ಆನ್
ದತ್ತಿ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಾವೇರಿ: ರಾಷ್ಟ್ರದ ಎಲ್ಲ ಹಿರಿಯ ನಾಗರಿಕರು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು ಹಾಗೂ ಆರ್ಥಿಕವಾಗಿ ದುರ್ಬಲರಾದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ ವೃದ್ಧಾಪ್ಯ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ನಾಗರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಡಳಿತ ಕಚೇರಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ, ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ, ಸಚಿವರನ್ನು ನೇಮಿಸಬೇಕು. ತಡೆ ಹಿಡಿದ ಹಿರಿಯ ನಾಗರಿಕರ ರೈಲ್ವೆ ಪ್ರಯಾಣ ರಿಯಾಯಿತಿಯನ್ನು ತಕ್ಷಣ ಆರಂಭಿಸಬೇಕು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಹಿರಿಯ ನಾಗರಿಕರ ಸಮಿತಿ ರಚಿಸಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಾಲು, ಚಿಕಿತ್ಸಾ ವಿಭಾಗ ಹೊಂದಿರಬೇಕು ಎಂದರು.
ಸಂಘದ ಅಧ್ಯಕ್ಷ ಈರಣ್ಣ ಬೆಳವಡಿ ಮಾತನಾಡಿ, ಎಲ್ಲ ಹಿರಿಯ ನಾಗರಿಕರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ನೀಡಬೇಕು. ಹಿರಿಯ ನಾಗರಿಕರ ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಕಾರ್ಡ್ ಕರ್ನಾಟಕ ರಾಜ್ಯದಲ್ಲಿ ನಿಷ್ಕಿçಯವಾಗಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು. ಹಿರಿಯ ನಾಗರಿಕರ ಮಾಸಿಕ ವೃದ್ಧಾಪ್ಯ ವೇತನ ಆದಾಯ ಮಿತಿಯನ್ನು ಹೆಚ್ಚಿಸಬೇಕು. ಹಿರಿಯ ನಾಗರಿಕರಾದ ನಿವೃತ್ತ ಸರ್ಕಾರಿ ನೌಕರರ ೭ನೇ ವೇತನ ಆಯೋಗದ ವರದಿಯ ೨ನೇ ಭಾಗವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದರು. ಸಂಘದ ಕಾರ್ಯದರ್ಶಿ ನಾಗರಾಜ ಇಚ್ಚಂಗಿ, ಉಪಾಧ್ಯಕ್ಷ ಶಿವಬಸಪ್ಪ ಗೋವಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಎಸ್.ಎಲ್.ಕಾಡದೇವರಮಠ, ಚಂದ್ರಶೇಖರ ಮಾಳಗಿ, ಎನ್.ಬಿ. ಕಾಳೆ, ಜಿ.ಕೆ.ಹಿತ್ತಲಮನಿ, ಸಿದ್ದರಾಜ ಕಲಕೋಟಿ, ಬಿ.ಸಿ. ಹಿರೇಮಠ, ಸುರೇಶ ಕಾಳೆ, ಹನುಮಂತಗೌಡ ಗೊಲ್ಲರ, ಅಮೃತಮ್ಮ ಶೀಲವಂತರ, ದಾಕ್ಷಾಯಣಿ ಗಾಣಗೇರ, ಅಕ್ಕಮಹಾದೇವಿ ಹಾನಗಲ್ಲ, ರಾಜೇಂದ್ರ ಹೆಗಡೆ, ಮರ್ದಾನಸಾಬ ಕೋಟಣ್ಣನವರ, ಎಸ್.ಎನ್.ಕಾಳಿ, ವಿ.ಎನ್.ಪಾಟೀಲ ಇದ್ದರು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ