ಕಾದಂಬರಿ- ಸಂಚಿಕೆ -35

ಶ್ರೀ ಗಣೇಶ ನೃತ್ಯ ಶಾಲೆ ಸಾಧನಕೇರಿ, ಮೂವತೈದನೇಯ ನೃತ್ಯ ನಿನಾದ.

 ಶ್ರೀ ಗಣೇಶ ನೃತ್ಯ ಶಾಲೆ ಸಾಧನಕೇರಿ, ಧಾರವಾಡ ವತಿಯಿಂದ ಇತ್ತಿಚಿಗೆ ಮೂವತೈದನೇಯ ನೃತ್ಯ ನಿನಾದ ಇಲ್ಲಿನ ಅಣ್ಣಾಜಿರಾವ ಶಿರೂರ ರಂಗ ಮಂದಿರ (ಸೃಜನಾ) ದಲ್ಲಿ ದಿನಾಂಕ ೧೦.೦೧.೨೦೨೫ರಂದು ಸಂಜೆ ೬ ಘಂಟೆಗೆ ಭರತನಾಟ್ಯ ಕಾರ್ಯಕ್ರಮ ಸಮರ್ಥ ಅಭಿನಯ, ಲಯ ತಾಳ ಆಂಗಿಕಾಭಿನಯಗಳ ಮೂಲಕ ಗಮನ ಸೇಳೆಯಿತು.


ಆಡಿಷನಲ್ ಅಡ್ವೋಕೇಟ್ ಜನರಲ್ ಕರ್ನಾಟಕ ಸ್ಟೇಟ್ ನ ಗಂಗಾಧರ ಜೆ.ಎಂ. ಇವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೊರಸೂಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೊಡಗಿಸಿಕೊಂಡು ಮುಂದೆ ಬರಬೇಕು ಅಲ್ಲದೆ ಕಲೆಯನ್ನು ಬೆಳೆಸಿ ಯುವ ಕಲಾವಿದರು ಹೊಸ ಹೊಸ ಸಾಧನೆಗಳನ್ನು ಮಾಡಬೇಕು ನಮ್ಮ ನಾಡು ಭರತನಾಟ್ಯ ಕಲೆಯಲ್ಲಿ ಹೆಮ್ಮೆಯನ್ನು ಹೊಂದಿದ್ದು ನಾವುಗಳು ಈ ಕಲೆಗಳನ್ನು ಬೆಳೆಸಲು ಸತತವಾಗಿ ಶ್ರಮಿಸಬೇಕಾದದ್ದು ಇಂದು ಅವಶ್ಯಕವಾಗಿದೆ. ಗುರುಶಿಷ್ಯ ಪರಂಪರೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ವಿದ್ಯಾರ್ಥಿಯಾಗುವುದರ ಜೊತೆಗೆ ಉತ್ತಮ ಪ್ರಜೆಯಾಗಿ ಹೊರಹೊಮ್ಮುವುದರಲ್ಲಿ ಸಂಶಯವೇ ಇಲ್ಲ ಎಂದು ನುಡಿದರು.

ಧಾರವಾಡದ ಹೆಸರಾಂತ ಗಣಿತ ಶಿಕ್ಷಕರಾದ ನಾಗೇಶ ಶಾನಭಾಗ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭರತನಾಟ್ಯದಲ್ಲಿ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠ ಪ್ರಕಾರವಾಗಿದ್ದು ಇದರಲ್ಲಿ ಮನುಷ್ಯ ಸದೃಡ ಮನಸ್ಸು ಏಕಾಗ್ರತೆ ಹಾಗು ದೈಹಿಕ ಕಸರತ್ತುಗಳನ್ನು ಕಲಿಯುವುದರ ಜೊತೆಗೆ ಎಲ್ಲ ವಿಧಗಳಲ್ಲಿ ಶ್ರೇಯಸ್ಸನ್ನು ಈ ಭರತನಾಟ್ಯ ಕಲಿಯುವುದರ ಮೂಲಕ ಪಡೆಯಬಹುದಾಗಿದೆ ಹಾಗೂ ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವ ಪೀಳಿಗೆಗಳು ತಮ್ಮನ್ನು ತಾವು ಉತ್ತಮ ನಾಗರಿಕರಾಗಬೇಕೆಂದರೆ ಇಂತಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಗುರುಗಳನ್ನು ಪೂಜಿಸುವುದರ ಮೂಲಕ ಗೌರವ ಗುರುಗಳಿಗೆ ನೀಡುವ ಪರಂಪರೆ ಇದಾಗಿದ್ದು ವೈಶಿಷ್ಠಪೂರ್ಣವೆಂದು ಮಾತನಾಡಿದರು. 

ಇನ್ನೊಬ್ಬ ಅತಿಥಿಗಳಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ ಸಾಂಸ್ಕೃತಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸರ್ವತೊಮುಖ ಬೆಳವಣಿಗೆ ನೃತ್ಯ ಒಂದು ಪ್ರಧಾನ ಅಂಗವಾಗಿ ಸಾಧ್ಯವಾಗುವುದಲ್ಲದೆ ಮುಂದೆ ಮಕ್ಕಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಇದು ಸಹಾಯಕವಾಗುತ್ತದೆ ಇಂದು ಮಕ್ಕಳು ತಮ್ಮ ಪ್ರತಿಭೆ ತಕ್ಕಂತೆ ಶಿಕ್ಷಣವನ್ನು ಪಡೆಯುತ್ತಿದ್ದು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಉಜ್ವಲ ಭವಿಷ್ಯವನ್ನು ಪಡೆಯಬೇಕಾದುದು ಮಕ್ಕಳ ಕರ್ತವ್ಯವಾಗಿದೆ ಹಾಗೂ ಪಾಲಕರು ಸಹ ಮಕ್ಕಳ ಬೆಳವಣಿಗೆ ದೃಷ್ಠಿಯಿಂದ ಅವರನ್ನು ಸರಿಯಾದ ಮಾರ್ಗದಲ್ಲಿ ಸಾಗುವಂತೆ ಸಲಹೆಗಳನ್ನು ನೀಡುವುದರ ಮೂಲಕ ಅವರನ್ನು ಬೆಳೆಸಬೇಕು ಅಲ್ಲದೆ ಗಣೇಶ ನೃತ್ಯ ಶಾಲೆಯ ವಿದೂಷಿ ರೋಹಿಣಿ ಇಮಾರತಿ ನಮ್ಮ ಇಲಾಖೆಯ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು. 

ಹಿನ್ನಲೆಯಲ್ಲಿ ನಟುವಾಂಗ ವಿದೂಷಿ ರೋಹಿಣಿ ಇಮಾರತಿ, ಹಾಡುಗಾರಿಕೆ ವಿದೂಷಿ ವಾಣಿ ಉಡುಪಿ, ಮೃದಂಗ ಡಾ. ಗೋಪಿಕೃಷ್ಣ, ವಾಯೋಲಿನ್ ಪಂಡಿತ ಶಂಕರ ಕಬಾಡಿ, ಎಂಬತ್ತಕ್ಕೂ ಹೆಚ್ಚು ಮಕ್ಕಳಿಗೆ ಪ್ರಸಾಧನ ಸ್ನೇಹಾ ಹಾಗೂ ಸಂತೋಷ ಮಹಾಲೆ ಪ್ರಸಾಧನ ಆಕರ್ಷಕವಾಗಿತ್ತು, ವಸ್ತಾಲಂಕಾರ ಅನಿತಾ ಕಾಸ್ಟೋಮ್ಸ ಗಣೇಶ ಕಾಸ್ಟೋಮ್ಸ ಧಾರವಾಡರವರ ವಸ್ತçವಿನ್ಯಾಸ ನೃತ್ಯಾಂಗನೇಯರ ಸೋಬಗನ್ನು ಹೆಚ್ಚಿಸಿ ನೃತ್ಯ ನಿನಾದ ಯಶಸ್ಸಿಗೆ ಶ್ರಮಿಸಿದರು. ಶ್ರೀ ಸತೀಶ ಮೂರುರ ಕಾರ್ಯಕ್ರಮವನ್ನು ಸರಳ ಸುಂದರವಾಗಿ ನಿರೂಪಿಸಿದರು. ರಾಘವೇಂದ್ರ ಇಮಾರತಿ ಸಹಕರಿಸಿದರು ಒಟ್ಟಾರೆ ಮೂವತೈದನೇಯ ವರ್ಷದ ವಾರ್ಷಿಕೋತ್ಸವ ನೃತ್ಯ ಸಂಭ್ರಮ ಸಂಯೋಜಕಿ ವಿದೂಷಿ ರೋಹಿಣಿ ಇಮಾರತಿಯವರ ನಿರ್ದೇಶನದಲ್ಲಿ ಗಣೇಶ ನೃತ್ಯಶಾಲೆಯ ವಿದ್ಯಾರ್ಥಿಗಳು ಪುಪ್ಪಾಂಜಲಿ, ಆಲರಿಪು, ಜತಿಸ್ವರ, ತಿಲ್ಲಾನ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದು ನಂತರದಲಿ ಭರತನಾಟ್ಯವಲ್ಲದೆ ವಿಭಿನ್ನವಾಗಿ ಮೂಡಿಬಂದ ಪ್ರಾದೇಶಿಕ ಹಾಗೂ ಜಾನಪದ ನೃತ್ಯಗಳು ಹಾಗೂ ಪಾಲಕರ ಅಭಿನಯಿಸಿದ ನೃತ್ಯಗಳೂ ಕೂಡಾ ವಿಶೇಷವಾಗಿ ಆಕರ್ಷಕವಾಗಿ ವೈಶಿಷ್ಠತೆಯಿಂದ ಕೂಡಿದ್ದವು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಮೆಂಟ್‌ಗಳು