ಕಾದಂಬರಿ- ಸಂಚಿಕೆ -35

‘ಬರ‍್ತೀಯೇನ ಗೆಳತಿ’ ವರ್ತಮಾನಕ್ಕೆ ಸ್ಪಂದಿಸುವ ಕಾವ್ಯ ; ಡಾ. ಹೇಮಾ ಪಟ್ಟಣಶೆಟ್ಟಿ.

ಆದುನಿಕ ಜಗತ್ತಿನ ವರ್ತಮಾನಕ್ಕೆ ಸ್ಪಂದಿಸುವ ನೆಲೆಯಲ್ಲಿ ಕಾವ್ಯವನ್ನು ಕಟ್ಟಿ ಕೊಟ್ಟಿದ್ದಾರೆ ವಿದ್ಯಾ ಡಿ. ಕದಂ ಅವರು ತಮ್ಮ ಚೊಚ್ಚಲ ಕೃತಿ ‘ಬರ‍್ತೀಯೇನ ಗೆಳತಿ’ ಮೂಲಕ, ಎಂದು ಹಿರಿಯ ಲೇಖಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ಹೇಳಿದ್ದಾರೆ. 


ಕೃತಿಯನ್ನು ಜನಾರ್ಪಣೆ ಮಾಡುತ್ತಾ ಇಲ್ಲಿ ಹೆಣ್ಣೊಬ್ಬಳು ಉದ್ಯೋಗಸ್ಥೆಯಾಗಿ, ಗೃಹಣಿಯಾಗಿ, ಮಕ್ಕಳ ತಾಯಿಯಾಗಿ, ಗೆಳತಿಯಾಗಿ, ಆಧುನಿಕ ಬದುಕಿನ ಆಗುಹೋಗುಗಳಿಗೆ ಸ್ಪಂದಿಸುವ ಹೆಣ್ಣಾಗಿ ಕಾವ್ಯದ ಮೂಲಕ ತನ್ನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಿದ್ದಾರೆಂದು ತಿಳಿಸಿದರು. ನಗರದ ದಿ ಇನ್‌ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ ಸಭಾಂಗಣದಲ್ಲಿ ಜರುಗಿದ ಕವನ ಸಂಕಲನ ಜನಾರ್ಪಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕರಾದ ಡಾ. ಸಂಜೀವ ಕುಲಕರ್ಣಿ ಅವರು ವಹಿಸಿದ್ದರು. ಅವರು ಮಾತನಾಡುತ್ತಾ, ವೃತ್ತಿ ಹಾಗೂ ಪ್ರವೃತ್ತಿ ನೆಲೆಯಲ್ಲಿ ಕವಯಿತ್ರಿಯೊಬ್ಬಳ ಭಾವನಾ ಸಂಬಂಧ ತುಡಿತಗಳು ಇಲ್ಲಿ ಕಾವ್ಯದ ಮೂಲಕ ರೂಪವನ್ನು ಪಡೆದಿದೆ ಎಂದರು. ಮುಂದಿನ ದಿನಗಳಲ್ಲಿ ಉತ್ತಮ ಕವಯಿತ್ರಿಯಾಗಿ ವಿದ್ಯಾ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. 

ವೇದಿಕೆಯಲ್ಲಿನ ಇತಿಹಾಸತಜ್ಞ ಡಾ. ಲಕ್ಷ್ಮಣ ತೆಲಗಾವಿ ಅವರು ಕದಂ ಕುಟುಂಬದಲ್ಲಿ ಹೊಸ ಲೇಖಕಿಯೊಬ್ಬಳು ರೂಪುಗೊಳ್ಳುವ ಮೂಲಕ ಮನೆತನವನ್ನು ಸ್ಥಾಯಿಗೊಳಿಸುವ ಕೆಲಸವನ್ನು ವಿದ್ಯಾ ಮಾಡಿದ್ದಾಳೆಂದು ಅಭಿಪ್ರಾಯಿಸಿದರು. ಪ್ರಸ್ತುತ ಸ್ಥಿತಿಯನ್ನು ಅನಾವರಣಗೊಳಿಸುವ ಯತ್ನದಲ್ಲಿ ಇಲ್ಲಿಯ ಕವಿತೆಗಳು ಮಾಡಿದ್ದು, ಸಹಜ ಸಂವೇದನೆಯ ಮೂಲಕ ಜೀವನ ಪ್ರೀತಿಯನ್ನು ಅಭಿವ್ಯಕ್ತಿಸುವ ಗುಣವಿಶೇಷಗಳಿಂದ ಕೂಡಿದೆ ಎಂದರು. ಕರ್ನಾಟಕ ಇತಿಹಾಸ ಅಕಾದೆಮಿ ಪ್ರಧಾನ ಕಾರ್ಯದರ್ಶಿ ಶ್ರೀ. ಕೆ.ಎಲ್. ರಾಜಶೇಖರ್ ಅವರು ಮಾತನಾಡುತ್ತಾ ‘ಬರ‍್ತೀಯೇನ ಗೆಳತಿ’ ಓದುಗರನ್ನು ಧ್ವನಿಪೂರ್ಣವಾಗಿ ಆಕರ್ಷಿಸುವ ಗುಣವನ್ನು ಇಲ್ಲಿಯ ಕವಿತೆಗಳಲ್ಲಿ ಒಡಮೂಡಿದ್ದು ಪ್ರಸ್ತುತ ಕಾಲಮಾನಕ್ಕೆ ಬೇಕಾದ ಪರಿಪ್ರೇಕ್ಷö್ಯವನ್ನು ಕಟ್ಟುವ ಮೂಲಕ ತಾನೋರ್ವ ಕವಯಿತ್ರಿಯೆಂಬುದನ್ನು ಪುರಾವೀಕರಿಸಿದ್ದಾರೆಂದು ಅಭಿಪ್ರಾಯಿಸಿದರು. ಲೇಖಕಿ ವಿದ್ಯಾ ಡಿ. ಕದಂ ಮಾತನಾಡುತ್ತಾ ಕಳೆದ ಮುವತ್ತು ವರುಷಗಳ ಜೀವನಾನುಭವದ ಕೆಲ ಸಂಗತಿಗಳಿಗೆ ಕಾವ್ಯದ ಸಾಲುಗಳನ್ನು ಕಟ್ಟಿಕೊಡಲು ಯತ್ನಿಸಿದ್ದೇನೆಂದು ಹೇಳುವುದರ ಮೂಲಕ ಕೃತಿಯ ಹಿಂದಿನ ಶ್ರಮಕ್ಕೆ ಸಹಕರಿಸಿದವರನ್ನು ವೇದಿಕೆ ಮೂಲಕ ಸ್ಮರಿಸಿದರು. ಶ್ರೀಮತಿ ಅನುಪಮಾ ಭಂಡಾರಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಜನಾರ್ಪಣೆ ಕಾರ್ಯಕ್ರಮದ ಗಣ್ಯರನ್ನು ಡಾ.ಎನ್.ಎಸ್. ಮಹಾಂತೇಶ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ್ಲಲಿ ಸಾಧನೆ ಮಾಡಿದ ಐದು ಜನ ಸಾಧಕರಾದ ಡಾ. ವಿಠಲ್ ಐ. ಬೆಣಗಿ. ಶ್ರೀ. ರಾಜಶೇಖರ ಜಿ. ಪಾಟೀಲ. ಶ್ರೀ. ಶಿವಪುತ್ರ ಎಮ್ ಹೊನ್ನಳ್ಳಿ, ಶ್ರೀ. ಸಿದ್ಧರಾಮ ಹಿಪ್ಪರಗಿ, ಶ್ರೀ.ವಿಜಯೀಂದ್ರ ಅರ್ಚಕ ಅವರಿಗೆ ಗೌರವಾರ್ಪಣೆ ಮೂಲಕ ಸನ್ಮಾನಿಸಲಾಯಿತು. ರವಿದಾಸ ಪ್ರಕಾಶನದ ಪರವಾಗಿ ಶ್ರೀಮತಿ ಗಂಗಮ್ಮ ಸುರೇಶ್ ಭಂಡಾರಿ ಅವರು ಈ ಕಾರ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಆಕಾಶವಾಣಿ ಸುದ್ಧಿ ಓದುಗರಾದ, ಶ್ರೀಮತಿ ಆರತಿ ದೇವಶಿಖಾಮಣಿ ಅವರು ನೆರವೇರಿಸಿದರು. ಎಂದು ತಮ್ಮ ಪ್ರಲ್ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕಾಮೆಂಟ್‌ಗಳು