- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಾವೇರಿ: ಸ್ಥಳೀಯ ದಾನೇಶ್ವರಿ ನಗರದ ಪದವಿ ಪೂರ್ವ ನೌಕರರ ಭವನದಲ್ಲಿ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಧಾರವಾಡ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿ ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನ ಆಚರಿಸಲಾಯಿತು.
ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ನ ಕಾರ್ಯದರ್ಶಿ ಹನುಮೇಶ ಸಕ್ಕರಿ ಉದ್ಘಾಟಿಸಿದರು. ಶೇಷಗಿರಿ ಕಲಾ ತಂಡದ ಎಸ್.ಎಲ್ ಸಂತೋಷ ಪ್ರಾಸ್ತಾವಿಕವಾಗಿ, ಡಾ.ಎಸ್.ಪಿ. ಗೌಡರ ಅವರು ಶಾಂತಕವಿಗಳ ಜೀವನ ಮತ್ತು ಸಾಧನೆ, ಜಾನಪದ ರಂಗಭೂಮಿ ಸವಾಲುಗಳು ಹಾಗೂ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು ಹವ್ಯಾಸಿ ರಂಗಭೂಮಿ ಹೊಸ ಆವಿಷ್ಕಾರಗಳು ಕುರಿತು ಮಾತನಾಡಿದರು.
![]() |
ದಾನೇಶ್ವರಿ ನಗರದ ಪದವಿ ಪೂರ್ವ ನೌಕರರ ಭವನದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನ ಆಚರಿಸಲಾಯಿತು. |
ಶಮಂತಕುಮಾರ ಕೆ.ಎಸ್ ಹಾಗೂ ಸಂಗಡಿಗರು ಶಾಂತಕವಿಗಳ ನಾಟಕದ ದೃಶ್ಯ ಅಭಿನಯಿಸಿದರು. ಮಹಾಂತೇಶ ಹಾಗೂ ಸಂಗಡಿಗರು ಶಾಂತಕವಿಗಳ ಉಷಾಹರಣ ನಾಟಕದ ರಕ್ಷಿಸು ಕರ್ನಾಟಕ ದೇವಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಶಂಕರ ತುಮ್ಮಣ್ಣನವರ ಹಾಗೂ ಸಿದ್ದಪ್ಪ ರೊಟ್ಟಿ ಏಕಪಾತ್ರಾಭಿನಯ ನಡೆಸಿಕೊಟ್ಟರು. ಕಲಾವಿದ ರವೀಂದ್ರ ಮಳಿಗಿ ಹಾಗೂ ಸಂಗಡಿಗರಿಂದ ಗೀತ ಗಾಯನ ಜರುಗಿತು.
ಎಸ್.ಎನ್. ದೊಡ್ಡಗೌಡ್ರ, ಈರಣ್ಣ ಬೆಳವಡಿ, ಶಂಕರ ಸುತಾರ, ಸತೀಶ ಎಂ.ಬಿ. ಆರ್.ಸಿ. ನಂದಿಹಳ್ಳಿ ಹಾಗೂ ಸಾಹಿತಿ ಕಲಾವಿದರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ.ಗೀತಾ ಸುತ್ತಕೋಟಿ ನಿರೂಪಿಸಿದರು. ರೇಣುಕಾ ಗುಡಿಮನಿ ಸ್ವಾಗತಿಸಿದರು. ಸೋಮನಾಥ ಡಿ ವಂದಿಸಿದರೆಂದು ಪ್ರಕಟಣೆಯಲ್ಲಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ