- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ರಂಗಭೂಮಿಯಲ್ಲಿ ವಿಶಿಷ್ಟವಾದ ರೀತಿಯ ಹಲವು ಪ್ರಯೋಗಗಳ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ರಂಗ ನಿರ್ದೇಶಕ ದಿ.ಕೆ ಜಗುಜಂದ್ರ ಅವರ ಹೆಸರಿನಲ್ಲಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಕೊಡಮಾಡಲಾಗುತ್ತಿರುವ ಈ ಪ್ರಶಸ್ತಿ ರಾಷ್ಟ್ರಮಟ್ಟದಲ್ಲಿ ನೀಡುವಂತಾಗಲಿ ಎಂದು ಹಿರಿಯ ನ್ಯಾಯವಾದಿಗಳಾದ ಶ್ರೀ ಪ್ರಕಾಶ ಉಡಿಕೇರಿ ಹೇಳಿದರು.
ಅವರು ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಕಲೋತ್ಸವ-೨೦೨೪ ಹಾಗೂ ರಂಗಚಂದ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈಗಿನ ಕಾಲದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಎಷ್ಟೋ ಶಿಫಾರಸ್ಸು ಮಾಡಬೇಕಾದ ಸಂದರ್ಭಗಳಿವೆ. ಆದರೆ ಈ ಕಲಾ ಪ್ರತಿಷ್ಠಾನವು ಯಾವುದೇ ಶಿಫಾರಸ್ಸು ಪರಿಗಣಿಸದೇ ಅತ್ಯಂತ ಯೋಗ್ಯರನ್ನೇ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಖ್ಯಾತ ಸಂಗೀತಗಾರರಾದ ಡಾ. ಶ್ರೀಧರ ಕುಲಕರ್ಣಿ ಉದ್ಘಾಟಿಸಿ ಮಾತನಾಡಿ ಕೆ.ಜಗುಚಂದ್ರ ಅವರು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಅವರು ಒಬ್ಬ ಪ್ರತಿಭಾವಂತ ಕಲಾವಿದರಾಗಿದ್ದರು. ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸ್ಯ ಕಲಾವಿದರಾದ ಮಲ್ಲಪ್ಪ ಹೊಂಗಲ್ ಜಗುಚಂದ್ರ ಅವರು ನಮ್ಮಿಂದ ಎಲ್ಲೂ ಹೋಗಿಲ್ಲ ನಮ್ಮ ಮದ್ಯದಲ್ಲೇ ಶಾಶ್ವತವಾಗಿ ಇರುತ್ತಾರೆ ಎಂದು ಅವರ ಒಡನಾಟವನ್ನು ಸ್ಮರಿಸಿಕೊಂಡರು.
ಪ್ರಶಸ್ತಿ ಸ್ವೀಕರಿಸಿದ ಬಸವರಾಜ ಬೆಂಗೇರಿಯವರು, ಪಂ ಪುಟ್ಟರಾಜ ಗವಾಯಿಗಳವರ ಜೊತೆಗಿನ ಕ್ಷಣಗಳು, ಮತ್ತು ಜಗುಚಂದ್ರ ಅವರೊಂದಿಗೆ ವೇದಿಕೆಗಳನ್ನು ಹಂಚಿಕೊಂಡ ನೆನಪುಗಳನ್ನು ಸ್ಮರಿಸಿದರು. ಉದಯವಾಣಿ ಪತ್ರಿಕೆಯ ಬಸವರಾಜ ಹೊಂಗಲ ಅವರು ಮಾತನಾಡಿ ಜಗುಚಂದ್ರ ಅವರು ಅಧ್ಬುತ ರಂಗಕಲಾಸಕ್ತಿ ಹೊಂದಿದ , ಅವರ ಸಹೃದಯಿ ಸ್ನೇಹಿತರಾಗಿ ಎಲ್ಲರಿಗೂ ಮೆಚ್ಚಿನ ಮಿತ್ರರಾಗಿದ್ದರು ಎಂದು ಹೇಳಿದರು. ಸಿದ್ದಲಿಂಗಪ್ಪ ನರೇಗಲ್ಲ, ಮಹಾದೇವ ಸತ್ತಿಗೇರಿ ಮಾತನಾಡಿದರು.ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಮ್ ಎಫ್ ನಾಡಗೌಡದೇಸಾಯಿ, ಎನ್ ಡಿ ದೇಸಾಯಿ, ಎಮ್ ಎಸ್ ಫರಾಸ, ವೇದಿಕೆಯಲ್ಲಿ ಇದ್ದರು.
ಗಾಯಕರಾದ ಪ್ರೇಮಾನಂದ ಶಿಂಧೆ, ಪ್ರಮೀಳಾ ಜಕ್ಕಣ್ಣವರ ರಂಗಗೀರೆಗಳನ್ನು ಹಾಡಿದರು.
ನಂತರ ಸರಸ್ವತಿ ಜ್ಞಾನ ಮಹಿಳಾ ಮಂಡಳ, ಸುಶೀಲಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕಲ್ಪತರು ಮಹಿಳಾ ಸಂಘ, ಹಾಗೂ ಕಲಾಶಕ್ತಿ ಫೌಂಡೇಶನ್ ವತಿಯಿಂದ ಜಾನಪದ ಹಾಡು ಹಾಗೂ ಜನಪದ ನೃತ್ಯ ಕಾರ್ಯಕ್ರಮವು ನೆರೆದ ಜನಮನಸ್ಸನ್ನು ಸೂರೆಗೊಳ್ಳಿಸಿದವು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಫ್.ಬಿ ಕಣವಿ.ನಾಗರಾಜ ಕಲ್ಲೂರ, ಅನಿಲ ಮೇತ್ರಿ, ಕಾಶಿನಾಥ ಅಸೂಟಿ, ಅಶೋಕ ರೆಡ್ಡಿ, ಶಾಂತವೀರ ಬೆಟಗೇರಿ, ಶಶಿಧರ ಬುದ್ನಿ, ಗಿರಿಮಲ್ಲ ಬೆಳ್ಳೆನವರ, ದೇವಾನಂದ ರತ್ನಾಕರ, ಅನಿಲ ಪುರಾಣಿಕ, ರೂಪಾ ಪಾಟೀಲ, ಎ.ಬಿ.ಬಿಜಾಪೂರ, ಎಲ್ ಆರ್ ಬೂದಿಹಾಳ, ಆರತಿ ದೇವಶಿಖಾಮಣಿ, ಸಂಗೀತಾ ದೇವದಾಸ, ಜ್ಯೋತಿ ಬಡ್ನಿ, ಸುನಿತಾ ರಂಗನಾಯಕ, ಹಾಗೂ ಕೆ.ಜಗುಚಂದ್ರ ಅವರ ಸಹೋದರಿಯನ್ನು ಸನ್ಮಾನಿಸಲಾಯಿತು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ