ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪತ್ರಿಕೋದ್ಯಮ ಶಿಕ್ಷಣ ಉಳಿಸಲು ಮನವಿ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪತ್ರಿಕೋದ್ಯಮ ವಿಭಾಗಗಳು ತಮ್ಮ ಅಳಿವು ಉಳಿವಿನ ಮದ್ಯೆ ಹೋರಾಟ ಮಾಡುತ್ತಿದ್ದು, ರಾಜ್ಯ ಸರ್ಕಾರ ಸಮೂಹ ಮಾಧ್ಯಮಗಳ ಶಿಕ್ಷಣವನ್ನು ಹತ್ತಿಕ್ಕುವ ನೀತಿ ಅನುಸರಿಸತ್ತಿದೆ ಎಂದು ಪತ್ರಿಕೋದ್ಯಮ ವಿಷಯ ಬೋಧಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಪತ್ರಿಕಾ ಪ್ರಕಟನೆಯ ಮೂಲಕ ಈ ವಿಷಯ ಹಂಚಿಕೊಂಡ ಅವರು, ಕೆಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೆ ಅಸ್ಥಿತ್ವದಲ್ಲಿರುವ ಪತ್ರಿಕೋದ್ಯಮ ವಿಭಾಗಗಳನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಇನ್ನೂ ಕೆಲವು ಕಾಲೇಜುಗಳಲ್ಲಿ ಮುಚ್ಚಲು ಆಯಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಕೆಲವು ಹಿರಿಯ ಪ್ರಾಧ್ಯಾಪಕರು ನಿರ್ಧರಿಸಿದ್ದಾರೆ. ಇದಕ್ಕೆಂದೆ ಆಯಾ ಕಾಲೇಜುಗಳಲ್ಲಿ ಸಮಿತಯೊಂದನ್ನು ನೇಮಿಸುತ್ತಿದ್ದಾರೆ. ಕಳೆದ ೫-೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಪತ್ರಿಕೋದ್ಯಮ ಅತಿಥಿ ಉಪನ್ಯಾಸಕರುಗಳಿಗೆ ವರ್ಕಲೋಡ್ ಕಡಿಮೆಗೊಳಿಸಿ, ಅರೆಕಾಲಿಕ ವೃತ್ತಿಯ ಬದುಕು ಅತಂತ್ರವಾಗಿಸಿ, ಬೀದಿ ಪಾಲಾಗಿಸುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ತಮ್ಮ ಗೋಳನ್ನು ಹಂಚಿಕೊಂಡಿದ್ದಾರೆ. 

೨೦೧೮-೧೯ರಲ್ಲಿ ರಾಜ್ಯದ ೮೦ರಷ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪತ್ರಿಕೋದ್ಯಮ ವಿಷಯವನ್ನುಬೋಧಿಸಲಾಗುತ್ತಿತ್ತು. ಪ್ರತಿ ಕೌನ್ಸಿಲಿಂಗ್‌ನಲ್ಲಿ ನೂರಕ್ಕೂ ಹೆಚ್ಚು ಪತ್ರಿಕೋದ್ಯಮ ಅತಿಥಿ ಉಪನ್ಯಾಸಕರು ನೇಮಕವಾಗುತ್ತಿದ್ದರು. ಈಗದು ೩೭ ಕಾಲೇಜುಗಳಿಗೆ ಕಡಿತಗೊಂಡಿದ್ದು, ೨೦೨೫ರ ಕೌನ್ಸಿಲಿಂಗ್‌ನಲ್ಲಿ ಕೆವಲ ೩೫ ಕಾಲೇಜುಗಳಲ್ಲಿ ಮಾತ್ರ ಪತ್ರಿಕೋದ್ಯಮ ಶಿಕ್ಷಣ ಉಳಿಯಲಿದೆ. ೨೦೨೪ರಲ್ಲಿ ಪ್ರಕಟಿಸಿದ ಪತ್ರಿಕೋದ್ಯಮದ ೬೫ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ ೪೫ ಅತಿಥಿ ಉಪನ್ಯಾಸಕರು ಮಾತ್ರ ಅವಕಾಶ ಪಡೆದಿದ್ಧಾರೆ. ಹೀಗೆ ಮುಂದುವರೆದರೆ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳು ಮುಚ್ಚಿ ಹೊಗುವ ಭೀತಿ ಕಾಡುತ್ತಿದೆ. ಅಲ್ಲದೆ ಕಳೆದ ಹತ್ತೆಂಟು ವರ್ಷಗಳಿಂದ ಸೇವೆ ಗೈಯುತ್ತಿರುವ ಯುಜಿಸಿ ಅರ್ಹತೆ ಹೊಂದಿರುವ ಪತ್ರಿಕೋದ್ಯಮ ಅತಿಥಿ ಉಪನ್ಯಾಸಕರುಗಳು ನಿರುಧ್ಯೋಗದಿಂದ ಬೀದಿ ಪಾಲಾಗುವ ಆತಂಕ ಕಾಡುತ್ತಿದೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಯ ಕುರಿತು ಆಯಾ ಕಾಲೇಜಿನ ಪ್ರಾಂಶುಪಾಲರು ಮತ್ತು ಹಿರಿಯ ಪ್ರಾಧ್ಯಾಪಕರುಗಳೊಂದಿಗೆ ಚರ್ಚಿಸಿದಾಗ

ಅವರು ಕೊಡುವ ಕಾರಣಗಳೆಂದರೆ ಪತ್ರಿಕೊದ್ಯಮ ವಿಭಾಗಗಳಲ್ಲಿ ಪರ್ಮನೆಂಟ್ ಫ್ಯಾಕಲ್ಟಿ ಇಲ್ಲ. ಕೇವಲ ಅತಿಥಿ ಉಪನ್ಯಾಸಕರಿದ್ದಾರೆ, ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ರೆ ಉಧ್ಯೋಗ ಅವಕಾಶಗಳಿಲ್ಲ, ಎಲ್ಲರೂ ಬೆಂಗಳೂರು ಮೆಡಿಯಾ ಇಂಡಸ್ಟ್ರೀಗೆ ಹೋಗಬೇಕು, ಪತ್ರಿಕೋದ್ಯಮ ವಿಷಯವು ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗಲ್ಲ, ಬಿ. ಎಡ್ ಪ್ರವೇಶಕ್ಕೂ ಅಸಾಧ್ಯ

ಹಾಗೂ ಯಾವುದೇ ಸರ್ಕಾರಿ ಉಧ್ಯೋಗ ಅವಕಾಶಗಳಿರುವುದಿಲ್ಲ ಎಂದೆಲ್ಲ ನಕರಾತ್ಮಕ ಸಂಗತಿಗಳನ್ನು ಪ್ರವೇಶ ಪಡೆಯಲು ಬಂದ ಕಲಿಕಾರ್ಥಿಗಳಿಗೆ ಹೇಳಿ ಅಪಪ್ರಚಾರಗೊಳಿಸುತ್ತಿದ್ದಾರೆ. ಅಲ್ಲದೆ ಪತ್ರಿಕೋದ್ಯಮ ವಿಷಯ ನಿರಾಕರಿಸುವಂತೆ ಮಾಡಿ

ಆಯ್ದುಕೊಳ್ಳದಂತೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಾಲೇಜುಗಳಲ್ಲಿ ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧ ಇರದ ಹಾಗೂ ಹೊಂದಾಣಿಕೆ ಇಲ್ಲದ ವಿಷಯಗಳೊಂದಿಗೆ ಕಾಂಬಿನೇಷನ್ ಕೊಟ್ಟು ಕಲಿಕಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಪಡಿಸಿದ್ದಾರೆ ಎಂದುಪತ್ರಿಕೋದ್ಯಮ ವಿಷಯ ಬೋಧಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಾಮೆಂಟ್‌ಗಳು