ಕಾದಂಬರಿ- ಸಂಚಿಕೆ -35

“ನಮ್ಮೂರ ವಿಶೇಷ” ಬರಹ ಸ್ಪರ್ಧೆಯ ಫಲಿತಾಂಶ

 ಸ್ಪರ್ಧೆಯ ಫಲಿತಾಂಶ 


ಧಾರವಾಡದ ಗಣಕರಂಗ ಸಂಸ್ಥೆಯು ೬೯ನೇಯ ರಾಜ್ಯೋತ್ಸವ ಆಚರಣೆ ಪ್ರಯುಕ್ತ “ನಮ್ಮೂರ ವಿಶೇಷ” ಬರಹ ಸ್ಪರ್ಧೆಯನ್ನು ಆಯೋಜಿಸಿತ್ತು. ಸುಮಾರು ೬೦ಕ್ಕಿಂತಲೂ ಹೆಚ್ಚು ಬರಹಗಳು ಬಂದಿದ್ದ ಈ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದೆ. ಐದು ಸಾವಿರ ನಗದು, ಪ್ರಮಾಣಪತ್ರ ಮತ್ತು ಪುಸ್ತಕ ಗೌರವದ ಪ್ರಥಮ ಬಹುಮಾನವನ್ನು ಐವರು ಬರಹಗಾರರಾದ ಪಾವಗಡದ ಬ್ಯಾಡನೂರು ಚನ್ನಬಸವಣ್ಣ, ಕರಡಿಗುದ್ದಿಯ ಗಂಗಾದೇವಿ ಚಕ್ರಸಾಲಿ, ಶಿಗ್ಲಿಯ ನಿಂಗಪ್ಪ ಮೇಗಲಮನಿ, ಬೆಂಗಳೂರಿನ ಕಮಲಾ ಎಂ, ಕೊಪ್ಪಳದ ಡಾ.ಹನುಮಂತ ಹೇರೂರು ಪಡೆದುಕೊಂಡಿದ್ದಾರೆ. ಮೂರು ಸಾವಿರ ನಗದು, ಪ್ರಮಾಣಪತ್ರ ಮತ್ತು ಪುಸ್ತಕ ಗೌರವದ ದ್ವಿತೀಯ ಬಹುಮಾನವನ್ನು ಹಿರೇಬಾಗೇವಾಡಿಯ ರೂಪರಾಣಿ ಪಟಗಾರ, ಪಾವಗಡದ ಪ್ರೊ.ಸಣ್ಣನಾಗಪ್ಪ, ಮಂಡ್ಯದ ನಂದೀಶ ಎನ್‌.ಕೆ, ಪಡೆದುಕೊಂಡಿದ್ದಾರೆ. ತೃತೀಯ ಬಹುಮಾನದ ನಗದು ಎರಡು ಸಾವಿರ, ಪುಸ್ತಕ ಮತ್ತು ಪ್ರಮಾಣಪತ್ರದ ಗೌರವವನ್ನು ಇಬ್ಬರುರಹಗಾರರು ಮಂಗಳೂರಿನ ವೈದ್ಯ ಡಾ.ಸುರೇಶ ನೆಗಳಗುಳಿ ಮತ್ತು ಕಾರಟಗಿಯ ಪಿಡಿಓ ವಿದ್ಯಾಶ್ರೀ ಹಡಪದ ಪಡೆದುಕೊಂಡಿದ್ದಾರೆ. ತೀರ್ಪುಗಾರರ ಮೆಚ್ಚುಗೆ ಬಹುಮಾನದ ಗೌರವವನ್ನು ಹತ್ತು ಬರಹಗಾರರಾದ ಕುಮಟಾದ ವಿನಾಯಕ ರಮೇಶ ನಾಯ್ಕ, ಧಾರವಾಡದ ವಿನುತಾ ಹಂಚಿನಮನಿ, ತುಮಕೂರಿನ ಡಾ.ಕೆ.ವಿ.ಮುದ್ದುವೀರಪ್ಪ, ಕಲಬುರಗಿಯ ಬಂತನಾಳ ಶೋಭಾರಾಣಿ, ಹುಬ್ಬಳ್ಳಿಯ ಪದ್ಮಾ ಉಮರ್ಜಿ, ಹೆಬ್ರಿಯ ಪೂರ್ಣೇಶ ಕುಲಾಲ, ಶಿರಸಿಯ ಟಿ.ಎಂ.ಜಗದೀಶ, ಧಾರವಾಡದ ಮೇಘಾ ಹುಕ್ಕೇರಿ, ಬೀದರಿನ ಎಸ್.ಬಿ.ಕುಚುಬಾಳ ಮತ್ತು ಧಾರವಾಡದ ವಿದ್ಯಾ ಕದಂ ಪಡೆದುಕೊಂಡಿದ್ದಾರೆ.

            ತೀರ್ಪುಗಾರರಾಗಿ ಧಾರವಾಡ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಮತ್ತು ಹಿರಿಯ ಸಾಹಿತಿ ಪ್ರೊ.ಎಸ್.ಕೆ.ಕೌಜಲಗಿ ಮತ್ತು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರು ಮತ್ತು ಧಾರವಾಡದ ಹಿರಿಯ ಸಾಹಿತಿಗಳಾದ ಡಾ.ವೈ.ಎಂ.ಭಜಂತ್ರಿಯವರು ತೀರ್ಪುಗಾರರಾಗಿದ್ದರು. ಸ್ಪರ್ಧಾ ಸಮಿತಿಯ ಅಧ್ಯಕ್ಷರಾಗಿ ಗಣಕರಂಗದ ಸಿದ್ಧರಾಮ ಹಿಪ್ಪರಗಿಯವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಕವಿ ಗಣಪತಿ ಗೋ ಚಲವಾದಿ (ಗಗೋಚ) ಮತ್ತು ಹುಬ್ಬಳ್ಲೀಯ ಕವಿ ರವಿ ಚಲವಾದಿ ಸ್ಪರ್ಧೆಯನ್ನು ಸಂಯೋಜನೆ ಮಾಡಿದ್ದರು. ವಿಜೇತರಿಗೆ ಅಭಿನಂದನೆಗಳು ಮತ್ತು ಭಾಗವಹಿಸಿದವರಿಗೆ ಧನ್ಯವಾದಗಳನ್ನು ಗಣಕರಂಗ ಸಂಸ್ಥೆಯು ತಿಳಿಸಿದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಶೀಘ್ರದಲ್ಲಿಯೇ ವೇದಿಕೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಾಮೆಂಟ್‌ಗಳು