ಕಾದಂಬರಿ- ಸಂಚಿಕೆ -35

ಕವಿ ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಮತ್ತು ಕನ್ನಡ ಗೀತಗಾಯನ ಕಾರ್ಯಕ್ರಮ

 ಇಂದಿನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮಕ್ಕೆ ಹೆಚ್ಚು ಮಹತ್ವ ನೀಡಬೇಕು. – ಡಾ. ಲಿಂಗರಾಜ ಅಂಗಡಿ


ಧಾರವಾಡ- ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಧಾರವಾಡ ಮತ್ತು ಕೆ ಪಿ ಇ ಎಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮತ್ತು ಕವಿ ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಮತ್ತು ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು 

ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿ ಪರಂಪರೆಯ ಕುರಿತು ಉಪನ್ಯಾಸಕರಾಗಿ ಆಗಮಿಸಿದ ಜೆ.ಎಸ್.ಎಸ್ ಡಾ. ವಿರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರ ಧಾರವಾಡ ಸಂಯೋಜನಾಧಿಕಾರಿಗಳಾದ ಡಾ. ಜಿನದತ್ತ ಹಡಗಲಿ  ತಮ್ಮ ಉಪನ್ಯಾಸದಲ್ಲಿ, ಪ್ರಾರಂಭದಲ್ಲಿ ಈಶ್ವರ ಸಣಕಲ್ಲ ರವರ ಜೀವನ ಚಿತ್ರಣವನ್ನು ಅತ್ಯಂತ  ಮನೋಜ್ಞ ವಾಗಿ ವಿವರಿಸಿದರು ಅದರೊಂದಿಗೆ ಸಣಕಲ್ ರವರ  ಜಗವೆಲ್ಲಾ ನಗುತಿರಲಿ ಜಗದಳುವು ನನಗಿರಲಿ  ಜಗ ಅತ್ತು ನಾ ನಗಲು ಜಗವನೆನ್ನೆತ್ತಿಕೊಳ್ಳಬಹುದೆ ಎಂಬ ಕವಿತೆಯ ಸಾರವನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು, ಕನ್ನಡ ಸಾಹಿತ್ಯದ ಬೆಳವಣಿಗೆಯ ಕಾಲಘಟ್ಟವಾದ ಕವಿರಾಜಮಾರ್ಗದಲ್ಲಿಯ  "ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ " "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್" ಮುಂತಾದ ವಿಚಾರಗಳ ಕುರಿತು ಬೆಳಕು ಚೆಲ್ಲಿದರು

೧೯೪೭ರಲ್ಲಿ ಭಾರತ ಸ್ವತಂತ್ರವಾಯಿತು ಮತ್ತು ರಾಜ್ಯಗಳ ಮರುಸಂಘಟನೆ ಕಾಯ್ದೆ ೧೯೫೬ರ ಪ್ರಕಾರ, ಮುಂಬೈ ಪ್ರಾಂತ್ಯದ ಕನ್ನಡ ಪ್ರದೇಶಗಳು, ಹೈದರಾಬಾದ್ ರಾಜ್ಯ, ಮದ್ರಾಸ್ ರಾಜ್ಯದ ಕನ್ನಡ ಮಾತನಾಡುವ ಪ್ರದೇಶಗಳು ಮೈಸೂರು ರಾಜ್ಯದೊಂದಿಗೆ ಏಕೀಕರಣಗೊಂಡವು. ಆದರೆ ಏಕೀಕರಣದ ಸಮಯದಲ್ಲಿ ಕೆಲವು ಪ್ರದೇಶಗಳನ್ನು ಸೇರಿಸಲಾಗಲಿಲ್ಲ. ೧೯೦೯ರ ಬ್ರೀಟಿಷರ ನಕ್ಷೆಯಲ್ಲಿ ಇಂದಿನ ಗೋವಾ, ಬೆಳಗಾವಿ, ಕೊಲ್ಹಾಪುರ ಮತ್ತು ಸೋಲಾಪುರ ಸಹ ಕರ್ನಾಟಕಕ್ಕೆ ಸೇರಿದ್ದವು. ಆದರೆ ಆಧುನಿಕ ಕರ್ನಾಟಕವು ಅದರಲ್ಲಿ ಬೆಳಗಾವಿಯನ್ನು ಮಾತ್ರ ಒಳಗೊಂಡಿದೆ ಇದು ಕನ್ನಡಿಗರ ದುರಂತ.

ಕನ್ನಡಿಗರು ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ, ಭಾದಿಪ್ಪ ಕಲಿಗೆ...!! ಕನ್ನಡಿಗರ ಜಾಣ್ಮೆಯ ವರ್ಣನೆಯೊಂದಿಗೆ  ಕನ್ನಡವನ್ನು ಮಾತನಾಡುವಲ್ಲಿ ನರಕಕ್ಕೆ ಇಳಿಸಿ..ನಾಲಿಗೆ ಸೀಳ್ಸಿ..ಬಾಯಿ ಹೊಲಿಸಿ ಹಾಕಿದ್ರೂನು..ಮೂಗಿನಲ್ ಮಾತಾಡ್ತೀನ್ ಕನ್ನಡ ಪದವನ್ನ... ನನ್ ಮನಸನ್ ನೀ ಕಾಣೆ...!

ಎಂಬ ಅಭಿಮಾನದ ಸಾರವನ್ನು ಬಿತ್ತರಿಸಿದರು  ತಮ್ಮ ಭಾಷಣದಲ್ಲಿ ಕನ್ನಡ ವೆಂಬುದು ಮನದ ಒಡಲಾಳದ ದನಿಯಾಗಿದೆ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು . ನಾವು ಆರಂಭಿಕ ಕನ್ನಡಿಗರಾಗೋಣ ಆಡಂಬರದ ಕನ್ನಡಿಗರಾಗೊದು ಬೇಡ ಎಂದು ಸಲಹೆಯನ್ನು ನೀಡಿದರು.

ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಕನ್ನಡ ನಾಡು ನುಡಿ ಜಲ ಪರಂಪರೆ ವೈಭವವನ್ನು ತಿಳಿಸುವ ಕಾರ್ಯಕ್ರಮ ಮಾಡುತ್ತಾ ಬರುತ್ತಿದೆ ಇಂದಿನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮಕ್ಕೆ ಹೆಚ್ಚು ಮಹತ್ವ ನೀಡಬೇಕು. ಭಾಷೆಯನ್ನು ಕಲಿಯಬೇಕೆಂಬ ದೃಷ್ಟಿಯಿಂದ ಅನ್ಯ ಭಾಷೆಯನ್ನು ಕಲಿಯಬೇಕು ಕನ್ನಡ ಭಾಷೆಯನ್ನು ಮಾತೃಭಾಷೆಯನ್ನಾಗಿ ಪ್ರೀತಿಸಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶ್ರೀ ಎ.ಎಮ್ ಶಲವಡಿ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕವಿ ಚಂದ್ರಶೇಖರ್ ಕಂಬಾರ ಹೇಳುವಂತೆ ಜಗತ್ತಿನ ಎಲ್ಲಾ ಭಾಷೆ ಅಳಿದರು ಕನ್ನಡ ಭಾಷೆ ಅಳಿಯುವುದಿಲ್ಲ ಏಕೆಂದರೆ ಅದರಲ್ಲಿ ವಚನಗಳು ಇವೆ ಎಂಬAತೆ ವಚನಗಳ ಕುರಿತು ಹೇಳುತ್ತಾ, ಕನ್ನಡಿಗರ ಉದಾರ ಗುಣದ ಬಗ್ಗೆ ಪ್ರಾಚೀನ ಕಾಲದಲ್ಲಿ ಕನ್ನಡ ಭಾಷೆಯನ್ನು ಬೆಳೆಸಿದ ಎಲ್ಲರನ್ನು ಸ್ಮರಿಸಿದರು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಸಾಧನೆ ಮಾಡಿದ ಮಹನೀಯರ ಕುರಿತು ವಿವರಿಸಿದರು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ನೇತ್ರಾ ಮಾಡಳ್ಳಿ, ಅನುರಾಧ ನೀರಲಕಟ್ಟಿ, ಸೌಂದರ್ಯ ಮನಗೂಳಿ, ಸವಿತಾ ದ್ಯಾವಣ್ಣವರ ಕನ್ನಡ ನಾಡು ನುಡಿಯ ಕುರಿತು ಕವಿತೆಯ ವಾಚನ ಮಾಡಿದರು. 

ಕಾರ್ಯಕ್ರಮದಲ್ಲಿ ದತ್ತಿದಾನಿಗಳಾದ ಶ್ರೀಮತಿ ಮಧುಮತಿ ಸಣಕಲ್ಲ ಶ್ರೀಮತಿ ಪ್ರಮೀಳಾ ಜಕ್ಕಣ್ಣವರ ಶ್ರೀಮತಿ ಸುಧಾ ಕಬ್ಬೂರ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.  ವಿನಾಯಕ ರಗಟಿ ಸ್ವಾಗತಿಸಿದರು, ಶಿವರುದ್ರಪ್ಪ ತಳವಾರ ನಿರೂಪಿಸಿದರು, ಧಾರವಾಡ ತಾಲೂಕು ಅಧ್ಯಕ್ಷರಾದ ಶ್ರೀ ಮಹಾಂತೇಶ ನರೇಗಲ್ ವಂದಿಸಿದರು.

ಕಾಮೆಂಟ್‌ಗಳು