- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಲಾ ಅಂತರ್ಗತ ಕಲಿಕೆ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿದಂತೆ-ಡಾ.ರಾಮು ಮೂಲಗಿ
ಅನುಭವದ ಕಲಿಕೆ ಒಂದು ಅತ್ಯಂತ ಪರಿಣಾಮಕಾರಿ ಶೈಕ್ಷಣಿಕ ವಿಧಾನ. ಶಿಕ್ಷಕರು ಕಲೆಯನ್ನು ಅಂತರ್ಗತಗೊಳಿಸಿ ಬೋಧಿಸಿದಾಗ ಮಾತ್ರ ಇದು ಸಾಧ್ಯ. ಕಲೆಯಿಲ್ಲದೇ ಜೀವನವಿಲ್ಲ. ಕಲೆ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ. ಜಾನಪದ, ಸಂಗೀತ, ನಾಟಕ, ಚಿತ್ರ, ಬರವಣಿಗೆ, ಅಭಿನಯ, ಹಾಡುಗಾರಿಕೆ, ಭಾಷಣ, ಮಣ್ಣಿನ ಮಾದರಿ ಇತ್ಯಾದಿ ಕಲೆಗಳನ್ನು ಮಕ್ಕಳು ಹೊಂದುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಿದೆ. ಕಲಾ ಅಂತರ್ಗತ ಕಲಿಕೆ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿದಂತೆ” ಎಂದು ಜಾನಪದ ತಜ್ಞ, ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ರಾಮು ಮೂಲಗಿ ಅಭಿಪ್ರಾಯಪಟ್ಟರು.
ಡಿ.ಎಸ್.ಇ.ಆರ್.ಟಿ ಸಹಯೋಗದಲ್ಲಿ ಇಂಡಿಯಾ ಫಾಂಡೇಶನ್ ಫಾರ್ ಆರ್ಟ್ಸ, ಕಲಿ-ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಯ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಕಲಿಕಾ ಕೇಂದ್ರವಾಗಿ ಅರಳೀಕಟ್ಟೆ ತೆರೆದ ವಾಚನಾಲಯ ಉದ್ಘಾಟಿಸಿ, ಮಕ್ಕಳು ತಯಾರಿಸಿದ ಗಾಳಿಪಟ ಪ್ರದರ್ಶಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇನ್ನೂ ಜನಪದ ಕಲೆ ಉಳಿದುಕೊಂಡಿದೆ. ಇದು ನಮ್ಮೆಲ್ಲರ ಸೌಭಾಗ್ಯ. ಜನಪದ ಉಳಿಯಬೇಕು. ಸೋಬಾನೆ ಪದ, ಬೀಸೋಕಲ್ಲಿನ ಪದ, ಹಂತೀ ಪದ, ಲಾವಣಿ, ಭಜನೆ, ಸಣ್ಣಾಟ, ದೊಟ್ಟಾಟ ಕಲೆ ಉಳಿಯಬೇಕೆಂದರೆ ಶಾಲಾ ಮಕ್ಕಳಲ್ಲಿ ಇವುಗಳನ್ನು ಬಿತ್ತಬೇಕು. ಅವರು ಹಾಡಿ, ಕುಣಿದು ಆನಂದಿಸಬೇಕು, ಅನುಭವಿಸಬೇಕು” ಎಂದು ಡಾ. ರಾಮೂ ಮೂಲಗಿ ಮಾತನಾಡಿದರು.
ಗಾಳಿಪಟ ತಯಾರಿಕಾ ಕಾರ್ಯಾಗಾರದ ಸಂಪನ್ಮೂಲ ಶಿಕ್ಷಕರು ಹಾಗೂ ಯೋಜನೆಯ ನಿರ್ವಾಹಕರಾದ ಡಾ. ಲಿಂಗರಾಜ ರಾಮಾಪೂರ ಮಾತನಾಡಿ “ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರ ಮೂಲಕ ಮಕ್ಕಳಲ್ಲಿ ಓದುವ ಸದಭಿರುಚಿ ಬೆಳೆಸುವುದು ಯೋಜನೆಯ ಉದ್ದೇಶವಾಗಿದೆ. ಉತ್ತಮ ಓದು ಬರವಣಿಗೆಗೆ ಕಾರಣವಾಗುತ್ತದೆ. ಇದರಿಂದ ಮಕ್ಕಳು ಕಥೆ, ಕವಿತೆ, ಚುಟುಕು, ಪ್ರಬಂಧ ಬರೆಯುವ ಬೀಜ ಬಿತ್ತಬಹುದಾಗಿದೆ. ಹಾಗೇ ಗಾಳೀಪಟ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಅದನ್ನು ತಯಾರಿಸುವ ಮೂಲಕ ಮಕ್ಕಳು ಗಣಿತ ಆಕೃತಿಗಳು, ರೇಖೆಗಳು, ಕೋನಗಳ ಪರಿಕಲ್ಪನೆ ಹೊಂದುತ್ತಾರೆ. ವಿಜ್ಞಾನ ವಿಷಯಕ್ಕೆ ಸಂಬAಧಿಸಿದAತೆ ಗಾಳಿಯ ಪ್ಲವನತೆ, ತೇವಾಂಶ, ವೇಗ, ದಿಕ್ಕು ಹೀಗೆ ಗಾಳಿಯ ಗುಣಧರ್ಮಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಅಲ್ಲದೇ ನಮ್ಮ ಪರಂಪರೆಯನ್ನು ಅರಿತುಕೊಳ್ಳಲು ಗಾಳಿಪಟ ತಯಾರಿಕೆಯಿಂದ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಅರಳೀಕಟ್ಟೆಯನ್ನು ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳೇ ಶ್ರಮದಾನದ ಮೂಲಕ ನಿರ್ಮಿಸಿದ್ದು ವಿಶೇಷ. ತೆರೆದ ವಾಚನಾಲಯದಲ್ಲಿ ಹತ್ತಾರು ದಿನಪತ್ರಿಕೆಗಳು, ವಾರಪತ್ರಿಕೆಗಳು, ಪಾಕ್ಷಿಕ, ಮಾಸಪತ್ರಿಕೆಗಳನ್ನು ಮಕ್ಕಳ ಓದಿಗೆ ಸದಾ ಲಭ್ಯವಿರಿಸಲಾಗಿದೆ. ಶಾಲಾ ಅವಧಿಯ ಪೂರ್ವ ಹಾಗೂ ನಂತರದಲ್ಲಿಯೂ ಇಲ್ಲಿ ಮಕ್ಕಳು ಓದಲು ಅವಕಾಶ ಕಲ್ಪಿಸಲಾಗಿದೆ. ಈ ದಿನ ಮಕ್ಕಳು ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಕಾಗದದ ಗಾಳಿಪಟ ಸ್ವತಃ ತಯಾರಿಸಿ, ಅವುಗಳಿಗೆ ಸೂತ್ರ ಕಟ್ಟಿ, ಹಾರಿಸಿ ಸಂತೋಷಪಟ್ಟರು. ಹೀಗೆ ಅರಳೀಕಟ್ಟೆ ಒಂದು ಕಲಿಕಾ ಕಾರ್ನರ್ ಆಗಿ ತನ್ನ ಕಾರ್ಯವನ್ನು ಪ್ರಾರಂಭಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕಿ ಜಯಶ್ರೀ ಎಂ. ವಹಿಸಿಕೊಂಡಿದ್ದರು. ಗ್ರಾಮದ ಗಣ್ಯರಾದ ವಾಯ್.ಎಸ್. ರೇವಡಿಹಾಳ, ಮಂಜುನಾಥ ಹುಬ್ಬಳ್ಳಿ, ಎಂ.ವಾಯ್.ಸವದತ್ತಿ, ಶಿಕ್ಷಕರಾದ ಶಂಭುಲಿAಗಪ್ಪ ಪೂಜಾರ, ಮಂಗಳಾ ಕಮ್ಮಾರ ಉಪಸ್ಥಿತರಿದ್ದರು. ಕುಮಾರಿ ಪೂರ್ಣಿಮಾ ಹಾಗೂ ಸಂಗಡಿಗರು ಸಂವಿಧಾನ ಗೀತೆ ಹಾಡಿದರು. ಕನ್ನಡ ಭಾಷಾ ಶಿಕ್ಷಕರಾದ ಅಶೋಕ ಈರಗಾರ ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾದ ಚಂದ್ರಶೇಖರ ವಂದಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ