- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಧಾರವಾಡ : ಶಿಕ್ಷಣ, ಸಾಹಿತ್ಯ- ಸಾಂಸ್ಕೃತಿಕ ರಂಗದಲ್ಲಿ ಹೆಸರಾದ ಧಾರವಾಡ ನಗರದಲ್ಲಿ ಇತ್ತೀಚಿಗೆ ಡಿ. ವಿ. ಹಾಲಭಾವಿ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂ ಲೋಕಾರ್ಪಣೆಗೊಂಡಿತು.
ಇದೇ ಗ್ಯಾಲರಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಡಿ. ವಿ. ಹಾಲಭಾವಿ ಮತ್ತು ವಿ. ಕೆ.ಪಾಟೀಲ ಇವರ ಚಿತ್ರಕಲಾ ಪ್ರದರ್ಶನವನ್ನು ನಾಡೋಜ ವಿ. ಟಿ. ಕಾಳೆ ರವರು ಉದ್ಘಾಟಿಸಿ ಮಾತನಾಡುತ್ತಾ ಚಿತ್ರಕಲಾ ಶಾಲೆಯನ್ನು ಕಟ್ಟಿ ಬೆಳೆಸುವುದು ಬಹಳ ಕಷ್ಟ. ಶ್ರೀ ಡಿ. ವಿ. ಹಾಲಭಾವಿ ಅವರು ಕರ್ನಾಟಕದಲ್ಲಿ ಪ್ರಪ್ರಥಮ ಆರ್ಟ್ ಸ್ಕೂಲನ್ನು ಕಟ್ಟಿ ಬಹಳಷ್ಟು ಕಷ್ಟಪಟ್ಟು ಬೆಳೆಸಿದ್ದಾರೆ. ಇವತ್ತಿನವರೆಗೂ ಸುರೇಶ ಹಾಲಭಾವಿ ಮತ್ತು ಡಾ. ಪಾರ್ವತಿ ಎಸ್. ಹಾಲಭಾವಿಯವರು ಶ್ರೀ ಡಿ. ವಿ. ಹಾಲಭಾವಿಯವರ ನೆನಪಿಗಾಗಿ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬಂದು ಈಗ ಡಿ. ವಿ. ಹಾಲಭಾವಿ ಅವರ ಹೆಸರಿನಲ್ಲಿ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅವರ ಕಲೆಯನ್ನು ಆಸ್ವಾದಿಸಲು ಅನಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ.
ವಿ.ಕೆ. ಪಾಟೀಲ ಅವರು ಡಿ. ವಿ. ಹಾಲಭಾವಿ ಅವರ ಆರ್ಟ್ ಸ್ಕೂಲಿಗೆ ಇನ್‌ಸ್ಪೆಕ್ಟರ್ ಆಗಿ ಬರುತ್ತಿದ್ದರು. ಇವರಿಬ್ಬರ ಸ್ನೇಹ ಬಾಂಧವ್ಯ ಬಹಳ ಅನ್ಯೋನತೆಯಿಂದ ಕೂಡಿತ್ತು. ಆದ್ದರಿಂದ ನಾವು ಡಿ.ವಿ. ಹಾಲಭಾವಿ ಅವರ ಆರ್ಟ್ಗ್ಯಾಲರಿಯಲ್ಲಿ ವಿ.ಕೆ. ಪಾಟೀಲ ಅವರ ಚಿತ್ರಕಲೆಯನ್ನು ಪ್ರದರ್ಶಿಸುತ್ತಿರುವುದು ಸ್ನೇಹ ಬಾಂಧವ್ಯದ ಮಹತ್ವ ಸಮಾಜದಲ್ಲಿ ಮಾದರಿಯಾಗಿದೆ. ಹೀಗೆ ಆರ್ಟ್ ಗ್ಯಾಲರಿಗೆ ಮುಂಬರುವ ದಿನಗಳಲ್ಲಿ ಯುವಕರು ಚಿತ್ರಗಳನ್ನು ನೋಡಿ ಸ್ಪೂರ್ತಿ ಪಡೆದುಕೊಂಡು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿದ್ದ ಅತಿಥಿ ಶ್ರೀಕಾಂತ ವಿ. ಪಾಟೀಲ ಅವರು ಮಾತನಾಡಿ ತಂದೆಯವರಾದ ವಿ.ಕೆ. ಪಾಟೀಲ ಅವರು ಚಿತ್ರಕಲೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ಮುಂಬಯಿ ಮತ್ತು ಕರ್ನಾಟಕಕ್ಕೆ ಕೊಂಡಿಯಾಗಿದ್ದರು. ಮತ್ತೋರ್ವ ಅತಿಥಿ ರತ್ನಮ್ ಮೂರ್ತಿಯವರು ಉಪಸ್ಥಿತರಿದ್ದರು.
ಸುರೇಶ ವಿ. ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಕಲೆ ಹುಟ್ಟಿನಿಂದ ಬಂದಿದ್ದರೆ ಮಾತ್ರ ಆ ಕಲೆ ಶಾಶ್ವತವಾಗಿ ವ್ಯಕ್ತಿಯಲ್ಲಿ ನೆಲೆಯೂರಿರುತ್ತದೆ. ಕಲೆ ಓದಿ ಬರೆಯುವಂಥದ್ದಲ್ಲ. ಚಿತ್ರಕಲೆ ಎದ್ದು ಕಾಣಬೇಕಾದರೆ ನೆರಳು ಬೆಳಕನ್ನು ಚಿತ್ರದಲ್ಲಿ ತೋರಿಸಬೇಕಾಗುತ್ತದೆ. ಅಂದಾಗ ಚಿತ್ರ ಕಲಾವಿದನ ಅನುಭವಕ್ಕೆ ಬಂದದ್ದು, ಚಿತ್ರ ನೋಡುಗರಿಗೂ ಮನವರಿಕೆಯಾಗುತ್ತದೆ. ಕೈಯಿಂದ ತೆಗೆಯುವಂಥ ಚಿತ್ರಕಲೆ ಕಣ್ಮರೆಯಾಗಿದೆ. ವಿಜ್ಞಾನ ಯುಗದಲ್ಲಿ ಕಂಪ್ಯೂಟರ ಗ್ರಾಫಿಕ್ಸ ಪ್ರಭಾವ ಜಾಸ್ತೀಯಾಗಿದೆ. ಹೀಗಾಗಿ ಕೈಯಿಂದ ರಚಿಸಿದ ಚಿತ್ರಕಲೆಗೆ ಯಾರೋಬ್ಬರು ಮಹತ್ವ ಕೊಡುವುದಿಲ್ಲ. ಆದ್ದರಿಂದ ಚಿತ್ರಕಲಾ ಶಾಲೆಗಳು ಮುಚ್ಚಿ ಹೋಗಿವೆ. ಕಳೆದ ಎರಡು ದಶಕಗಳ ಕಾಲದಿದಂದ ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಸರಕಾರ ತುಂಬದೆ ಇದ್ದುದ್ದರಿಂದ, ಚಿತ್ರಕಲಾವಿದರು ಬೇರೆ ವೃತ್ತಿಯಲ್ಲಿ ತೊಡಗಿಕೊಳ್ಳುವಂಥ ಪರಿಸ್ಥಿತಿ ಉದ್ಭವವಾಗಿದೆ. ಎಂದು ವಿಷಾದ ವ್ಯಕ್ತಪಡಿಸಿದರು.
ಡಿ.ವಿ. ಹಾಲಭಾವಿ ಅವರ ಆರ್ಟ್ ಸ್ಕೂಲ್ ದಲ್ಲಿ ಕಲಿತಂಥ ಹಳೇ ವಿದ್ಯಾರ್ಥಿ ವೆಂಕಟೇಶ ಬಡಿಗೇರ ಮತ್ತು ಶಿಕ್ಷಕರಾಗಿ ಸೇವಾ ನಿವೃತ್ತಿ ಪಡೆದ ಶ್ರೀ ಎಸ್.ಎಮ್. ಲೋಹಾರ ಅವರನ್ನು ಸನ್ಮಾನಿಸಿದರು. ಸಮಾರಂಭಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರಾಗಿ ಶ್ರೀ ಚಂದ್ರಕಾಂತ ಬೆಲ್ಲದ ಮಾಜಿ ಶಾಸಕರು, ಸರ್ಕಾರಿ ಕಲಾ ಶಾಲೆಯ ಮುಖ್ಯಸ್ಥರಾದ ಕುರಿಯವರ, ಡಿ.ವಿ. ಹಾಲಭಾವಿ ಅವರ ಮಗಳಾದ ಶ್ರೀಮತಿ ವಿಮಲಾ ಶೀಲವಂತ, ಕಲಾವಿದರಾದ ಬಿ. ಮಾರುತಿ, ಈಶ್ವರ ಜೋಶಿ, ಗರಗ, ಜೆ.ವಿ. ಕಮ್ಮಾರ, ಕಾಟೇನಹಳ್ಳಿ, ಮನೋಹರ ಕಮ್ಮಾರ, ಮಹೇಶ ಚರಂತಿಮಠ, ಕಲಾಶಿಕ್ಷಕಿಯರಾಗಿ ಸೇವಾ ನಿರತ ಶ್ರೀಮತಿ ನಿವೇದಿತಾ ನೇಗಳೂರ, ಸಹನಾ ಭುಜಂಗ, ಮುಂತಾದವರು ಉಪಸ್ಥಿತರಿದ್ದರು.
ಕುಮಾರಿ ಅನನ್ಯ ಬೆಳಗಲಿ ಮತ್ತು ಕುಮಾರಿ ಅಹಲ್ಯಾ ಬೆಳಗಲಿ ಅವರಿಂದ ಪ್ರಾರ್ಥನೆ. ಸುರೇಶ ಡಿ. ಹಾಲಭಾವಿ ಅವರಿಂದ ಸ್ವಾಗತ ಮತ್ತು ಪ್ರಾಸ್ತಾವಿಕ, ಡಾ. ಪಾರ್ವತಿ ಎಸ್. ಹಾಲಭಾವಿ ಅವರಿಂದ ವಂದನಾರ್ಪಣೆ ಜರುಗಿತು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ