ಕಾದಂಬರಿ- ಸಂಚಿಕೆ -35

ಕಿಟೆಲ್ ಕಲಾ ಮಹಾವಿದ್ಯಾಲಯದಲ್ಲಿ ೬೯ ನೇ ಕರ್ನಾಟಕ ರಾಜ್ಯೋತ್ಸವ.

 ಕನ್ನಡಕ್ಕಾಗಿ ದುಡಿದ ದಾರ್ಶನಿಕರನ್ನು ಸ್ಮರಿಸಬೇಕಾಗಿದೆ :ಡಾ. ಪ್ರಕಾಶ ಮಲ್ಲಿಗವಾಡ.

ಧಾರವಾಡದ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲಿ ಒಂದಾದ ಕಿಟೆಲ್ ಕಲಾ ಮಹಾವಿದ್ಯಾಲಯದಲ್ಲಿ  ಐ.ಕ್ಯೂ.ಎ.ಸಿ.ಅಡಿಯಲ್ಲಿ ೬೯ ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-೫೦ ಕನ್ನಡಾಂಬೆಗೆ ನುಡಿ ನಮನ ೨೦೨೪ನ್ನು ಕರ್ನಾಟಕ ಮಾತೆಗೆ ಪುಷ್ಪಾರ್ಪಣೆ ಮತ್ತುಡಾ.ರೆವರೆಂಡ್ ಫರ್ಡಿನಾಂಡಕಿಟೆಲ್‌ರವರ ಪುತ್ತಳಿಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉತ್ತರಕರ್ನಾಟಕದ ಹಿರಿಯ ಜಾನಪದ ನೃತ್ಯ ಕಲಾವಿದರಾದ ಡಾ.ಪ್ರಕಾಶ ಮಲ್ಲಿಗವಾಡ ಆಗಮಿಸಿ ಇಂದು ನಮ್ಮ ಕನ್ನಡದಲ್ಲಿ ಅನೇಕ ಸಾಹಿತಿಗಳು, ಕವಿಗಳು, ನಾಟಕಗಾರರು ತಮ್ಮದೆ ಆದ ಹಿರಿಮೆಯನ್ನುಕರ್ನಾಟಕಕ್ಕೆ ನೀಡಿ ಗೌರವವನ್ನು ತಂದುಕೊಟ್ಟರು.ಅಂತಹ ಮಹನೀಯರನ್ನು ನಾವು ಇಂದು ಸ್ಮರಿಸಬೇಕಾಗಿದೆ, ನಮ್ಮಧಾರವಾಡದಲ್ಲಿ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್, ಡಾ. ದ.ರಾ.ಬೇಂದ್ರೆ, ಪಂ.ಮಲ್ಲಿಕಾರ್ಜುನ ಮನ್ಸೂರ, ಪಂ.ಬಸವರಾಜರಾಜಗುರು, ಡಾ.ಗಂಗೂಬಾಯಿ ಹಾನಗಲ್ಲ ಅಲ್ಲದೆ ಕನ್ನಡ ನಾಡು ನುಡಿಗೆ ಪ್ರಥಮ ಕನ್ನಡ ಶಬ್ಧಕೋಶವನ್ನು ನೀಡಿದ ಡಾ. ರೆವರೆಂಡ್ ಫರ್ಡಿನಾಂಡ ಕಿಟೆಲ್‌ ರವರನ್ನು ನೆನೆದರು. ನಮ್ಮ ನಾಡಿನ ಸಂತರ ದಾರ್ಶನಿಕರ, ವಚನಗಾರರ ಹಾಗೂ ಕನ್ನಡಕ್ಕಾಗಿ ಹಗಲಿರಳು ಶ್ರಮಿಸಿದ ಹಿರಿಯ ಜೀವನಚರಿತ್ರೆಗಳನ್ನು ಹಾಗೂ ಅವರು ರಚಿಸಿದ ಕನ್ನಡ ಸಾಹಿತ್ಯಗಳನ್ನು ಓದಿ ಅವರು ಹಾಕಿದ ಪ್ರತಿಯೊಂದು ಆದರ್ಶಗಳನ್ನು ಅರ್ಥಮಾಡಿಕೊಂಡು ಇಂದಿನ ವಿದ್ಯಾರ್ಥಿಗಳು ರೂಢಿಸಿಕೊಂಡು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ.  ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿಯುತ್ತಾ ಕನ್ನಡನಾಡಿನ ಗೀತೆ ಹಾಗೂ ಜನಪದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಹುರುದುಂಬಿಸಿದರು. 

ಅದರಂತೆ ಉತ್ಸಾಹಿ ಕಲಾವಿದ ಜನಪದದಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ಮಾಡುತ್ತಾ ಯುವ ಉತ್ಸಾಹಿಗಳಿಗೆ ಪ್ರೇರಣೆಯಾದ ಯುವ ಕಲಾವಿದ ಸಂತೋಷ ಸಾಲಿಯಾನ ಮಾತನಾಡಿ ಯುವಕರು ತಮ್ಮ ಪ್ರತಿಭೆಗಳನ್ನು ಹೊರಸೂಸಲು ಇಂತಹ ಕನ್ನಡಪರ ಕಾರ್ಯಕ್ರಮಗಳಿಗೆ ತೊಡಗಿಸಿಕೊಂಡು ಮುಂದೆ ಬರಬೇಕು.ಜನಪದಕಲೆಯನ್ನು ಬೆಳೆಸಿ ಯುವಕಲಾವಿದರು ಹೊಸ ಹೊಸ ಸಾಧನೆಗಳನ್ನು ಮಾಡಬೇಕು.ನಮ್ಮ ನಾಡು ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದೆ.ನಾವುಗಳು ಕನ್ನಡಕ್ಕಾಗಿ ಶ್ರಮಿಸಬೇಕಾದದ್ದು ಇಂದು ಅವಶ್ಯಕವಾಗಿದೆ.ಗುರುಶಿಷ್ಯ ಪರಂಪರೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ವಿದ್ಯಾರ್ಥಿಯಾಗುವುದರ ಜೊತೆಗೆ ಉತ್ತಮ ಪ್ರಜೆಯಾಗಿ ಹೊರಹೊಮ್ಮುವುದರಲ್ಲಿ ಸಂಶಯವೇ ಇಲ್ಲ ಎಂದು ನುಡಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಿಟೆಲ್ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರೇಖಾ ಎಮ್.ಜೋಗುಳ ಮಾತನಾಡಿ, ಹೆಚ್ಚು ಹೆಚ್ಚು ಕನ್ನಡವನ್ನು ಮಾತನಾಡುವುದರ ಜೊತೆಗೆ ಕನ್ನಡದ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ವಿದ್ಯಾರ್ಥಿಗಳು ಇಂದು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿತಮ್ಮ ಪ್ರತಿಭೆಗಳನ್ನು ವೇದಿಕೆಯ ಮುಖಾಂತರ ಪ್ರಸ್ತುತಪಡಿಸಿ, ಕನ್ನಡ ನಾಡು ನುಡಿಗಾಗಿ ಶ್ರಮಿಸಬೇಕು ಎಂದು ನುಡಿದರು. ಡಾ. ರೆವರೆಂಡ್‌ ಫರ್ಡಿನಾಂಡ ಕಿಟೆಲ್‌ ರವರು ಧಾರವಾಡಕ್ಕೆ ಬಂದು ಕನ್ನಡವನ್ನು ಕಲಿತು ಅದನ್ನುಕನ್ನಡ ನಾಡಿಗೆ ಅರ್ಪಿಸುವುದರ ಮೂಲಕ ಕನ್ನಡ ಪ್ರೇಮವನ್ನು ತೋರ್ಪಡಿಸಿದನ್ನು ಮರೆಯುವಂತಿಲ್ಲ ಎಂಬುದನ್ನು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಮನನ  ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಕರ್ನಾಟಕ ನಾಟಕಅಕಾಡಮಿ ಸಿ.ಜಿ.ಕೆ ಯುವ ಪ್ರಶಸ್ತಿ ಪುರಸ್ಕೃತ ಸಂತೋಷ ಗಜಾನನ ಮಹಾಲೆ ಉಪಸ್ಥಿತರಿದ್ದರು.ವೇದಿಕೆಯ ಮೇಲೆ ಪ್ರೋ.ಡ್ಯಾನಿಯಲ್ ಪ್ರವೀಣಕುಮಾರ, ಡಾ. ಎಂ.ಎಚ್.ಮುಲ್ಲಾ, ಡಾ.ಸುರೇಶ. ಬಿ.ನ್ಯಾಮತಿ, ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಶೇಷವಾಗಿ ಅರ್ಥಪೂರ್ಣವಾಗಿಸಿದರು.ಇದೆ ಸಂದರ್ಭದಲ್ಲಿ ಜನಪದ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಪ್ರಕಾಶ ಮಲ್ಲಿಗವಾಡ ಹಾಗೂ ಯುವಕಲಾವಿದ ಸಂತೋಷ ಸಾಲಿಯಾನ್‌ ರವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕೋಲಾಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಕಾಮೆಂಟ್‌ಗಳು