ಕಾದಂಬರಿ- ಸಂಚಿಕೆ -35

ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ವಹಿಸಿ, ಸತತ ಪರಿಶ್ರಮದಿಂದ ಓದಿಕೊಂಡು ಯಶಸ್ಸನ್ನು ಗಳಿಸಿ. -ಡಾ. ಲಿಂಗರಾಜ ಅಂಗಡಿ

 ಧಾರವಾಡ: ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ವಹಿಸಿ, ಸತತ ಪರಿಶ್ರಮದಿಂದ ಓದಿಕೊಂಡು ಯಶಸ್ಸನ್ನು ಗಳಿಸಿ,,ಎಂದು ಕಿವಿಮಾತನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಲಿಂಗರಾಜ ಅಂಗಡಿ ಇವರು ಹೇಳುತ್ತಾ,ಕನ್ನಡ ಮಾಧ್ಯಮ ದಲ್ಲಿ ಓದಿದವರು ಉನ್ನತ ಮಟ್ಟದಲ್ಲಿ ಸಾಧನೆಗಳನ್ನು ಮಾಡಿದ್ದಾರೆ ಎಂದರು.. ಇವರು ಸರಕಾರಿ ಪ್ರೌಢ ಶಾಲೆ ಗಾಂಧಿ ನಗರ ಧಾರವಾಡದಲ್ಲಿ ಇಂದು ದಿನಾಂಕ ೧೭.೮.೨೦೨೪ ರಂದು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಆಯೋಜಿಸಿದ್ದ ಚನ್ನಮ್ಮ ಈ ಪಟ್ಟಣಶೆಟ್ಟಿ ದತ್ತಿ, ಈರಪ್ಪ ಗು ಪಟ್ಟಣಶೆಟ್ಟಿ ದತ್ತಿ, ಲಿಂ.ವೀರಪ್ಪ ವೀರಭದ್ರಪ್ಪ ಗಡಾದ.ದತ್ತಿ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮ ಮತ್ತು ವಚನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಉಪನ್ಯಾಸಕರಾದ ಶ್ರೀ ಕೆ ಜಿ ದೇವರಮನಿ ಇವರು ೨೦೨೪.೨೫ ನೆಯ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಗಣಿತ ವಿಷಯದಲ್ಲಿ ಪರಿಷ್ಕೃತ ಪಠ್ಯ ಕುರಿತು ಸಮಗ್ರವಾಗಿ ತಿಳಿಸಿದರು ಪರೀಕ್ಷಾ ಪೂರ್ವ ಸಿದ್ಧತೆ, ಪರೀಕ್ಷಾ ಸಮಯದಲ್ಲಿ,ಪರೀಕ್ಷಾ ನಂತರದ ಕುರಿತು ಉಪನ್ಯಾಸವನ್ನು ನೀಡಿದರು.. 

ಶರಣರ ವಚನಗಳಲ್ಲಿಯ ಚಿಂತನೆ ಕುರಿತು ಶ್ರೀ ಎ ಎಲ್ ಗೋರೇಬಾಳ ಇವರು ಮಾತನಾಡಿದರು.ಬ್ಯಾಂಕಿAಗ್ ವ್ಯವಸ್ಥೆ ಕುರಿತು ವಿವರವಾದ ಮಾಹಿತಿಯನ್ನು ಶ್ರೀ ಅಪ್ಪಾಸಾಹೇಬ ಮಾಲಿಪಾಟೀಲ ನೀಡಿದರು. ಗಣಿತಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬAಧ ಇದೆ ಪ್ರಾಚೀನ ಕಾಲದಲ್ಲಿ ಸಂಗೀತದ ತರಗತಿಗಳಲ್ಲಿ ಗಣಿತ ಹೇಳುತ್ತಿದ್ದರು ಎಂದು ಶ್ರೀ ಎಂ ಎ ಭಾವಿಕಟ್ಟಿ ನಿವೃತ್ತ ಮುಖ್ಯಾಧ್ಯಾಪಕರು ತಿಳಿಸಿದರು. ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರು ಆದ ಶ್ರೀಮತಿ ಮೇಘಾ ಹುಕ್ಕೇರಿ ಇವರು ವಚನ ಗಾಯನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಮಹದೇವ ಕರ್ಜಗಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಮಾತನಾಡಿದರು. ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಂತೇಶ್ ನರೇಗಲ್ಲ ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು..ಶೀತಲ ಸಮಾಜೆ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.ರಾಜಲಕ್ಷ್ಮೀ ಹೆಗಡೆ ಗಣಿತ ಶಿಕ್ಷಕಿಯರು ವಂದಿಸಿದರು..ದೈಹಿಕ ಶಿಕ್ಷಕಿಯರಾದ ಶ್ರೀಮತಿ ಸಾವಿತ್ರಿ ಸಬನೀಸ ಹೂ ಗುಚ್ಛ ಮತ್ತು ಗ್ರಂಥ ನೀಡಿ ಸ್ವಾಗತಿಸಿದರು.

ಕಾಮೆಂಟ್‌ಗಳು