- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಇವರ ಸಹಯೋಗದಲ್ಲಿ ಪಂ. ಪುಟ್ಟರಾಜ ಗವಾಯಿಗಳ 14 ನೆಯ ಪುಣ್ಯಸ್ಮರಣೆ ಅಂಗವಾಗಿ ಸಂಗೀತೋತ್ಸವ ಕಾರ್ಯಕ್ರಮವನ್ನು ದಿನಾಂಕ 22-09-2024 ರಂದು ಸಂಜೆ 5-00ಕ್ಕೆ ಕರ್ನಾಟಕ ಕುಲಪುರೋಹಿತ ಶ್ರೀ ಆಲೂರ ವೆಂಕಟರಾವ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಾಯ್ ಬಿ ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ನಾಗೇಶ ಅಣ್ಣಿಗೇರಿ ನೆರವೆರಿಸುವರು. ಅಧ್ಯಕ್ಷತೆಯನ್ನು ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಧಾರವಾಡ ಅಧ್ಯಕ್ಷರಾದ ಶ್ರೀ ಎಮ್ ಎಸ್ ಫರಾಸ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ, ಕೆ. ಇ ಬೋರ್ಡ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಮೋಹನ ಸಿದ್ಧಾಂತಿ, ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಡಾ. ಉದಯ ರಾಯ್ಕರ, ಕರ್ನಾಟಕ ಥಿಂಕರ್ಸ್ ಫೋರಂ ರಾಜ್ಯ ಘಟಕದ ಅಧ್ಯಕ್ಷರಾದ ಪಿ.ಎಚ್. ನೀರಲಕೇರಿ, ಖ್ಯಾತ ಹಿರಿಯ ನ್ಯಾಯವಾದಿಗಳಾದ ಪ್ರಕಾಶ ಉಡಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಕುಮಾರ ಬೆಕ್ಕೇರಿ, ಉದ್ಯಮಿದಾರರು ಹಾಗೂ ಸಮಾಜ ಸೇವಕರಾದ ಚನ್ನಬಸಪ್ಪ ಬಿ ಗೋಕುಲ ಆಗಮಿಸುವರು.
ಹೆಬ್ಬಳ್ಳಿಯ ನೆಹರು ಪಿ ಯು ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ ಆರ್ ರಾಠೋಡ, ನಿವೃತ್ತ ಪ್ರಾಧ್ಯಾಪಕರಾದ ಡಾ. ರತ್ನಾ ಕಡಪಟ್ಟಿ, ಐಟಿಐ ಕಾಲೇಜ.ಹುಬ್ಬಳ್ಳಿಯ ಪ್ರಾಚಾರ್ಯರಾದ ರಾಜೇಶ ಹೊಂಗಲ, ಶಿಕ್ಷಣ ಇಲಾಖೆಯ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕರಾದ ಈಶ್ವರ ಪಶುಪತಿಹಾಳ. ಸಮಾಜ ಸೇವಕರಾದ ಮುರಘೇಂದ್ರ ಸಿ ಯಲಿಗಾರ, ಹಿರಿಯ ಪತ್ರಕರ್ತರಾದ ಬಸವರಾಜ ಆನೇಗುಂದಿ, ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಬಿ ಪಾಟೀಲ, ನೃತ್ಯ ನಿರ್ದೇಶಕರಾದ ಸೈಯದ ಎ ಎಮ್, ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ ಸರ್ಜಾಪುರ ಉಪಸ್ಥಿತರಿರುವರು. ಹಾಗೂ ಈ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಶ್ರೀಮತಿ ಪಂ.ರಾಧಿಕಾ ಕಾಖಂಡಕಿ, ಗಾಯಕರಾದ ಅಶೋಕ ನಿಂಗೋಲಿ, ಚೈತ್ರಾ ಆಲೂರ ಸಂಗೀತ ಕಚೇರಿ ನಡೆಸಿಕೊಡುವರು. ಇವರಿಗೆ ಹಾರ್ಮೋನಿಯಮ್ ಸಾಥನ್ನು ವಿನೋದ ಪಾಟೀಲ ಹಾಗೂ ವಾದಿರಾಜ ದಂಡಾಪೂರ ಇವರು ತಬಲಾ ಸಾಥ ನೀಡುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಗೀತಗಾರರ ಪರಿಚಯ
ಅಶೋಕ ನಿಂಗೋಲಿ:
ಕರ್ನಾಟಕ ಸರ್ಕಾರದ ಪಂ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟನಲ್ಲಿ ಅರೆಸರಕಾರಿ ಉದ್ಯೋಗಿಯಾಗಿದ್ದು ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಂಗೀತ, ಸಾಹಿತ್ಯ, ನಾಟಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ. ಅನೇಕ ಖ್ಯಾತ ಸಂಗೀತಗಾರರಿಗೆ ತಂಬೂರಿ ಸಾಥ್ ನೀಡಿದ್ದಾರೆ. ಸುಗಮ ಸಂಗೀತ ಕಲಿಯುತ್ತಿದ್ದಾರೆ. ಹುಲಗೆಪ್ಪ ಕಟ್ಟಿಮನಿ ಅವರ ನಿರ್ದೇಶನದ ಅಳಿಲು ರಾಮಾಯಣ ನಾಟಕದಲ್ಲಿ ಲಕ್ಷ್ಮಣನ ಪಾತ್ರ; ವಾಲಿ ಸುಗ್ರೀವ ಕಾಳಗ ದೊಡ್ಡಾಟದಲ್ಲಿ ಅಭಿನಯ. ಶ್ರೀ “ಸಾಯಿಚರಣ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಮುಖಾಂತರ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಧಿಕಾ ಕಾಖಂಡಿಕಿ
ಭಾರತೀಯ ಸ್ಟೇಟ್ ಬ್ಯಾಂಕಿನ ಸ್ವಯಂ ನಿವೃತ್ತ ಉದ್ಯೋಗಿಯಾದ ಶ್ರೀಮತಿ ರಾಧಿಕಾ ಕಾಖಂಡಿಕಿ ಹಿಂದುಸ್ತಾನಿ ಸಂಗೀತಗಾರರು, ವಿಜ್ಞಾನದಲ್ಲಿ ಪದವಿ, ಸಂಸ್ಕೃತ ಮತ್ತು ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಕತೆ, ಕವಿತೆ, ಪ್ರಬಂಧಗಳನ್ನು ಬರೆದಿದ್ದಾರೆ. ರಾಜ್ಯದ ಅನೇಕ ಕಡೆ ಹಾಗೂ ಹೊರ ರಾಜ್ಯದಲ್ಲೂ ಶಾಸ್ತ್ರೀಯ, ಲಘು ಶಾಸ್ತ್ರೀಯ, ಭಕ್ತಿ, ಸುಗಮ ಸಂಗೀತ, ದಾಸವಾಣಿ, ವಚನ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಬೇಂದ್ರೆಯವರ ಬಹಳಷ್ಟು ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಬೇಂದ್ರೆಯವರ ಹತ್ತು ಗೀತೆಗಳ ಧ್ವನಿ ಸುರಳಿ 'ನಾದಬೇಕು' ಹೊರತಂದಿದ್ದಾರೆ. 'ನಾದಲೋಲ ಬೇಂದ್ರೆ', 'ನಾದಭೂಪ ಬೇಂದ್ರೆ' ಪ್ರಬಂಧ ಮಂಡಿಸಿದ್ದಾರೆ. ಹರಿದಾಸ ಸಾಹಿತ್ಯದಲ್ಲಿ ಮಹಿಳೆ, ತಾಯಿ ಕುರಿತು ಅನೇಕ ಲೇಖನ ಬರೆದಿದ್ದಾರೆ. ಕುಂದಗೋಳ ಸವಾಯಿ ಗಂಧರ್ವ ಪ್ರಶಸ್ತಿ, ಮುಂಬಯಿ ಕರ್ನಾಟಕ ಸಂಘದ ಸನ್ಮಾನ ಮೊದಲಾದ ಪ್ರಶಸ್ತಿಗಳಿಗೆ ಭಾಜನರು.
ಶ್ರೀಮತಿ ಚೈತ್ರಾ ಆಲೂರ.
ಮೂಲತಃ ವಿಜಯಪುರ ಜಿಲ್ಲೆಯವರಾದ ಚೈತ್ರಾ ಆಲೂರ ಅವರು ಸ್ನಾತಕೋತ್ತರ ಎಮ್ ಸಿ ಎ ಮಾಡಿದ್ದಾರೆ. ಹೈಸ್ಕೂಲಿನಲ್ಲಿ, ಕಾಲೇಜಿನಲ್ಲಿ ಮಕ್ಕಳಿಗೆ ಕಂಪ್ಯೂಟರ್ ಪಾಠ ಮಾಡಿದ್ದಾರೆ. ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ. ಭಕ್ತಿ, ಭಾವ ಗೀತೆಗಳನ್ನು ಹಾಡುತ್ತಿದ್ದರು. ಆಲೂರು ವೆಂಕಟರಾಯರ ಮನೆ ಸೊಸೆಯಾಗಿ ಬಂದ ನಂತರ ಈಗ ಕಳೆದ ಎರಡು ವರ್ಷಗಳಿಂದ ಶ್ರೀಮತಿ ರಾಧಿಕಾ ಕಾಖಂಡಿಕಿ ಅವರ ಹತ್ತಿರ ಶಾಸ್ತ್ರೀಯ, ಲಘು ಶಾಸ್ತ್ರೀಯ, ಭಕ್ತಿ, ಸುಗಮ ಸಂಗೀತ ಕಲಿಯುತ್ತಿದ್ದಾರೆ.
ಇವರಿಗೆ ಹಾರ್ಮೋನಿಯಮ್ ಸಾಥನ್ನು ವಿನೋದ ಪಾಟೀಲ ಹಾಗೂ ವಾದಿರಾಜ ದಂಡಾಪೂರ ಇವರು ತಬಲಾ ಸಾಥ ನೀಡುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ