- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯದ ಜೊತೆಗೆ ಸದೃಡ ಮನಸ್ಸು ಏಕಾಗ್ರತೆ ಹಾಗು ದೈಹಿಕ ಕಸರತ್ತುಗಳನ್ನು ಭರತನಾಟ್ಯದಲ್ಲಿ ಕಲಿಯಬಹುದು : ಡಾ. ಆನಂದ ಪಾಂಡುರಂಗಿ ಅಭಿಪ್ರಾಯ.
ಸಾಕೇತ ಸ್ಕೂಲ್ ಆಫ್ ಡ್ಯಾನ್ಸ, ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಆಶ್ರಯದಲ್ಲಿ ಇತ್ತಿಚೇಗೆ ಕುಲಪುರೋಹಿರ ಆಲೂರ ವೆಂಕಟರಾವ ಭವನದ ರಂಗಮಂದಿರದಲ್ಲಿ ದಿನಾಂಕ ೦೩.೧೧.೨೦೨೪ ರಂದು ಸಾಯಂಕಾಲ ೬.೦೦ ಘಂಟೆಗೆ ನಡೆದ ನೃತ್ಯೋದಯ ಕರ್ನಾಟಕ ಸಂಗೀತ ಮತ್ತು ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ ಯಶ್ಸಸ್ವಿಗೊಂಡಿತು.
ಹಿರಿಯ ಮನೋವೈದ್ಯರಾದ ಡಾ. ಆನಂದ ಪಾಂಡುರಂಗಿ ನೃತ್ಯೋದಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ ಭರತನಾಟ್ಯದಲ್ಲಿ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠ ಪ್ರಕಾರವಾಗಿದ್ದು ಇದರಲ್ಲಿ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯದ ಜೊತೆಗೆ ಸದೃಡ ಮನಸ್ಸು ಏಕಾಗ್ರತೆ ಹಾಗು ದೈಹಿಕ ಕಸರತ್ತುಗಳನ್ನು ಕಲಿಯುವುದರ ಜೊತೆಗೆ ಎಲ್ಲ ವಿಧಗಳಲ್ಲಿ ಶ್ರೇಯಸ್ಸನ್ನು ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಯುವ ಪೀಳಿಗೆಗಳು ಇಂತಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಅಲ್ಲದೆ ಕರ್ನಾಟಕ ಸಂಗೀತ ಮತ್ತು ಭರತನಾಟ್ಯ ಒಂದಕ್ಕೊಂದು ಪೂರಕವಾಗಿದ್ದು ಮನಸ್ಸನ್ನು ಮುದಗೊಳಿಸುವದರ ಜೊತೆಗೆ ಹಲವಾರು ಸಮಸ್ಯೆಗಳಿಂದ ದೂರವಿಡಲು ಇದು ಸಹಕಾರಿಯಾಗುತ್ತದೆ ಹಾಗೂ ಪ್ರತಿಯೊಬ್ಬರು ತಮ್ಮ ಗುರುಗಳನ್ನು ಪೂಜಿಸುವುದರ ಮೂಲಕ ಗುರುಶಿಷ್ಯ ನೀಡುವ ಪರಂಪರೆ ಇದಾಗಿದ್ದು ವೈಶಿಷ್ಠಪೂರ್ಣವೆಂದು ಮಾತನಾಡಿದರು.
ಇನ್ನೊಬ್ಬ ಅತಿಥಿಗಳಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ ಸಾಂಸ್ಕೃತಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸರ್ವತೊಮುಖ ಬೆಳವಣಿಗೆ ನೃತ್ಯ ಒಂದು ಪ್ರಧಾನ ಅಂಗವಾಗಿ ಸಾಧ್ಯವಾಗುವುದಲ್ಲದೆ ಮುಂದೆ ಮಕ್ಕಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಇದು ಸಹಾಯಕವಾಗುತ್ತದೆ. ಇಂದು ನಾವು ಹಲವಾರು ಸಂಘಸಂಸ್ಥೆಗಳಿಗೆ ಅನುದಾನವನ್ನು ನೀಡಿದ್ದು ಅವುಗಳು ಸಮರ್ಪಕವಾಗಿ ಅನುದಾನವನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ನೀಡಬೇಕು ಅಲ್ಲದೆ ಇಂದು ಕರ್ನಾಟಕ ಸಂಗೀತ ಮತ್ತು ಭರತನಾಟ್ಯ ಮಕ್ಕಳು ತಮ್ಮ ಪ್ರತಿಭೆ ತಕ್ಕಂತೆ ಶಿಕ್ಷಣವನ್ನು ಪಡೆಯುತ್ತಿದ್ದು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಉಜ್ವಲ ಭವಿಷ್ಯವನ್ನು ಪಡೆಯಬೇಕಾದುದು ಮಕ್ಕಳ ಕರ್ತವ್ಯವಾಗಿದೆ ಹಾಗೂ ಪಾಲಕರು ಸಹ ಮಕ್ಕಳ ಬೆಳವಣಿಗೆ ದೃಷ್ಠಿಯಿಂದ ಅವರನ್ನು ಸರಿಯಾದ ಮಾರ್ಗದಲ್ಲಿ ಸಾಗುವಂತೆ ಸಲಹೆಗಳನ್ನು ನೀಡುವುದರ ಮೂಲಕ ಅವರನ್ನು ಬೆಳೆಸಬೇಕು ಎಂದರು.
ಡಾ. ಕಿರಣ ಕುಲಕರ್ಣಿ ತಮ್ಮ ಅಧ್ಯಕ್ಷತೆಯ ಭಾಷಣದಲ್ಲಿ ಮಾತನಾಡಿ ಸಾಕೇತ ಸ್ಕೂಲ್ ಆಫ್ ಡ್ಯಾನ್ಸ ಇದು ಯುವ ಕಲಾವಿದರ ವೇದಿಕೆಯಾಗಿದ್ದು ಇಲ್ಲಿ ಹಲವಾರು ಸಾಂಸ್ಕೃತಿಕ ಮರೆಗು ನೀಡುವಂತಹ ಕಲೆಯನ್ನು ಬಿಂಬಿಸುವAತಹ ಸಂಸ್ಥೆಯಾಗಿದೆ ಹಾಗೂ ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಂಡು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ ಎಂದರಲ್ಲದೆ ನಮ್ಮ ಸಂಸ್ಕೃತಿಯನ್ನು ನಾವು ಬೆಳೆಸಬೇಕು ಪಾಲಕರು ತಮ್ಮ ಮಕ್ಕಳಿಗೆ ಸೂಕ್ತ ಸಲಹೆ ನೀಡುವುದರ ಮೂಲಕ ಕಲೆಯನ್ನು ಬೆಳೆಸಬೇಕು ಎಂದರು.
ಮೊದಲು ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ವಿದೂಷಿ ವಾಣಿ ಉಡುಪಿ ಶುಶ್ರಾವ್ಯವಾಗಿ ಹಾಡಿ ರಂಜಿಸಿದ್ದು, ಹಿನ್ನಲೆಯಲ್ಲಿ ತಬಲಾ ಅನೀಲ ಕೃಷ್ಣಾ ಮೇತ್ರಿ ವಾಯೋಲೀನ್ ಪಂಡಿತ ಶಂಕರ ಕಬಾಡಿ ಸಾಧಿ ನೀಡಿದರು, ನಂತರ ಯುವ ನೃತ್ಯಪಟು ಹುಬಳ್ಳಿಯ ವಿದೂಷಿ ರೇವತಿ ಘೊಖಲೆ ಅವರ ನೃತ್ಯವು ಕೂಡಾ ಆಂಗಕಾಭಿನಯಗಳ ಜೊತೆಗೆ ಆಕರ್ಷಿಯವಾಗಿ ರಂಗಮಂಚದಲ್ಲಿ ಮೂಡಿಬಂದಿದ್ದು ಆತ್ಮೀಯವಾಗಿ ಅವರನ್ನು ಸಾಕೇತ ಸ್ಕೂಲ್ ಆಫ್ ಡ್ಯಾನ್ಸ ವತಿಯಿಂದ ಗೌರವಿಸಲಾಯಿತು ಅನಂತರದಲಿ ಸಾಕೇತ ಸ್ಕೂಲ ಆಫ್ ಡ್ಯಾನ್ಸನ ಹಿರಿಯ ವಿದ್ಯಾರ್ಥಿಗಳಾದ ಸುಶ್ರಾö್ಯವ್ಯ ಕುಲಕರ್ಣಿ, ಅಶ್ವಿನಿ ಜಗ್ಗಲ್, ಸೃಷ್ಠಿ ಪಾಟೀಲ, ಗುರುದೇವಿ ತುಬಂರಗುಡ್ಡಿ, ಸಾಕ್ಷೀ ಕುಲಕರ್ಣಿ, ಶೃಧ್ಧಾ ನವಲೆ, ಅನನ್ಯ ಪಾಲನಕರ, ಸೃಷ್ಠೀ ದೊಡಮನಿ, ಹಾಗೂ ರಕ್ಷಾ ಗಲಗಲಿ ಪುಷ್ಪಾಂಜಲಿಯೊಂದಿಗೆ ಗಣೇಶ ಸ್ತುತಿ, ಅಲಾರಿಪು, ಕೌತುವಂ, ಭರತನಾಟ್ಯದಲ್ಲಿರುವ ಮಹತ್ವದಲ್ಲಿ ಒಂದಾದ ಜತಿಸ್ವರ, ತಿಲ್ಲಾಣ ನೃತ್ಯಗಳನ್ನು ಪ್ರದರ್ಶಿಸಿದರು. ಕೊನೆಯಲ್ಲಿ ದೇಶಭಕ್ತಿಗೀತೆ ಎದ್ದು ಬರಲು ಹಚ್ಚೆವು ಕನ್ನಡದ ದೀಪ ನೃತ್ಯ ಕಿರಿಯ ವಿದ್ಯಾರ್ಥಿಗಳ ಈ ನೃತ್ಯ ಮನಮೊಹಕವಾಗಿ ಪ್ರಸ್ತುತಪಡಿಸಿ ಎಲ್ಲರ ಮನಸೂರೆಗೊಂಡಿದ್ದು ಕಣ್ಮನ ತಣಿಸಿತು. ಪ್ರತಿಯೊಂದು ನೃತ್ಯವು ಪ್ರೇಕ್ಷಕರ ಚಪ್ಪಾಳೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿ ಹೊರಹೊಮ್ಮಿದ್ದು ವಿಶೇಷವಾಗಿ ಗಮನಾರ್ಹ ಪ್ರದರ್ಶನ ನೀಡಿದರು.
ಯುವ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹಕವಾಗಿ ಸಹಕಾರ ನೀಡಿದ ವಿದೂಷಿ ಸೀಮಾ ಕಿರಣ ಕುಲಕರ್ಣಿ ಪ್ರಸಾದನದಲ್ಲಿ ನೃತ್ಯಾಂಗನೆಯರ ಹಾವಭಾವಗಳಿಗೆ ತಕ್ಕಂತೆ ರಂಗದ ಮೇಲೆ ಮೆರಗು ನೀಡಿದ್ದು ಧಾರವಾಡದ ಸ್ನೇಹಾ ಹಾಗೂ ಸಂತೋಷ ಮಹಾಲೆ ಹಾಗೂ ವಸ್ತçವಿನ್ಯಾಸದಲ್ಲಿ ಮುಕ್ತಾ ವೇರ್ಣೇಕರ ಕಲಾವಿದೆ ರಂಗದ ಮೇಲೆ ಆಕರ್ಷಣಿಯವಾಗಿ ಮೂಡಿಬರಲು ಸಹಕರಿಸಿದ್ದು ಹುಮ್ಮಸ್ಸು ನೀಡಿತು. ಬಸವರಾಜ ಅರಳಿಮಠ ಛಾಯಾಗ್ರಹಣ ಮತ್ತು ಉತ್ತಮ ವಿನ್ಯಾಸದ ಕಾರ್ಡನ್ನು ರಾಘವೇಂದ್ರ ಕುಕನೂರ. ಡಾ. ಪವಿತ್ರಾ ಜೈನ್ ಕಾರ್ಯಕ್ರಮ ನಿರೂಪಿಸಿದರು ಹುಬ್ಬಳ್ಳಿ-ಧಾರವಾಡ ಹಿರಿಯ ಕಿರಿಯ ನೃತ್ಯಗುರುಗಳು ಉಪಸ್ಥಿತರಿದ್ದರು. ಗಂಧರ್ವ ಮಹಾವಿದ್ಯಾಲಯ ಮುಂಬಯಿ ವತಿಯಿಂದ ನಡೆದ ಪರೀಕ್ಷೆಯಲ್ಲಿ ಶ್ರೇಯಸ್ಸನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಇದರ ಹಿಂದೆ ಸಾಕೇತ ಸ್ಕೂಲ್ ಆಫ್ ಡ್ಯಾನ್ಸನ ವಿದೂಷಿ ಸೀಮಾ ಕುಲಕರ್ಣಿಯವರ ಪರಿಶ್ರಮ ಸಾರ್ಥಕವೆನಿಸಿದ್ದು ನಿಜವಾಗಿದ್ದು ವಿದ್ಯಾರ್ಥಿಗಳು ಪಾಲಕರ ಪರಿಶ್ರಮವು ಎದ್ದು ಕಾಣುತಿತ್ತು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ