ಕಾದಂಬರಿ- ಸಂಚಿಕೆ -35

ಭರತನಾಟ್ಯ ಭಾರತೀಯ ಸಂಸ್ಕೃತಿ ಉಳಿಸಲು ಒಳ್ಳೆಯ ಮಾಧ್ಯಮ

ಧಾರವಾಡ : ಭಾರತೀಯ ಸಂಸ್ಕೃತಿ ಬೆಳೆಸಲು ಭರತನಾಟ್ಯ ಬಹುಮುಖ್ಯವಾದ ಮಾಧ್ಯಮ ಮತ್ತು ಜನರಿಗೆ ನೇರವಾಗಿ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಮಾಧ್ಯಮವಾಗಿದೆ ಸಮಾಜದಲ್ಲಿ ಸಾಂಸ್ಕೃತಿಕವಾಗಿ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕಾದರೆ ಈ ಮಾಧ್ಯಮ ಪ್ರಮುಖವಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಜೊತೆಗೆ ಉತ್ತಮ ವ್ಯಾಸಂಗ ಹಾಗೂ ಉತ್ತಮ ಆರೋಗ್ಯದ ಮನೋ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ ಯವರು ನಗರದ ಕಲಾರ್ಪಣ ಟ್ರಸ್ಟ್ (ರಿ) ಧಾರವಾಡ ಅರ್ಪಿಸಿದ ನೃತ್ಯ ಸಿಂಚನ-೨೦೨೫ ವಾರ್ಷಿಕ ನೃತ್ಯೋತ್ಸವದ ಕಾರ್ಯಕ್ರಮ ಇತ್ತಿಚೇಗೆ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಓದು ಬರಹದ ಜೊತೆಗೆ ನೃತ್ಯಾಭಿನಯಗಳ ಮೂಲಕ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸುತ್ತಿರುವುದು ಅಭಿನಂದನಾರ್ಹ ಹಾಗೂ ಅತ್ಯಂತ ಉತ್ಕೃಷ್ಠ ನೃತ್ಯಗಳನ್ನು ಪ್ರದರ್ಶನ ನೀಡುವ ಸಾಂಸ್ಕೃತಿಕ ಸಂಘಟನೆಯಾಗಿದೆೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಚಿಕ್ಕಮಠ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಹಿನ್ನಲೆಯಲ್ಲಿ ಸ್ನೇಹಾ ಸಂತೋಷ ಮಹಾಲೆ ಪ್ರಸಾಧನ ಮಾಡಿದ್ದು ನಟುವಾಂಗ ವಿದೂಷಿ ಸವಿತಾ ಹೆಗಡೆ, ಮೃದಂಗ ಗೋಪಿ ಕೃಷ್ಣ ಕೆ.ಜಿ. ಹಾಡುಗಾರಿಕೆ ವಿದೂಷಿ ನವಮಿ ಮಹಾವೀರ ವಾಯೋಲಿನ್ ಪಂಡಿತ ಶಂಕರ ಕಬಾಡಿ ತಾಲಲಯಗಳ ಪೂರಕವಾಗಿ ಸಹಕರಿಸಿದರು, ಇದೇ ಸಂದರ್ಭದಲ್ಲಿ ವಿದೂಷಿ ಸೀಮಾ ಕುಲಕರ್ಣಿ ಮತ್ತು ವಿದೂಷಿ ಪ್ರಮೋದಾ ಉಪಾಧ್ಯಾಯ, ಆತ್ಮಾನಂದ ಕಬ್ಬೂರ, ಸಂತೋಷ ಗಜಾನನ ಮಹಾಲೆರವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ನಂತರ ವಿದೂಷಿ ಸವಿತಾ ಹೆಗಡೆ ನಿರ್ದೇಶನದ ಕಲಾರ್ಪಣ ಟ್ರಸ್ಟ್ (ರಿ) ಧಾರವಾಡ ತಂಡದ ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಭರತನಾಟ್ಯ ನೃತ್ಯ  ಪ್ರದರ್ಶನ ನೀಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.  

ಕಾಮೆಂಟ್‌ಗಳು