- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಾವೇರಿ: ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನ.೨೧ರಿಂದ ನ.೨೪ರವರೆಗೆ ನಾಲ್ಕು ದಿನಗಳ ಕಾಲ ಭಾವಚಿತ್ರ ತರಬೇತಿ ಕಾರ್ಯಾಗಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಜರುಗಲಿದೆ.
ಕಲಾವಿದ ಡಾ.ಸಿ.ಡಿ. ಜಟ್ಟೆಣ್ಣವರ ಉದ್ಘಾಟಿಸುವರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ ಅಧ್ಯಕ್ಷತೆ ವಹಿಸುವರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ರವಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಹರೀಶ ಮಾಳಪ್ಪನವರ, ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಮುಖ್ಯಸ್ಥೆ ವೇದಾರಾಣಿ ದಾಸನೂರ ಮುಖ್ಯ ಅತಿಥಿಗಳಾಗಿ ಹಾಗೂ ಕಲಾವಿದ ದಯಾನಂದ ಕಾಮಕರ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿರುವರು.
ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರಾದ ಎಂ.ಮನ್ಮೋಹನ್, ಅನ್ನಪೂರ್ಣ, ಬಸವರಾಜ ಹಕ್ಕಿ, ವೀರೇಶ ಸಿದ್ಧಲಿಂಗಯ್ಯ, ಕಲ್ಮೇಶ ಬಡಿಗೇರ, ಬಸವರಾಜ ನರಸಾಪುರ, ರಾಘವೇಂದ್ರ ಆಚಾರಿ, ರಾಘವೇಂದ್ರ ನಿರೋಣಿ, ಗುರುನಾಥ, ತಿಮ್ಮನಗೌಡ ಪಾಟೀಲ, ಶಿವರಾಜ ಮೆಳ್ಳೆಗಟ್ಟಿ, ಬಸಮ್ಮ ನಿಂಗಪ್ಪನವರ, ಸಂತೋಷ ಜಿ, ದಿಲೀಪ್ ಹಾಗೂ ಮಹೇಶ ಬೆಣಗೇರಿ ಸೇರಿದಂತೆ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ