ಕಾದಂಬರಿ- ಸಂಚಿಕೆ -35

ನಿಜಶರಣ ಅಂಬಿಗರ ಚೌಡಯ್ಯನ ಕನ್ನಡ ಚಲನಚಿತ್ರ ಚಿತ್ರೀಕರಣದ ಮುಹೂರ್ತ

 ಸಿದ್ಧಾಶ್ರಮ ಎಂಟರ್‌ಪ್ರೈ ಸಸ್ ಮತ್ತು ಶ್ರೀ ಸಾಯಿ ಆರ್ಟ ವರ್ಲ್ಡ  ಪ್ರೋಡಕ್ಷನ್  ನಿರ್ಮಿಸುತ್ತಿರುವ "ಕ್ರಾಂತಿಯೋಗಿ ಅಂಬಿಗರ ಚೌಡಯ್ಯ" ಕನ್ನಡ ಚಲನಚಿತ್ರದ ಶುಭ ಮಹೂರ್ತವು  ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಶ್ರೀ ಸಿದ್ಧಾರೂಢಮಠ, ಹುಲ್ಲಂಬಿಯಲ್ಲಿ  ಫೆಬ್ರವರಿ ೧೪ ರಂದು ಸದರಿ  ಚಿತ್ರೀಕರಣದ ಮುಹೂರ್ತವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.  

 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ, ನರಸೀಪುರ ಮತ್ತು ಶ್ರೀ ಸಿದ್ಧಾರೂಢಮಠ, ಹುಲ್ಲಂಬಿಯ ಪೀಠಾಧ್ಯಕ್ಷರಾದ   ಜಗದ್ಗುರು ಶಾಂತಭೀಷ್ಮಚೌಡಯ್ಯಸ್ವಾಮೀಜಿ, ಮಾತನಾಡಿ ಈ ಚಲನಚಿತ್ರದ ಮೂಲಕ  ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶ ಜೀವನದ ನೈಜ ಘಟನೆಗಳು ಜನಸಾಮಾನ್ಯರಿಗೆ ತಲುಪುವಂತಾಗಲಿ ಎಂದು ಆಶೀರ್ವದಿಸಿದರು.  ಚಿತ್ರೀಕರಣಕ್ಕೆ  ಚಾಲನೆಯನ್ನು ನೀಡಿದ    ಕರ್ನಾಟಕ ಸರ್ಕಾರದ  ಮಾಜಿ ಸಚಿವರು ಹಾಗು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಕಾರ್ಯಾಧ್ಯಕ್ಷರಾದ  ಶ್ರೀ ಪ್ರಮೋದ ಮಧ್ವರಾಜ,  ಚಲನಚಿತ್ರದ ನಿರ್ಮಾಣ ಮತ್ತು ಬಿಡುಗಡೆಗೆ ಬೇಕಾಗುವ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡುವುದರೊಂದಿಗೆ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

 ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ಶ್ರೀ ಬಸವರಾಜ ಸಪ್ಪನಗೋಳ ಮಾತನಾಡಿ ಈ ಚಲನಚಿತ್ರ ಅದ್ದೂರಿಯಾಗಿ ನಿರ್ಮಾಣಗೊಳ್ಳಲು  ಗುರುಪೀಠದ ಕಾರ್ಯಾಧ್ಯಕ್ಷರಾದ  ಶ್ರೀ ಪ್ರಮೋದ ಮಧ್ವರಾಜರವರ ಸಹಾಯ ಅತ್ಯಾವಶ್ಯವಾಗಿದ್ದು ನಿರ್ಮಾಣದ  ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳಬೇಕೆಂದು  ಕೇಳಿಕೊಂಡರು. ಅತಿಥಿಗಳಾಗಿ ಆಗಮಿಸಿದ ವಿದ್ಯಾಮಂದಿರ ಅಕಾಡೆಮಿ ಗಂಗಾವತಿಯ ಸಂಸ್ಥಾಪಕ ನಿರ್ದೇಶಕರಾದ   ಶ್ರೀ ಈ. ಧನರಾಜ ರವರು ಮಾತನಾಡಿ ಚಲನಚಿತ್ರ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವದಾಗಿ ಭರವಸೆ ನೀಡಿದರು ಮತ್ತು ಈ ಕಾರ್ಯಕ್ರಮವನ್ನು ಬೆಂಗಳೂರಲ್ಲಿ ಆಯೋಜಿಸುವದಾಗಿ ಮಾಹಿತಿ ನೀಡಿದರು. ಚಿತ್ರದ ಕಥೆಯನ್ನು ಬರೆದು ಚಲನಚಿತ್ರದ ನಿರ್ಮಾಣ ಕಾರ್ಯದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸುತ್ತಿರುವ ಅಂತಾರಾಷ್ಟ್ರೀಯ ವಿದ್ವಾಂಸರಾದ ಹಾಗು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ   ಡಾ|| ಬಸವರಾಜ ಸಿದ್ಧಾಶ್ರಮರವರು ಮುಂದಿನ ಮೂರು ತಿಂಗಳಲ್ಲಿ ಚಿತ್ರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ೧೪, ಏಪ್ರಿಲ್   ೨೦೨೫ರಂದು ಧ್ವನಿಸುರುಳಿ ಮತ್ತು ಕಾರ್ಮಿಕ ದಿನಾಚರಣೆಯ ದಿನ ಅಂದರೆ ೦೧,ಮೇ ೨೦೨೫ರಂದು ರಾಜ್ಯಾದ್ಯಂತ  ಬಿಡುಗಡೆಗೊಳಿಸಲಾಗುವದೆಂದು ಭರವಸೆ ನೀಡಿದರು. ಅತಿಥಿಗಳಾಗಿ ಚಲನಚಿತ್ರದ ಸಂಭಾಷಣಾಕಾರರಾದ ಹಾಗು ಸಾಹಿತಿಗಳು ಮತ್ತು ರಂಗಕಲಾವಿರಾದ  ಶ್ರೀ ಎಸ್.ಎಸ್.ಚಿಕ್ಕಮಠ,  ಚಲನಚಿತ್ರದ ನಿರ್ದೇಶಕರಾದ  ಶ್ರೀ ಕಾರ್ತಿಕ ಜ್ಯೋತಿಭಾ ಶಿಂದೆ, ಸಂಗೀತ ನಿರ್ದೇಶಕರಾದ ಇ.ಆರ್.ವಿನಯ, ಚಿತ್ರೀಕರಣದ ವ್ಯವಸ್ಥಾಪಕರಾದ ಮನೋಜಕುಮಾರ ರಥ(ಮುಂಬೈ), ಛಾಯಗ್ರಾಹಕರಾದ  ಶ್ರೀ  ಹೇಮಂತ ಸಾಳ್ವೆ (ಮುಂಬೈ) ಹಾಗು  ನಾಯಕ ನಟರಾದ ಡಾ. ರಾಘವೇಂದ್ರ, ಖ್ಯಾತ ಕಲಾವಿದರಾದ ಶ್ರೀ  ಜಿ. ವ್ಹಿ. ಹಿರೇಮಠ,  ಶ್ರೀಮತಿ ಮೀರಾ ಅಜಗಾಂವ್ಕರ್ , ಮತ್ತು ಉತ್ತರ ಕರ್ನಾಟಕದ ಕಲಾವಿದರು ಉಪಸ್ಥಿತರಿದ್ದರು ಎಂದು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಮೆಂಟ್‌ಗಳು