ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ಗಂಡುಮೆಟ್ಟಿನ ನಾಡಿನಲ್ಲಿ ಜಾನಪದ ಕಲೆಯ ಜೊತೆಗೆ ಬಸವಣ್ಣನವರ ಆದರ್ಶಗಳನ್ನು ಪಾಲಿಸೋಣ: ಎನ್.ಎಚ್ ಕೊನರಡ್ಡಿ

ನಾಟ್ಯ ಸ್ಪೂರ್ತಿ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ದ ವತಿಯಿಂದ ದಿನಾಂಕ ೧೫.೦೬.೨೦೨೫ ರಂದು “ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿ” ಧಾರವಾಡದ ಆಲೂರ ವೆಂಕಟರಾವ್ ಸಭಾಭವನದಲ್ಲಿ ರವಿವಾರ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಎನ್.ಎಚ್ ಕೊನರಡ್ಡಿ “ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿ” ೨೦೨೫ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಜಗಜ್ಯೋತಿ ಬಸವಣ್ಣನವರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶ ಹಾಗೂ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು ಅವರು ಬರೆದ ಪ್ರತಿಯೊಂದು ವಚನಗಳಲ್ಲಿ ವಿಶೇಷವಾದ ಅರ್ಥವನ್ನು ನೀಡುವ ವಚನಗಳಲ್ಲಿ ಶಕ್ತಿಯಿದೆ ಅವುಗಳನ್ನು ನಾವೆಲ್ಲರೂ ಸದೈವ ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ ಅಲ್ಲದೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮೆಟ್ಟಿ ನಿಲ್ಲುವಂತAಹ ಶಕ್ತಿ ಜಾನಪದ ಕಲೆಗೆ ಮಾತ್ರ ಇದೆ ಯುವಕರಲ್ಲಿ ಜಾನಪದದ ಕುರಿತು ತಿಳುವಳಿಕೆ ಮತ್ತು ಅದರ ಪ್ರಾಯೋಗಿಕ ತರಬೇತಿಯ ಅವಶ್ಯಕತೆ ಇದೆ ಆದರೆ ಇಂದು ಇಡೀ ಕರ್ನಾಟಕದಲ್ಲಿ ಜಾನಪದ ಕಲೆ ಉಳಿದಿದ್ದು ಮಾತ್ರ ಉತ್ತರ ಕರ್ನಾಟಕದಲ್ಲಿ ಮಾತ್ರ ಇಂದು ಜಾನಪದ ಸಂಸ್ಕೃತಿಯ ಉಳಿವಿನ ಕಾರ್ಯದ ಜತೆಯಲ್ಲಿಯೆ ಸಾಮಾಜಿಕ ಕಾರ್ಯವನ್ನು ಸಹ ರೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಬಸವರಾಜ ದೇವರು ಮಾತನಾಡುತ್ತಾ ಇಂದಿನ ದಿನದಲ್ಲಿ ಆಧುನಿಕತೆಯ ಪ್ರಭಾವವು ನಮ್ಮನೆ ನಾವು ಮರೆತುಕೊಳ್ಳುವಷ್ಠರ ಮಟ್ಟಿಗೆ ಹಾಸುಹೊಕ್ಕಾಗಿದೆ. ಹಾಗಾಗಿ ಅದನ್ನು ಅವಶ್ಯಕೆಗೆ ತಕ್ಕಷ್ಟು ಮಾತ್ರ ಬಳಸಿಕೊಳ್ಳಬೇಕು. ಪಾಲಕರು ತಮ್ಮ ಪ್ರತಿಷ್ಠೀತಗೆ ಮಕ್ಕಳನ್ನು ಬೆಳೆಸಿಕೊಳ್ಳುವುದು ನಮ್ಮ ಈ ಗಂಡು ಮೆಟ್ಟಿನ ನಾಡಿನಲ್ಲಿ ಜಾನಪದದ ಝೇಂಕಾರವನ್ನು ಎತ್ತಿ ಹಿಡಿಯಬೇಕು ಅಲ್ಲದೆ ಬಸವಣ್ಣನವರ ಆದರ್ಶ ಹಾಗೂ ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ನಾವೇಲ್ಲರೂ ಅಳವಡಿಸಿಕೊಂಡು ಬೆಳೆಯಬೇಕು ಎಂದರು, ಅದರಂತೆ ಪ್ರತಿಯೊಬ್ಬರಲ್ಲಿಯೂ ಹುಟ್ಟಿನಿಂದ ಒಂದು ಪ್ರತಿಭೆ ಇರುತ್ತದೆ ಆ ಅಸಾಧರಣ ಪ್ರತಿಭೆಯನ್ನು ಹೊರಹಾಕೊಣ ಮಕ್ಕಳಲ್ಲಿ ಜಾನಪದ ಕಲೆಯನ್ನು ತಿಳಿಹೇಳಿ ಕಲೆಯನ್ನು ಬೆಳೆಸಿ ಎಂದರು. ಇಂತಹ ಸಂದರ್ಭದಲ್ಲಿ ನಾಟ್ಯ ಸ್ಪೂರ್ತಿ ಆರ್ಟ ಆಂಡ್ಯ ಕಲ್ಚರಲ್ ಅಕಾಡೆಮಿ ಸುಮಾರು ಮೂವತ್ತು ವರ್ಷಗಳಿಂದ ತನ್ನ ಕಾರ್ಯವನ್ನು ಮಾಡುತ್ತಾ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಮಾಜಿ ಶಾಸಕರಾದ ಸೀಮಾ ಮಸೂತಿ ಮಾತನಾಡಿ ಈ ಕಾರ್ಯಕ್ರಮ ವೈಶಿಷ್ಠತೆಯನ್ನು ಹೊಂದಿದ್ದು ಜಗಜ್ಯೋತಿ ಬಸವಣ್ಣನವರ ಆದರ್ಶಗಳು ಇಂದಿಗೂ ನಮಗೆ ಪ್ರೇರಣೆಯಾಗಿವೆ ಅದರಂತೆ ಪ್ರತಿಯೊಬ್ಬರು ಜೀವನದಲ್ಲಿ ಬಸವಣ್ಣನವರ ವಚನಗಳನ್ನು ಕೇಳುವುದಾಗಲಿ ಅವುಗಳನ್ನು ನಿರಂತರವಾಗಿ ರೂಢಿಸಿಕೊಂಡಲ್ಲಿ ಜೀವನದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬಹುದು ಮತ್ತು ಇಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ತೊಡಗಿಸಿಕೊಂಡು ಸಾಧನೆಗೈಯುವುದು ವಿಶೇಷವೆಂದರು. 

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಮಾತನಾಡಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾತಂಡಗಳಿಗೆ ನೀಡಬೇಕಾದ ಅನುದಾನ ಸೂಕ್ತವಾದ ತಂಡಗಳಿಗೆ ನೀಡಬೇಕಾಗಿದ್ದು ಅವಶ್ಯಕವಾಗಿದ್ದು ಪ್ರತಿಷ್ಠೀತ ತಂಡಗಳು ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ಬಸವಣ್ಣನವರ ಧೈಯ ಹಾಗೂ ಅವರ ಆದರ್ಶವಾದ ವಚನಗಳನ್ನು ಕೇಳಿದರೆ ಮನಸ್ಸಿಗೆ ಮುದನೀಡುವಂತಾಗಿದ್ದು, ಅವುಗಳನ್ನು ಪಠಿಸುವುದರಿಂದ ನಿಜವಾಗಿಯೂ ಮನುಷ್ಯ ಉತ್ತುಂಗಕ್ಕೆ ಸಾಗುವುದಲ್ಲದೆ ಉತ್ತಮ ಪ್ರಜೆಯಾಗಿ ಜನಮನ್ನಣೆ ಪಡೆಯಬಹುದಾಗಿದೆ. ಇದಕ್ಕೆ ಇಂತAಹ ತಂಡಗಳು ಸತತ ಪ್ರಯತ್ನ ಮಾಡುತ್ತಿದ್ದು ಸ್ತುತ್ಯಾರ್ಹವೆಂದು ನುಡಿದರು. 

ವೇದಿಕೆಯ ಮೇಲೆ ಮಲ್ಲಪ್ಪ ಹೊಂಗಲ, ಡಾ.ಚನ್ನಬಸಯ್ಯಾಸ್ವಾಮಿ ಹಿರೇಮಠ, ಇಮಾಮಸಾಬ ವಲ್ಲೇಪ್ಪನವರ, ಮಹಾಂತೇಶ ಮೇಣಸಿನಕಾಯಿ ಹಾಗೂ ನಾಟ್ಯ ಸ್ಪೂರ್ತಿ ಆರ್ಟ ಆಂಡ್ ಕಲ್ಚರಲ್ ಅಕಾಡೆಮಿ (ರಿ), ಧಾರವಾಡ ಅಧ್ಯಕ್ಷರಾದ ಸದಾನಂದ ಬಂಗೆಣ್ಣನವರ ಉಪಸ್ಥಿತರಿದ್ದರು. 

ಶಿವಾನಂದ ಸವಸುದ್ಧಿ ಕಾರ್ಯಕ್ರಮ ನಿರೂಪಿಸಿದರು. ಡಾ. ಭಿಮಾಶಂಕರ ಅಜನಾಳ ಸ್ವಾಗತಿಸಿ ಶೈಲಜಾ ಬಂಗೆಣ್ಣನವರ ವಂದಿಸಿದರು. ಮಂಜುನಾಥ ಕಾದ್ರೋಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ “ ರಾಜ್ಯಮಟ್ಟದ ಬಸವಶ್ರೀ” ಪ್ರಶಸ್ತಿಯನ್ನು ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.

ನಂತರ  ನಾಟ್ಯ ಸ್ಪೂರ್ತಿ ಆರ್ಟ ಆಂಡ್ ಕಲ್ಚರಲ್ ಅಕಾಡೆಮಿ ತಂಡ ಸೇರಿದಂತೆ ಅನೇಕ ವಿವಿಧ ತಂಡಗಳು ವಿವಿಧ ಜಾನಪದ ನೃತ್ಯಗಳು, ಡೊಳ್ಳುಕುಣಿತ, ವೀರಗಾಸೆ, ದಾಲಪಟ, ಜಗ್ಗಲಗಿ, ಹಾಸ್ಯ ಕಾರ್ಯಕ್ರಮ, ಲಮಾಣಿ ನೃತ್ಯ ತಬಲಾವಾದನ, ಭರತನಾಟ್ಯ, ಸೋಬಾನ ಪದ, ದೇಶಭಕ್ತಿ ಗೀತೆ, ಬಂಜಾರ ನೃತ್ಯ, ರಣಹಲಗಿ ಚೌಡಕಿ ಪದ, ಕನ್ನಡ ನಾಡಗೀತೆ, ಗುಜರಾತಿ ನೃತ್ಯ, ಕಥಕ ನೃತ್ಯ, ಭಾವೈಕ್ಯತಾ ಗೀತೆ ಜರುಗಿದವು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಮೆಂಟ್‌ಗಳು