ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ನೈಸ್ ಅಕಾಡೆಮಿಯಲ್ಲಿ ಜರುಗಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

 ಹಾವೇರಿ: ಸಾಮಾಜಿಕ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗುತ್ತಿರುವ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಜೀವನದ ಪಾಠ ಕಲಿಸುವ ಸಂಕಲ್ಪ ನೈಸ್ ಅಕಾಡೆಮಿ ಹೊಂದಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಿಂಗರಾಜು ಸುಳ್ಳಳ್ಳಿ ಹೇಳಿದರು.

ನಗರದ ನೈಸ್ ಅಕಾಡೆಮಿಯಲ್ಲಿ ಜರುಗಿದ ಎರಡು ತಿಂಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕವಾಗಿ ಮಹತ್ತರ ಬದಲಾವಣೆಗಳಾಗುತ್ತಿವೆ. ಮಕ್ಕಳು ಮತ್ತು ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಓದು ಬರಹ ಜೊತೆಗೆ ಶಿಸ್ತಿಗೆ ಆದ್ಯತೆ ನೀಡಿದೆವು. ನಮ್ಮ ಹಾವೇರಿ ಜಿಲ್ಲೆಯ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ಸಜ್ಜುಗೊಳ್ಳಬೇಕು. ಈ ಕಾಳಜಿಯಿಂದ ಕಳೆದ ಆರು ವರ್ಷಗಳಿಂದ ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದರು.

 ನ್ಯಾಯವಾದಿ ಐ.ವಿ.ಪಾಟೀಲ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣಕ್ಕೆ ಒತ್ತು ನೀಡಬೇಕು. ಶೈಕ್ಷಣಿಕ ಬದುಕು ಸುಧಾರಿಸಿಕೊಳ್ಳಲು ಇದೊಂದು ಮಹತ್ವದ ಘಟ್ಟ. ಅಭ್ಯಾಸಕ್ಕೆ ಸಂಬಂಧಿಸಿದಂತೆ ಗಮನ  ಕೊಡಬೇಕು ಎಂದರು.

 ಶಿಕ್ಷಕ ಶೇಖರ ದೊಡ್ಡಮನಿ ಮತ್ತು ಪಾಲಕರಾದ ಮಾಲತೇಶ, ಸುಮಿತ್ರಾ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಎರಡು ತಿಂಗಳು ವಿವಿಧ ವಿಷಯ ಬೋಧಿಸಿದ ಅತಿಥಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು.

ಪ್ರಿಯಾ ಸುಳ್ಳಳ್ಳಿ, ಸಂತೋಷ ಮಾಡೊಳ್ಳಿ, ಫಕ್ಕೀರೇಶ ಬಾರ್ಕಿ, ರಘು ಜವಳಗಿ, ಅಕ್ಷತಾ ಬಳ್ಳಿ ಉಪಸ್ಥಿತರಿದ್ದರು.ಬೃಂದಾ ಸ್ವಾಗತಿಸಿದರು. ಅಶ್ವಿನಿ ಮೈಲಾರಿ ನಿರೂಪಿಸಿದರು. ನಿಖಿಲ್ ರೆಡ್ಡಿ ವಂದಿಸಿದರು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು