹೋರಾಟ ಮಾಡಲು ಬಲ ತುಂಬಬೇಕಾಗಿದೆಯಂದು  ಹೇಳಿದರು.

ರಾಜ್ಯ ಪ್ರದಾನ ಕಾರ್ಯದರ್ಶಿ ಬಿ ಕೆ ಸೋದರ ಮಾತನಾಡಿ ಪ್ರಸ್ತುತ ದಿನದಲ್ಲಿ ಪ್ರಿಂಟ್ ಮಾದ್ಯಮಕ್ಕಿಂತ ಡಿಜಿಟಲ್ ಮಾಧ್ಯಮ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯುವದರೊಂದಿಗೆ ದೇಶಾದ್ಯಂತ ಅತಿ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.  ಡಿಜಿಟಲ್  ಮಾಧ್ಯಮದವರನ್ನು ಸರ್ಕಾರ ಕಡೆಗಣಿಸಿದ್ದು  ಅವರಿಗಾಗಿ ನಮ್ಮ ಒಕ್ಕೂಟದ ವತಿಯಿಂದ  ಅಧಿಕೃತ ಸದಸ್ಯತ್ವ ನೀಡುವದರೊಂದಿಗೆ ಸಾಮಾಜಿಕ ಹಾಗು ಆರ್ಥಿಕ  ಸವಲತ್ತುಗಳನ್ನು ಪಡೆಯಲು ಡಿಜಿಟಲ್  ಮಾಧ್ಯಮದವರ ಪರ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ  ಪತ್ರಕರ್ತರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಎಂ ಕೆ ನದಾಫ. ಮಾತನಾಡಿ ನಮ್ಮ ಸಂಘಟನೆಯನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಎಲ್ಲಾ  ತಾಲೂಕುಗಳಲ್ಲಿ ಒಕ್ಕೂಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವದರೊಂದಿಗೆ ಮುಂಬರುವ ಎರಡು ತಿಂಗಳವರೆಗೆ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದ್ದು ಅದಕ್ಕಾಗಿ ಜಿಲ್ಲಾಧ್ಯಕ್ಷರ ನಿಯುಕ್ತಿ ಶೀಘ್ರದಲ್ಲಿ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು. ಪದಗ್ರಹಣಗೊಂಡ ಧಾರವಾಡ ಜಿಲ್ಲಾಧ್ಯಕ್ಷ ಸತೀಶ ಮುರಗೋಡ  ಮಾತನಾಡಿ ತಾಲೂಕು ಮಟ್ಟದಿಂದ ಸಂಘಟನೆಯನ್ನು ಬಲಪಡಿಸಲು ಶ್ರಮಿಸುವದಾಗಿ ಭರವಸೆ ನೀಡಿದರು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಿ ಎಂ ಎಂ ನದಾಫ. ಮಾತನಾಡಿ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸುವದು ರಾಜ್ಯಾಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಮತ್ತು ನಾವೆಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡಲು ಪರಸ್ಪರ ಸಹಕಾರ ನೀಡುವದು ಅತಿ ಮುಖ್ಯವಾಗಿದೆ ಎಂದು ಪದಗ್ರಹಣ ಸಭೆಗೆ ಹಾಜರಾದ ಎಲ್ಲಾ  ಸದಸ್ಯರಿಗೆ ವಂದನೆಗಳನ್ನು ಸಲ್ಲಿಸಿದರು.  ನೂತನ ಸದಸ್ಯರಾಗಿ ಸಂತೋಷ ಬೀರ್ಜನ್ನವರ ಉಪಸ್ಥಿತರಿದ್ದರು. ಕರ್ನಾಟಕ ಪತ್ರಕರ್ತರ ಒಕ್ಕೂಟದ ಗೌರವ ಅಧ್ಯಕ್ಷರಾದ ಡಾ ಶಂಕರ ಸುಗತೆ ಮತ್ತು ರಾಜ್ಯಾಧ್ಯಕ್ಷರಾದ ಕಾರ್ತಿಕ ಶಿಂದೆ  ರಾಜ್ಯ ಉಪಾಧ್ಯಕ್ಷರಾದ ಎಂ ಕೆ ನದಾಫ.ರಾಜ್ಯ ಪ್ರದಾನ ಕಾರ್ಯದರ್ಶಿ ಬಿ.ಕೆ.ಸೋದರ.ಧಾರವಾಡ ಜಿಲ್ಲಾ ಅಧ್ಯಕ್ಷರಾದ ಸತೀಶ ಮುರಗೋಡ.ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ ಎಂ ನದಾಫ. ಸದಸ್ಯರಾಗಿ ಸಂತೋಷ ಬೀರ್ಜನ್ನವರರನ್ನು ಸನ್ಮಾನಿಸಿ ಗೌರವಿಸಲಾಯಿತು ಎಂದು ರಾಜ್ಯ ಪ್ರದಾನ ಕಾರ್ಯದರ್ಶಿ ಬಿ.ಕೆ.ಸೋದರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕಾಮೆಂಟ್‌ಗಳು