ಕಾದಂಬರಿ- ಸಂಚಿಕೆ -35

ಮಹಾಭಾರತದ ಕುರುಕ್ಷೇತ್ರ ಯುದ್ಧ ಭೂಮಿ ಆತ್ಮಾವಲೋಕ ಹಚ್ಚುತ್ತದೆ.

ಧಾರವಾಡ: ವ್ಯಾಸ ಮಹಾಭಾರತವನ್ನು ಆಧರಿಸಿ ಕನ್ನಡ ಸಾಹಿತ್ಯದಲ್ಲಿ ಪಂಪ,ರನ್ನ, ಕುಮಾರವ್ಯಾಸ, ಸಾಳ್ವ ಮೊದಲಾದವರು ಮಹಾಭಾರತವನ್ನು ಮಾನವೀಯ ಹಿನ್ನೆಲೆಯಲ್ಲಿ ಭಗವಲೀಲಾ ವಿಲಾಸದ ನೆಲೆಯಲ್ಲಿ ಬರೆದಿದ್ದರು ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣ, ಬೀಷ್ಮ, ದುರ್ಯೋಧನ ಧೃತರಾಷ್ಟ್ರ, ಧರ್ಮರಾಜ ಪಾತ್ರಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಸಹೃದಯರನ್ನು ವಿವೇಚನೆಗೆ ಹಚ್ಚುತ್ತದೆ. ರಣರಂಗದ ಭೀಭಿತ್ಸ, ವರ್ಣನೆ, ಗಾಯಾಳುಗಳ ನರಳಾಟ, ವಿಧವೆಯರ ಅಳು, ಆತಂಕ, ಭೂತಗಳ ಕುಣಿದಾಟ ಹೆಣಗಳರಾಶಿಗಳು ಇವೆಲ್ಲವೂ ಯುದ್ಧದ ಭೀಕರತೆ ನಾಶವನ್ನು ತಿಳಿಸಿದರೆ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಅವಲೋಕಿದರೆ ಪ್ರಮುಖ ಪಾತ್ರಗಳ ವ್ಯಕ್ತಿತ್ವ ಮಾನಸಿಕ ಸ್ಥಿತಿ ಆಪ್ತ ಸಮಾಲೋಚನೆ ವಿಚಾರ ಮಾಡಲು ಹಚ್ಚುತ್ತವೆ ಎಂದು ಡಾ.ಮಲ್ಲಪ್ಪ ಬಂಡಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಮತ್ತು ಕಿಟೆಲ್ ಕಲಾ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಜೆ ಎಮ್ ನಾಗಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ತಿಳಿಸಿದರು.


ಇದೇ ಸಂದರ್ಭದಲ್ಲಿ ಡಾ. ಜೆ ಎಮ್ ನಾಗಯ್ಯ ರಚಿಸಿದ ಶಾಸನಗಳ ಪ್ರಕಾರಗಳು ಪುಸ್ತಕವನ್ನು ಕಿಟೆಲ್ ಕಲಾ ಮಹಾವಿದ್ಯಾಲಯದ ಪ್ರಚಾರ್ಯ ಡಾ. ರೇಖಾ ಜೋಗುಳ ಅವರು ಲೋಕಾರ್ಪಣೆ ಮಾಡಿ ಶಾಸನಗಳ ಪ್ರಕಾರಗಳು ಕೃತಿ ಕನ್ನಡ ಮತ್ತು ಇತಿಹಾಸ ವಿದ್ಯಾರ್ಥಿಗಳ ಸಂಶೋಧನೆಗೆ ಪೂರಕವಾಗುತ್ತದಲ್ಲದೆ. ಕರ್ನಾಟಕದ ಪ್ರಾಚೀನ ಸಂಸ್ಕೃತಿಯ ಮೇಲೆ ಬೇಳಕು ಚೆಲ್ಲುತ್ತದೆಂದು ಪ್ರಶಂಸೆ ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಸಚಿವರಾದ ಶ್ರೀ ಆರ್ ಎಮ್ ಸವಣೂರ ಅವರನ್ನು ಸನ್ಮಾನ ಮಾಡಲಾಯಿತು. ಕೃತಿಕಾರರಾದ ಡಾ.ಜೆ ಎಮ್ ನಾಗಯ್ಯ ಅವರು ಬೋಧಕರು ನಿರಂತರ ಅಧ್ಯಯನ-ಅಧ್ಯಾಪನ ಮಾಡಬೇಕು ಕರ್ತವ್ಯ ಬದ್ಧತೆ ಹೊಂದಿರಬೇಕು. ಸಂಶೋಧನೆ- ಸೃಜನಶೀಲ ಸಾಹಿತ್ಯ ರಚನೆದಲ್ಲಿ ತೋಡಗಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ ಡಾ. ಲಿಂಗರಾಜ ಅಂಗಡಿ ಅವರು ಕಿಟೆಲ್ ಕಲಾ ಮಹಾವಿದ್ಯಾಲಯಕ್ಕೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೂ ಅನ್ಯೋನ್ಯ ಸಂಬAಧ ಹೊಂದಿವೆ ಎಂದರು ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಶಾಲೆ-ಕಾಲೇಜುಗಳಲ್ಲಿ ದತ್ತಿ ಉಪನ್ಯಾಸಗಳನ್ನು ಏರ್ಪಡಿಸುತ್ತ ಕನ್ನಡ-ಕನ್ನಡಿಗ ಕರ್ನಾಟಕದ ಪ್ರಜ್ಞೆ ಮೂಡಿಸುವ ಕೆಲಸದಲ್ಲಿ ತೊಡಗಿದೆ ಎಂದರು. ಪ್ರೊ. ಡೇನಿಯಲ್ ಪ್ರವಿಣಕುಮಾರ ಸ್ವಾಗತಿಸಿದರು ಪ್ರೊ. ರಕ್ಷಿತಾ ಪಾರ್ಥಿಸಿದರು ದತ್ತಿ ದಾನಿಗಳಾದ ಡಾ.ಎಸ್ ಎಸ್ ದೊಡಮನಿ ವಂದಿಸಿದರು ಡಾ. ನ್ಯಾಮತಿ ಸರ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಕೆ ಎಸ್ ಕೌಜಲಗಿ, ಪ್ರೊ. ನಾಗಭೂಷಣ, ಡಾ ಕಲ್ಲಯ್ಯ ಹಿರೇಮಠ, ಡಾ.ರಾಜೇಶ್ವರಿ ಸಾಲಿ, ಮೋಹನ ಗುಂಡ್ಲೂರ,ಶ್ರೀ ವಿಜಯಾದಿತ್ಯ, ಇಂದೂ ಸಾಲಿ ಮೊದಲಾದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು