- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನಡೆ, ನುಡಿ ಹಾಗೂ ಸಾಹಸದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಡಾ.ಟಿ.ಬಿ.ಸೊಲಬಕ್ಕನವರ ಹೊಸತನಕ್ಕೆ ಮಾದರಿ - ಸಾಹಿತಿ ಸತೀಶ ಕುಲಕರ್ಣಿ
![]() |
ಗೊಟಗೋಡಿಯ ಶಿಲ್ಪ ಕಲಾ ಕುಟೀರದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಟಿ.ಬಿ.ಸೊಲಬಕ್ಕನವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. |
ಜಾನಪದ ವಿದ್ವಾಂಸ ಪ್ರೊ.ಶ್ರೀಶೈಲ ಹುದ್ದಾರ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದ ಡಾ.ಟಿ.ಬಿ.ಸೊಲಬಕ್ಕನವರ ಅಸಾಮಾನ್ಯ ಸಾಧನೆ ಮಾಡಿದರು. ಅವರ ಮುನ್ನೋಟ ಹಾಗೂ ಕನಸುಗಳು ಅತ್ಯದ್ಭುತ. ಸಾಧನೆಗೆ ಸಮಯದ ಅಭಾವ ಇದೆ ಎನ್ನುತ್ತಲೇ ಸಾಧನೆಯತ್ತ ಸಾಗಲು ನಮ್ಮನ್ನು ಎಚ್ಚರಿಸುತ್ತಿದ್ದರು. ಅವರ ಸಾಧನೆಯ ಬದುಕು ನಮಗೆ ಸ್ಫೂರ್ತಿ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಂಚಾಲಕ ಸದಸ್ಯ ಕರಿಯಪ್ಪ ಹಂಚಿನಮನಿ ಮಾತನಾಡಿ, ಕಲೆಯ ಎಲ್ಲ ಆಯಾಮಗಳನ್ನು ಅನುಭವಿಸಿ ಕಲಾ ಲೋಕದ ಮೇರು ಪರ್ವತ ಏರಿದ ಡಾ.ಟಿ.ಬಿ.ಸೊಲಬಕ್ಕನವರ ಯುವ ಕಲಾವಿದರಿಗೆ ಸದಾ ಪ್ರೇರಕ ಶಕ್ತಿಯಾಗಿದ್ದರು. ಅವರ ವಿಭಿನ್ನ ಆಲೋಚನಾ ಕ್ರಮ ನಮ್ಮನ್ನೆಲ್ಲ ಸಾಧನೆಯತ್ತ ಸಾಗಲು ಹುರಿದುಂಬಿಸುತ್ತದೆ ಎಂದರು.
ನಿವೃತ್ತ ಶಿಕ್ಷಕ ಪಿ.ಎಸ್.ಯಲಿಗಾರ ಮಾತನಾಡಿ, ಸಹಪಾಠಿಯಾಗಿದ್ದ ಡಾ.ಟಿ.ಬಿ. ಸೊಲಬಕ್ಕನವರ ಬಾಲ್ಯದಿಂದಲೂ ಪ್ರತಿಭಾವಂತ. ತನ್ನ ಪ್ರತಿಭೆಯನ್ನು ಒರೆಗೆ ಹಚ್ಚುತ್ತಲೇ ಸಾಧನೆಯತ್ತ ಮುಖ ಮಾಡಿದರು ಎಂದರು.
ಶಿಲ್ಪ ಕಲಾ ಕುಟೀರದ ಮುಖ್ಯಸ್ಥ ರಾಜಹರ್ಷ ಸೊಲಬಕ್ಕನವರ ಮಾತನಾಡಿ, ನಮ್ಮ ತಂದೆ ಸಾಧನೆ ಮಾಡಿದ ಬಗ್ಗೆ ಎಂದಿಗೂ ಹೇಳಿಕೊಳ್ಳಲಿಲ್ಲ. ನಾನೇನಾದರೂ ಸಾಧನೆ ಮಾಡಿದ್ದರೆ ಸಾಂಘಿಕ ರೂಪದ ಶಕ್ತಿ ಕಾರಣ. ಪ್ರತಿಯೊಬ್ಬರ ಸಹಕಾರ ಇಲ್ಲದಿದ್ದರೆ ಗುರುತಿಸಿಕೊಳ್ಳಲು ಆಗುತ್ತಿರಲಿಲ್ಲ ಎಂದು ಭಾವಿಸಿದ್ದರು. ಅವರ ಸರಳತೆ, ಸತತ ಕೆಲಸ, ಶುದ್ಧ ಚಾರಿತ್ರö್ಯ ನಮಗೆ ಪ್ರೇರಣೆ ಎಂದರು.
ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬ.ಫ.ಯಲಿಗಾರ, ಬಸೆಟ್ಟೆಪ್ಪ ಯಲಿಗಾರ, ಶಿವಾನಂದ ಮ್ಯಾಗೇರಿ, ಸಾವಿತ್ರೆಮ್ಮ ಸೊಲಬಕ್ಕನವರ, ಬಸವರಾಜ ಬೂದಿಹಾಳ, ಜಯಶ್ರೀ ಸೊಲಬಕ್ಕನವರ, ಶರೀಫ ಮುದ್ದೇಬಿಹಾಳ, ವಿರೂಪಾಕ್ಷ ಕದಲ, ಅಶೋಕ ವೆಂಕಟಾಪುರ, ಗುರುಪಾದ ಹರಿಜನ, ಅಜಿತ್ ಸಂಕಣ್ಣವರ ಹಾಗೂ ಶಿಲ್ಪ ಕಲಾ ಕುಟೀರದ ಕಲಾವಿದರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ