ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ಕರುನಾಡಿನ ಸಾಂಸ್ಕೃತಿಕ ನಾಯಕ 'ಬಸವಣ್ಣ 'ಕೃತಿ ಲೋಕಾರ್ಪಣೆ

ಧಾರವಾಡದ ಗಣಕರಂಗ ಸಂಸ್ಥೆಯು ಇತ್ತೀಚೆಗೆ ಬಸವ ಜಯಂತಿ ಸಂದರ್ಭದಲ್ಲಿ ಆಯೋಜಿಸಿದ್ದ ಲೇಖನಸ್ಪರ್ಧೆಯ ಆಯ್ದ ಲೇಖನಗಳ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ ೧೮-೦೮-೨೦೨೪ರ ರವಿವಾರದಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾಹದೇ ಸಭಾಭವನದಲ್ಲಿ ಆಯೋಜಿಸಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರುಘಾಮಠದ ಪರಮಪೂಜ್ಯ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು ಅಧ್ಯಕ್ಷತೆಯನ್ನು ಮಾಜಿಸಚಿವ ಶರಣಶ್ರೀ ಎಸ್.ಎಸ್.ಪಾಟೀಲ ಅವರು ಮತ್ತು ಕೃತಿಯ ಕುರಿತು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ಬಸು ಬೇವಿನಗಿಡದ ಮಾತನಾಡುವರು. ಸ್ಪರ್ಧೆಯ ತೀರ್ಪುಗಾರರ ಅನಿಸಿಕೆಯನ್ನು ಡಾ.ಪುಷ್ಪಾವತಿ ಶಲವಡಿಮಠ ಮತ್ತು ಶ್ರೀಧರ ಗಸ್ತಿ ಹೇಳುವರು. ತುಮಕೂರಿನ ವಚನ ಮಂದಾರ ವೇದಿಕೆಯ ಸಂಸ್ಥಾಪಕ ಡಾ.ವಿಜಯಕುಮಾರ ಕಮ್ಮಾರ ಮತ್ತು ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ.ಬಸವರಾಜ ಹೊಂಗಲ ಗೌರವ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ನೈಋತ್ಯ ರೇಲ್ವೆ ವಲಯದ ವಾಣಿಜ್ಯ ನಿರೀಕ್ಷಕರಾದ ಬಿ.ಎಂ.ನಾಗರಾಜಸಿಂಗ್, ಸಂಗೀತ ಕಲಾವಿದ ಡಾ.ಅನಿಲ ಮೇತ್ರಿ ಅವರನ್ನು ಗೌರವಿಸಲಾಗುವುದು. ಬಸವಣ್ಣ, ಬುದ್ಧಭಾರತ ಮತ್ತು ಪ್ರಕರಣಗಳು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಯನ್ನು ಇದೇ ಸಂದರ್ಭದಲ್ಲಿ ಮಾಡಲಾಗುವುದು. ವಚನ ಗಾಯನ ಕಾರ್ಯಕ್ರಮವನ್ನು ಧಾರವಾಡದ ಅನುರಾಗ ಸಾಂಸ್ಕೃತಿಕ ಕಲಾ ಬಳಗದ ಕಲಾವಿದರು ನಡೆಸಿಕೊಡಲಿದ್ದಾರೆ. ನಿರೂಪಣೆಯನ್ನು ಧಾರವಾಡದ ವಚನೋತ್ಸವ ಬಳಗದ ಸಂಚಾಲಕ ಶಿವಾನಂದ ನಾಗೂರ ಮತ್ತು ರವಿ ಚಲವಾದಿಯವರು ವಂದನಾರ್ಪಣೆ ಮಾಡಲಿದ್ದಾರೆ. ಸದರಿ ಕಾರ್ಯಕ್ರಮಕ್ಕೆ ಸಮಸ್ತ ಬಸವಾಭಿಮಾನಿಗಳು ಆಗಮಿಸಬೇಕೆಂದು ಗಣಕರಂಗದ ಮುಖ್ಯಸ್ಥ ಸಿದ್ಧರಾಮ ಹಿಪ್ಪರಗಿಯವರು ಆಹ್ವಾನಿಸಿದ್ದಾರೆ.

ಕಾಮೆಂಟ್‌ಗಳು