ಕಾದಂಬರಿ- ಸಂಚಿಕೆ -35

ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ.

 ಹಾವೇರಿ:- ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾರ್ವತ್ರಿಕ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಸಾಮರಸ್ಯ, ಭಾವೈಕ್ಯತೆ ಮತ್ತು ಬಹುತ್ವ ಪರಂಪರೆಯ ಸಂರಕ್ಷಣೆಗಾಗಿ ನಡೆದ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) 8ನೇ ಜಿಲ್ಲಾ ಸಮ್ಮೇಳನದಲ್ಲಿ 21 ಜನರ ನೂತನ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಯಿತು.

ನೂತನ ಹಾವೇರಿ ಜಿಲ್ಲಾಧ್ಯಕ್ಷರಾಗಿ ಬಸವರಾಜ ಎಸ್, ಕಾರ್ಯದರ್ಶಿ ದುರುಗಪ್ಪ ಯಮ್ಮಿಯವರ, ಉಪಾಧ್ಯಕ್ಷರಾಗಿ ಮುತುರಾಜ್ ದೊಡ್ಡಮನಿ, ಗೌತಮ ಸಾವಕ್ಕನವರ, ದೇವರಾಜ ಅಕ್ಕಸಾಲಿ, ಸುಜಾತ ಕಮ್ಮಾರ, ಶೃತಿ ಆರ್ ಎಮ್ ಸಹ ಕಾರ್ಯದರ್ಶಿಗಳಾಗಿ ಅಣ್ಣಪ್ಪ ಕೊರವರ್, ಪ್ರಜ್ವಲ್ ಹರಿಜನ, ಲಲಿತಾ ಹಾವೇರಿ, ಪೂರ್ಣಿಮಾ ಡವಗಿ ಸದಸ್ಯರು ಬಸವರಾಜ ಕೊಣಸಾಲಿ, ಮಹೇಶ್ ಮರೋಳ, ರಕ್ಷಿತಾ ಡವಗಿ, ಫಾತೀಮ್ ಶೇಖ್, ವಿಜಯ ಶಿರಹಟ್ಟಿ, ಕೀರ್ತನಾ ಹಿರಿಯಕ್ಕನವರ, ಸುಲೇಮಾನ್ ಮತ್ತಿಹಳ್ಳಿ ಅವರನ್ನು ಸಮ್ಮೇಳನದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.

ಕಾಮೆಂಟ್‌ಗಳು