ಕಾದಂಬರಿ- ಸಂಚಿಕೆ -35

೭೮ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಚಿತ್ರಕಲಾ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆ ಹಾಗೂ ಬಹುಮಾನ ವಿತರಣೆ

 ೭೮ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸಮುದಾಯ ಧಾರವಾಡ ಸಹಯೋಗದೊಂದಿಗೆ ಸರ್ಕಾರಿ ಆರ್ಟ್ ಗ್ಯಾಲರಿ ಧಾರವಾಡದಲ್ಲಿ ನಡೆದ ಚಿತ್ರಕಲಾ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಬಿ ಎಚ್ ಕುರಿಯವರು ಮುಖ್ಯಸ್ಥರು ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯ ಧಾರವಾಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸಂವಿಧಾನ ನಮ್ಮ ಹಕ್ಕು ಸಂವಿಧಾನ ರಕ್ಷಣೆ ಮಾಡುವ ಕೆಲಸ ನಮ್ಮಿಂದ ಆಗಬೇಕಿದೆ ಇಡೀ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿರುವುದು ಈ ಸಂವಿಧಾನದ ಮೇಲೆ ಹೀಗಾಗಿ ನಾವು ಮೊದಲು ಸಂವಿಧಾನವನ್ನು ಗೌರವಿಸಬೇಕು ಮತ್ತು ಸಂವಿಧಾನವನ್ನು ಉಳಿಸುವಂತಹ ಕೆಲಸ ವಿದ್ಯಾರ್ಥಿ ಮಟ್ಟದಿಂದಲೇ ಪ್ರಾರಂಭವಾಗಬೇಕು ಈ ಜಾಗೃತಿ ನಾವು ಮಾತ್ರವಲ್ಲದೆ ಉಳಿದಿರುವ ಎಲ್ಲರಲ್ಲೂ ಸಂವಿಧಾನದ ಜಾಗೃತಿಯನ್ನು ಮೂಡಿಸುವಂತಹ ಕೆಲಸವಾಗಬೇಕಿದೆ ಚಿತ್ರಕಲೆಯ ಮೂಲಕ ಚಿತ್ರ ಕಲಾವಿದ ಜಾಗೃತಿಯನ್ನು ಮೂಡಿಸಿದರೆ ಹೈಸ್ಕೂಲು ಮಕ್ಕಳಲ್ಲಿ ದೇಶಭಕ್ತಿ ಗೀತೆ ನಾಡಗೀತೆ ದೇಶಕ್ಕಾಗಿ ಮಡಿದ ವೀರ ಯೋಧರ ಹೋರಾಟಗಾರರ ಇತಿಹಾಸವನ್ನು ಮನವರಿಕೆ ಮಾಡುತ್ತ ಸುಂದರ ದೇಶ ಕಟ್ಟುವ ಕೆಲಸ ನಾವು ನೀವು ಮಾಡಬೇಕಿದೆ ಆ ನಿಟ್ಟಿನಲ್ಲಿ ಸಮುದಾಯ ಸಂಘಟನೆ ನಿರಂತರವಾಗಿ ಇಂತಹ ಚಟುವಟಿಕೆಗಳನ್ನ ಹಾಕುತ್ತಾ ಬಂದಿದೆ ನಾವು ಅವರೊಂದಿಗೆ ಯಾವತ್ತೂ ಕೈಜೋಡಿಸಿದ್ದೇವೆ ಎಂದರು.

ನಂತರ ಶ್ರೀ ಡಿ ಕೆ ಕಾಮಕರ ಉಪನ್ಯಾಸಕರು ಭಾರತೀಯ ಕಲಾ ಕೇಂದ್ರ ಧಾರವಾಡ ಇವರು ಮಾತನಾಡುತ್ತಾ ಜಾಗೃತಿ ಅಭಿಯಾನ ಬರಿ ಚಿತ್ರಕಲೆಯ ಮೂಲಕ ದೇಶಭಕ್ತಿ ಗೀತೆಯ ಮೂಲಕ ಮಾತ್ರವಲ್ಲ ವಿಶೇಷವಾಗಿರುವಂತಹ ವಿವಿಧ ಕಲಾ ಪ್ರಕಾರಗಳ ಮೂಲಕ ನಾವು ಜನರನ್ನ ಎಚ್ಚರಿಸುವಂತಹ ಕೆಲಸ ಮಾಡಬೇಕು ನಾಟಕ, ಕಿರು ನಾಟಕ, ಲಲಿತಕಲೆ ಹೀಗೆ ಇನ್ನು ಹಲವು ಕಲಾ ಪ್ರಕಾರಗಳ ಮೂಲಕ ಸಂವಿಧಾನ ಜಾಗೃತಿಯನ್ನು ಮೂಡಿಸಬೇಕಾಗಿದೆ. ನಾವು ದೇಶದ ಏಳಿಗೆಯ ಕುರಿತು ಚಿಂತಿಸಬೇಕಾಗಿದೆ ಜನರನ್ನು ಎಚ್ಚರಗೊಳಿಸಬೇಕಾಗಿದೆ. ಭಾರತ ದೇಶಕ್ಕೆ ಸ್ವತಂತ್ರ ಪಡೆದು ೭೮ ವರ್ಷಗಳಾದರೂ ಸ್ವಾತಂತ್ರ‍್ಯೋತರ ಕನಸುಗಳು ಇನ್ನೂ ಸಾಕಾರಗೊಂಡಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಜ ಕನಸಾದ ಸಮಾನತೆ, ಸಹೋದರತ್ವ, ಭ್ರಾತೃತ್ವ, ಭಾವೈಕ್ಯತೆ, ಸೌಹಾರ್ಧತೆಯನ್ನು ಎಲ್ಲರೂ ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಬಲಿಷ್ಠ ಸಂವಿಧಾನವನ್ನು ನಮಗಾಗಿ ನೀಡಿರುವುದು ನಮ್ಮೆಲ್ಲರ ಗಮನಕ್ಕೆ ಇದೆ. ಇವುಗಳ ಮಧ್ಯ ಕೆಲವು ಶಕ್ತಿಗಳು ಸಂವಿಧಾನವನ್ನು ಬದಲಿಸಲು ಪ್ರಚೋದನೆ ನೀಡಿ ಸಮಾಜದಲ್ಲಿ ಕೋಮು ಗಲಭೆಯನ್ನು ಸೃಷ್ಟಿಸಿ ಮನಸುಗಳನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆ ಶಕ್ತಿಗಳು ಎಷ್ಟೇ ಬಲಿಷ್ಠವಾದರೂ ನಾವು ನಮ್ಮ ಒಗ್ಗಟ್ಟನ್ನು ಗಟ್ಟಿತನವನ್ನು ಸಂವಿಧಾನದ ತತ್ವವನ್ನು ಬಿಟ್ಟು ಹೋಗದೆ ನಾವು ಸುರಕ್ಷಿತವಾಗಿ ಸಂವಿಧಾನವನ್ನು ಕಾಪಾಡುತ್ತ ನಾವು ಸಂವಿಧಾನ ಸರ್ವ ಜನಾಂಗದ ಶಾಂತಿಯ ತೋಟ, ಒಂದೇ ತಾಯಿಯ ಮಕ್ಕಳಂತೆ ನಾವು ನೀವು ಬಾಳಬೇಕಿದೆ ಅದಕ್ಕಾಗಿ ಇಂತಹ ಚಟುವಟಿಕೆಗಳು ಕಾರ್ಯಕ್ರಮಗಳು ಕಲಾ ಪ್ರಕಾರಗಳ ಮೂಲಕ ಜನರಿಗೆ ಸಂದೇಶ ಸಾರುವುದು ಬಲು ಮುಖ್ಯವಾಗಿದೆ ಅದರಲ್ಲೂ ಅಂತಹ ಕಾರ್ಯಕ್ರಮ ಸಮುದಾಯ ಧಾರವಾಡ ಹಾಕಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಬಿ ಐ ಈಳಿಗೇರ ಅಧ್ಯಕ್ಷರು ಸಮುದಾಯ ಧಾರವಾಡ ಮಾತನಾಡುತ್ತಾ ನಮಗೆಲ್ಲರಿಗೂ ಸ್ವಾತಂತ್ರ‍್ಯ ಸಿಕ್ಕಿದೆ ಎಂಬ ಪರಿಕಲ್ಪನೆಯಲ್ಲಿ ಪ್ರತಿವರ್ಷ ನಾವು ಸ್ವತಂತ್ರೋತ್ಸವದ ವಿಜೃಂಭಣೆಯನ್ನು ಆಚರಿಸುತ್ತಾ ಬಂದಿದ್ದೇವೆ ಆದರೆ ನಿಜವಾಗಿಯೂ ನಮಗೆ ಸಾಮಾಜಿಕವಾಗಿ, ಅರ್ಥಿಕವಾಗಿ, ರಾಜಕೀಯವಾಗಿ ಸಿಗಬೇಕಾದ ಸ್ವಾತಂತ್ರ‍್ಯ ಸಿಕ್ಕೇ ಇಲ್ಲ. ಅವೆಲ್ಲವನ್ನು ಕೆಲವು ಪಟ್ಟಭದ್ರ ಹಿತಾಶಕ್ತಿಗಳ, ಸ್ವಾರ್ಥ ರಾಜಕಾರಣಿಗಳು ದೇಶವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಮಾರಲು ಹೊರಟಿದ್ದಾರೆ. ಪ್ರಜೆಗಳೆಲ್ಲರನ್ನು ತಮ್ಮ ಕೈಗೊಂಬೆಗಳಂತೆ ತಿಳಿದು ಆಡಳಿತವನ್ನು ಮಾಡುತ್ತಿದ್ದಾರೆ. ಆದರೆ ಇಂದಿನ ನಮಗೆಲ್ಲ ಸಾಮಾಜಿಕ ಭದ್ರತೆ ಕೂಡಿಬಾಳುವ ಸಂಸ್ಕೃತಿ, ಸಾಮಾಜಿಕ ನ್ಯಾಯ ಸಂವಿಧಾನದ ಸಂಪೂರ್ಣ ಆಶಯಗಳು ದೊರೆಯಬೇಕಿದೆ ಅಂದರೆ ಮಾತ್ರ ನಮ್ಮ ಬದುಕು ಹಸನಾಗುತ್ತದೆ. ಇಲ್ಲದಿದ್ದಲ್ಲಿ ಸಮಾಜದಲ್ಲಿ ಅಸಮಾನತೆ ವ್ಯವಸ್ಥೆ ತಾಂಡವಾಡುತ್ತದೆ ಮತ್ತೆ ಪೂರ್ವಿಕರಂತೆ ನಾವು ಸ್ಪರ್ಶಸ್ಪರ್ಶಗಳ ಕಲ್ಪನೆಯಲ್ಲಿ ಮುಳುಗಬೇಕಾಗುತ್ತದೆ ಆದ ಕಾರಣ ನಾವು ನೀವುಗಳ ಮಾಡಬೇಕಾದ ಕೆಲಸವೆಂದರೆ ಸಂವಿಧಾನವನ್ನು ಗೌರವಿಸುವುದು, ಸಂವಿಧಾನವನ್ನು ಉಳಿಸುವುದು ಸಂವಿಧಾನದ ಜಾಗೃತಿಯನ್ನು ಮೂಡಿಸುವುದಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿಗಳಾದ ಜೋಸೆಫ್ ಮಲ್ಲಾಡಿ ಅವರು ನಿರೂಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನೆಯ ಕಾರ್ಯದರ್ಶಿಗಳು ಈರಣ್ಣ ಐನಾಪುರ್, ಸ ಪ್ರತಾಪ್ ಬಹುರೂಪಿ, ಭೀಮಸೇನ್ ಕಾಗಿ, ಅನ್ನಪೂರ್ಣ ಮಡಿವಾಳರ, ಶ್ರೀ ಎನ್ಎಂ ಪಾಟೀಲ್, ಭೀಮನಗೌಡ ಕಟಾವಿ, ವೀರಣ್ಣ ಹೊಸಮನಿ ಉಪಸ್ಥಿತರಿದ್ದರು.

೭೮ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಏರ್ಪಡಿಸುವ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವು ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿ ಸ್ಪರ್ಧೆಗೆ ಮಹತ್ವವನ್ನು ನೀಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸುದೀಪ್ ಕೆ, ದ್ವಿತೀಯ ಬಹುಮಾನ ದೀಪ ಸವನೂರ್, ತೃತೀಯ ಬಹುಮಾನ ಬಸವರಾಜ್ ತಳವಾರ್ ಹಾಗೂ ವಿಜಿತಾ ಬಿ ಪ್ರಭಾವಿ ಹಾಗೂ ಕೋಮಲ್ ವಿ ದಳವಾಯಿ ಇವರು ವಿಶೇಷ ಬಹುಮಾನವನ್ನು, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಸಾವರಿ ಜೋಶಿ, ದ್ವಿತೀಯ ಬಹುಮಾನ ರಿಜಾ ಲೋಹಾನಿ, ತೃತೀಯ ಬಹುಮಾನ ನೋಹನ್ ಎಸ್ ದಾಸರ್ ಹಾಗೂ ಶ್ರಾವ್ಯ ನರಗುಂದ, ಪ್ರತಿಕ್ಷ ಬ್ಯಾಹಟ್ಟಿ ಸಮಾಧಾನಕೆರ ಬಹುಮಾನ ಪಡೆದಿದ್ದಾರೆ. 

ಕಾಮೆಂಟ್‌ಗಳು