ಕಾದಂಬರಿ- ಸಂಚಿಕೆ -35

ನವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ - ಡಾ. ಎಮ್ ಆರ್ ಸೊಲಾಪೂರ

ಧಾರವಾಡ: ರಾಷ್ಟ್ರ ನಿರ್ಮಾಣ ನವ ಸಮಾಜ ನಿರ್ಮಾಣದಲ್ಲಿ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಇಂದಿನ ಶಿಕ್ಷಣ ಸಮಾಜ ಮುಖಿ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಾನವ ಅಭಿವೃದ್ಧಿಗೆ ಶ್ರಮಿಸುತ್ತದೆ. 

ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಸಮಾಜದ ಮೇಲೆ ಪ್ರಭಾವ ಬೀರುವಂಥ ವ್ಯಕ್ತಿತ್ವ ಬೆಳೆಸಿಕೊಂಡರೆ ಮಾತ್ರ ಶಿಕ್ಷಕ ರಾಷ್ಟ್ರ ಶಿಲ್ಪಿ ಎಂಬ ಹೆಸರಿಗೆ ಗೌರವ ತರಬಲ್ಲರು. ಶಿಕ್ಷಕ - ಶಿಷ್ಯ ಪರಂಪರೆಗೆ ವಿಶೇಷ ಮಹತ್ವವಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಮ್ ಆರ್ ಸೊಲಾಪೂರ ಅವರು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಅಧ್ಯಾಪಕರುಗಳ ಸಂಘಗಳ ಒಕ್ಕೂಟ, ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಧಾರವಾಡ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಅಧ್ಯಾಪಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೃಷಿ ವಿಶ್ವವಿದ್ಯಾಲಯ, ಧಾರವಾಡ ನಿವೃತ ಡೀನ್ ಹಾಗೂ ನ್ಯಾಯವಾದಿಗಳು ಡಾ.ಚಿದಾನಂದ ಮನ್ಸೂರ ಅವರು ಡಾ. ಸರ್ವ ಪಳ್ಳಿ ರಾಧಾಕೃಷ್ಣನ್ ಅವರ ಆದರ್ಶ ಮತ್ತು ಮೌಲ್ಯಯುತ ವ್ಯಕ್ತಿತ್ವ ಇಂದಿನ ಶಿಕ್ಷಕರಿಗೆ ಮಾದರಿಯಾಗಿದೆ ಎಂದರು. ಡಾ.ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಸಮಾಜ ಮತ್ತು ಶಿಕ್ಷಕರ ನಡುವೆ ಅವಿನಾಭಾವ ಸಂಬಂಧ ಅನೋನ್ಯವಾಗಿರಬೇಕೆಂದು ತಿಳಿಸಿದರು . 

ಇದೇ ಸಂದರ್ಭದಲ್ಲಿ 12 ಜನ ಪ್ರಾಧ್ಯಾಪಕರನ್ನು ಸನ್ಮಾನ ಮಾಡಲಾಯಿತು.ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ ಹಡಗಲಿ ನಿರೂಪಿಸಿದರು. ಡಾ . ಎಸ್ ಎಸ್ ದೊಡಮನಿ ವಂದಿಸಿದರು. ಶ್ರೀಮತಿ ಪ್ರಮೀಳಾ ಜಕ್ಕನ್ನವರ ಪ್ರಾರ್ಥಿಸಿದರು.ಡಾ. ರತ್ನಾ ಕಡಪಟ್ಟಿ, ಡಾ. ಆಶಾ ನಿಡವನಿ, ಡಾ. ರಹತ ಉನ್ನಿಸಾ, ಡಾ. ಸಿ ಎಸ್ ಹಿರೇಮಠ, ಡಾ. ಎಫ್ ಎಚ್ ನದಾಫ, ಡಾ. ಪಾನಬುಡೆ, ಡಾ. ಜಿನದತ್ ಹಡಗಲಿ, ಡಾ. ಟಿ ವಿ ಚವ್ಹಾಣ, ಪ್ರೊ. ಎಸ್ ಎನ್ ಭೋಸಲೆ, ಡಾ. ಜಿ ಎಮ್ ಪಾಟೀಲ, ಡಾ. ಶಿವಾನಂದ ಕಲ್ಲೂರ, ಡಾ. ಜಿ ನೆಹಲಾನಿ, ಡಾ. ಚಿದಾನಂದ ಮನ್ಸೂರ ಹಾಗೂ ಡಾ. ಎಮ್ ಆರ್ ಸೊಲಾಪೂರ ಮುಂತಾದವರನ್ನು ಸನ್ಮಾನ ಮಾಡಲಾಯಿತು. ನಿವೃತ್ತ ಜಂಟಿ ನಿರ್ದೇಶಕರಾದ ಪ್ರೊ. ಡಿ ಎಮ್ ನಿಡವನಿ, ಬಿ ಎ ಪಾಟೀಲ, ಬಿ ಜಿ ಬಾರ್ಕಿ, ಮಹಾಂತೇಶ ನರೇಗಲ್, ಬಿ ಎಫ ಗಾಮನಗಟ್ಟಿ, ಎಸ್ ಎಮ್ ದಾನಪ್ಪ ಗೌಡರ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು