- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಹಾಗೂ ಸಮುದಾಯ ಧಾರವಾಡ ರಿ. ಆಶ್ರಯದಲ್ಲಿ ಮಾರ್ಚ ೮ರಂದು ಜರುಗಿದ ದಿ. ಸುಮಿತ್ರ ಬಿ ಈಳಿಗೇರ ದತ್ತಿ ಕಾರ್ಯಕ್ರಮ ನಡೆಯಿತು. ವಿಶೇಷ ಉಪನ್ಯಾಸ ನೀಡಿದ ಕಾನೂನು ಸಲಹೆಗಾರರು ಹಾಗೂ ಮಕ್ಕಳ ರಕ್ಷಣಾ ಘಟಕ ಧಾರವಾಡ ಶ್ರೀಮತಿ ನೂರಜಹಾನಬೇಗಂ ಕಿಲ್ಲೇದಾರ ಮಾತನಾಡುತ್ತಾ ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ನೆಮ್ಮದಿ ಹಾಗೂ ಸ್ವಾತಂತ್ರ‍್ಯ ಸ್ವಾವಲಂಬನೆ ಜೀವನ ಸಾಗಿಸಿದರೆ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣವಾಗುತ್ತದೆ.
ಈ ಸಮಾಜದಲ್ಲಿ ಅವಳು ಸಬಲೆಯಾಗದೆ ಇನ್ನೂ ಅಬಲೆಯಾಗಿಯೇ ಉಳಿದಿದ್ದಾಳೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ಅವಳ ರಕ್ಷಣೆಗೋಸ್ಕರ ಸಂವಿಧಾನ ಹಾಗೂ ಕಾನೂನುಗಳ ಅರಿವು ಕುರಿತು ಸಷ್ಠವಾಗಿ ಮಾತನಾಡಿದರು. ಬಾಲ್ಯ ವಿವಾಹ, ವರದಕ್ಷಣೆ ಕಿರುಕುಳ, ಮಕ್ಕಳ ಸಂರಕ್ಷಣೆ ಹಾಗೂ ಬೆಳವಣಿಗೆ ಕುರಿತು ಮಾರ್ಮಿಕ ಮಾತುಗಳಿಂದ ಮಾಹಿತಿ ನೀಡಿದರು ಹಾಗೂ ಎಚ್ಚರಿಸಿದರು.
ಪ್ರಸ್ತಾವಿಕವಾಗಿ ಸಮುದಾಯ ಧಾರವಾಡ ಘಟಕದ ಅಧ್ಯಕ್ಷರಾದ ಬಿ. ಐ. ಈಳಿಗೇರ ಹಾಗೂ ದತ್ತಿ ದಾನಿಗಳು ಮಾತನಾಡಿದರು ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಲಿಂಗರಾಜ್ ಅಂಗಡಿ ಅವರು ಧಾರವಾಡದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗಳು ಎಲ್ಲ ಕಡೆ ನಡೆಯುತ್ತಿದ್ದರು ತುಂಬಿದ ಸಬಾಭವನದಲ್ಲಿ ಸಮುದಾಯ ಗೆಳೆಯರು ದತ್ತಿ ಕಾರ್ಯಕ್ರಮ ಮಾದರಿ ರೀತಿಯಲ್ಲಿ ಆಚರಿಸುತ್ತಿದ್ದು ಹೆಮ್ಮೆಯ ವಿಷಯ. ಅಪರೂಪದ ಅತಿಥಿಗಳನ್ನು ಕರೆದು ಸಮಾಜಕ್ಕೆ ಸಂದೇಶ ಕೊಡುವಂತ ರೀತಿಯಲಿ, ಕೆಲಸ ಮಾಡುತ್ತಿರುವುದು ಸ್ಲ್ಯಾಗಣಿಯ ಎಂದರು. ವೇದಿಕೆ ಮೇಲೆ ಡಾ. ಶಿವಾನಂದ ಶೆಟ್ಟರ್, ಗಂಗಾಧರ್ ಗಾಡದ್, ಶ್ರೀಮತಿ ಜ್ಯೋತಿ ಜಗದೀಶ್ ಈಳಿಗೆರ್, ಹಾಗೂ ಶ್ರೀಮತಿ ಚೆನ್ನಮ್ಮ ಡೊಳ್ಳಿನ್ ಇದ್ದರು.
ಶ್ರೀ ಭೀಮಸೇನ್ ಕಾಗಿ ಸ್ವಾಗತಿಸಿದರು, ಶ್ರೀ ಮಹಾಂತೇಶ್ ನರೇಗಲ್ ವಂದನಾರ್ಪಣೆ ಮಾಡಿದರು. ಜೋಸೆಫ್ ಮಲ್ಲಾಡಿ ಅವರು ವಿಶೇಷ ಸಾಧನೆ ಮಾಡಿದ ೫ ಜನರಿಗೆ ಶ್ರಮಿಕ ಮಹಿಳಾ ಪ್ರಶಸ್ತಿ ನೀಡಿದರು. ಶ್ರೀಮತಿ ಆಶಾ ಹವಳನ್ನವರ್ (ವೈದಕೀಯ) ಶ್ರೀಮತಿ ಪ್ರಮೀಳಾ ಜಕ್ಕಣ್ಣವರ (ಶಿಕ್ಷಣ) ಶ್ರೀಮತಿ ಚನ್ನಮ್ಮ ಡೊಳ್ಳಿನ್ (ಬಿಸಿಯೂಟ ನೌಕರರ) ಕುಮಾರಿ ಅನ್ನಪೂರ್ಣ ಮಡಿವಾಳರ (ರಂಗಭೂಮಿ) ಕು. ಅನನ್ಯ ಶಂ ಹಿರೇಮಠ್ (ಕ್ರೀಡಾ ಕ್ಷೇತ್ರ) ರನ್ನು ಗುರುತಿಸಿ ಪ್ರಶಸ್ತಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅನ್ನಪೂರ್ಣ ಮಡಿವಾಳರ ಅವರು ನಿರ್ದೇಶಿಸಿದ ಜಾಗೃತಿ ಕಿರುನಾಟಕ ಪ್ರದರ್ಶನಗೊಂಡಿತು.
ಈ ಪೂರ್ವದಲ್ಲಿ ಜಿಲ್ಲಾ ಮಟ್ಟದ ವಿವಿಧ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಮಹಿಳೆ ಹಾಗೂ ಬಹುತ್ವ ಭಾರತ ಕುರಿತು ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನವನ್ನು ಕು. ಮಾಲಾಶ್ರೀ ಶಂ. ಮ್ಯಾಲಗೋಳ ಮತ್ತು ಅನಿತಾ ವಾಲೀಕಾರ ಪ್ರಥಮ ಸ್ಥಾನ, ಕವಿತಾ ಜಂಗಮವಡಿಮಠ ಮತ್ತು ಅಮರೇಶ ವಧಭಾವಿ ದ್ವಿತೀಯ ಸ್ಥಾನ, ಲಗಮ್ಮನವರ ಮತ್ತು ಜ್ಯೋತಿ ಇವ್ರು ತೃತೀಯ ಸ್ಥಾನ ಪಡೆದಿದ್ದರು. ಕಾರ್ಯಕ್ರಮದಲ್ಲಿ ಸಿದ್ಧರಾಮ ಹಿಪ್ಪರಗಿ, ಶಂಕರ ಕುಂಬಿ, ಮಾರ್ತಂಡಪ್ಪ ಕತ್ತಿ, ಸಾಗರ್, ಪರಶುರಾಮ್ ಈಳಿಗೇರ, ಮಹೇಶ ಪತ್ತಾರ, ಗಿರಿಜಾ ಪವಾರ, ಭೀಮನಗೌಡ ಕಟಾವಿ, ಕಿರಣ್ ಸಿದ್ದಾಪುರ ಗಣ್ಯರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ