ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ಡಾ.ಟಿ.ಬಿ.ಸೊಲಬಕ್ಕನವರ ೪ನೇ ಪುಣ್ಯಸ್ಮರಣೆ

ಶಿಗ್ಗಾವಿ: ತಾಲೂಕಿನ ಗೊಟಗೋಡಿಯ ಶಿಲ್ಪ ಕಲಾ ಕುಟೀರದಲ್ಲಿ ನ.೧೯ರಂದು ಬೆಳಗ್ಗೆ ೧೧ ಗಂಟೆಗೆ ಕಲಾ ಗುರು ಡಾ.ಟಿ.ಬಿ.ಸೊಲಬಕ್ಕನವರ ೪ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

 ಮಾನವ ದೇಗುಲದಲ್ಲಿನ ಡಾ.ಟಿ.ಬಿ.ಸೊಲಬಕ್ಕನವರ ಪುತ್ಥಳಿಗೆ ವಿಶೇಷ ಗೌರವ ಸಲ್ಲಿಸಲಾಗುವುದು. ಜೊತೆಗೆ ಕಲಾವಿದರು ರಂಗ ಗೀತೆಗಳ ಮೂಲಕ ರಂಗ ನಮನ ಸಲ್ಲಿಸಿದರು.

ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ಜಾನಪದ ವಿದ್ವಾಂಸರಾದ ಬ.ಫ. ಯಲಿಗಾರ ಹಾಗೂ ಶ್ರೀಶೈಲ ಹುದ್ದಾರ, ರಂಗಕರ್ಮಿ ಎಂ.ಎಸ್. ಮಾಳವಾಡ, ಕಲಾವಿದ ಕರಿಯಪ್ಪ ಹಂಚಿನಮನಿ ಸೇರಿದಂತೆ ಶಿಲ್ಪ ಕಲಾ ಕುಟೀರದ ಕಲಾವಿದರು, ರಂಗಾಸಕ್ತರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು  ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌ಗಳು