- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕೆ ಜಿ ಕುಂದಣಗಾರ ದತ್ತಿ, ಶ್ರೀ ವಿಠ್ಠಲ ಕಮ್ಮಾರ ಮತ್ತು ಲಲಿತಾ ವಿಠ್ಠಲ ಕಮ್ಮಾರ ದತ್ತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆಯನ್ನು ಬೆಂಗಳೂರಿನ ಸಾಮಾಜಿಕ ಚಿಂತಕರು ಮತ್ತು ವಿಶ್ರಾಂತ ಕೆ ಎ ಎಸ್ ಅಧಿಕಾರಿಗಳಾದ ಅರವಿಂದ ದಳವಾಯಿ ಇವರು ಮಾಡಿ,ಕುಂದಣಗಾರ ಇವರ ಬದುಕು ಬರಹ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅಗತ್ಯ ಎಂದು ಹೇಳಿದರು... ಕೆ ಜಿ ಕುಂದಣಗಾರ ಪ್ರತಿಷ್ಠಾನವನ್ನು ಕರ್ನಾಟಕ ಸರ್ಕಾರ ಸ್ಥಾಪನೆ ಮಾಡಲಿ ಎಂದು ಆಗ್ರಹ ಪೂರ್ವಕ ಮನವಿ ಮಾಡಿದರಲ್ಲದೇ ಒಂದು ವೇಳೆ ಹಾಗೇನಾದರೂ ಹೋರಾಟ ನಡೆಸಿದಲ್ಲಿ ನಾನು ಸಂಪೂರ್ಣವಾಗಿಬೆಂಬಲಿಸುವೆ.ಎಂದು ಮಾತನಾಡಿದರು.. ಕುಂದಣಗಾರ ಜನ್ಮ ಸ್ಥಳ ಕೌಜಲಗಿ ಕುಗ್ರಾಮ ಇಲ್ಲಿಂದ ಬಂದ ಕನ್ನಡ ರತ್ನ ಕುಂದಣಗಾರರು ಇವರ ಆದರ್ಶ ನಮಗೆಲ್ಲ ಮಾದರಿ ಎಂದರು..
ಪನ್ಯಾಸಕರಾದ ಡಾ. ಶಶಿಧರ ತೋಡಕರ ಇವರು ತುಂಬಿ ತುಳುಕುವ ಬಡತನದಲ್ಲಿ ಸಾಕಷ್ಟು ಏಳು ಬೀಳುಗಳ ನಡುವೆ ಬಾಳಿದವರು ಕುಂದಣಗಾರರು ಧಾರವಾಡ ಕರ್ನಾಟಕ ಕಾಲೇಜಿನ ಪ್ರಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ನೆನೆಯುವದೇ ನಮ್ಮ ಸೌಭಾಗ್ಯ ಎಂದರು.
ಇನ್ನೋರ್ವ ಉಪನ್ಯಾಸಕರಾದ ಹಿರಿಯ ನ್ಯಾಯವಾದಿ ಶ್ರೀ ಪ್ರಕಾಶ ಉಡಕೇರಿ ಇವರು ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿದಂತೆ ನಮ್ಮ ಸರಕಾರಗಳು ಯಾವುದೇ ಜಾತಿ ಮತ ಬೇಧವಿಲ್ಲದೆ ಉಚಿತ ಕಡ್ಡಾಯ ಶಿಕ್ಷಣವನ್ನು ಮತ್ತು ಉದ್ಯೋಗವನ್ನು ನೀಡಬೇಕೆಂದು ತಿಳಿಸಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ ಲಿಂಗರಾಜ ಅಂಗಡಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರು,ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 120 ದತ್ತಿಗಳು ಇವೆ.. ಕಾರ್ಯಕ್ರಮ ಯಶಸ್ವಿ ಗೊಳಿಸುತ್ತ ಬಂದಿದ್ದೇವೆ...ಎಂದರು... ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ರಾಮಣ್ಣ ಬಡಿಗೇರ ಇವರಿಗೆ ಜಿಲ್ಲಾ ಕಸಾಪದ ಮುಂದಿವರಿದ ಕಟ್ಟಡ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ನೆರವು ನೀಡಲು ಹಾಗೂ ವಚನ ಪಿತಾಮಹ ಡಾ. ಫ ಗೂ ಹಳಕಟ್ಟಿ ಅವರ ಹೆಸರನ್ನು ಧಾರವಾಡ ಪ್ರಮುಖ ಬೀದಿಗೆ ಹಸರು ಇಡಲು ಮನವಿ ಸಲ್ಲಿಸಲಾಯಿತು
ಇದೇ ಸಂದರ್ಭದಲ್ಲಿ ಶ್ರೀ ರಾಮಣ್ಣ ಬಡಿಗೇರ ಇವರಿಗೆ ಸನ್ಮಾನ ಮಾಡಲಾಯಿತು.. ಸನ್ಮಾನ ಸ್ವೀಕರಿಸಿದ ಪೂಜ್ಯ ಮಹಾಪೌರರು ಮಾತನಾಡಿ ಬೇಡಿಕೆ ಈಡೇರಿಸುವದಾಗಿ ಭರವಸೆ ನೀಡಿದರು..
ಮಹದೇವ ಹೊರಟ್ಟಿ, ಸುರೇಶ ಬೇದರೆ ,ಪ್ರಕಾಶ ಉಡಕೇರಿ ಕಾಳಪ್ಪ ಬಡಿಗೇರ, ಡಾ.ಶಶಿಧರ ತೋಡಕರ, ಈರಣ್ಣ ಪತ್ತಾರ, ಡಾ.ಜಗದೀಶ ಬರಗಿ . ಇವರನ್ನು ಸನ್ಮಾನಿಸಲಾಯಿತು.ಡಾ ಎಸ್ ಎಸ್ ದೊಡಮನಿ ಇವರು ಕಾರ್ಯಕ್ರಮ ನಿರೂಪಿಸಿದರು....ಶ್ರೀ ಮಹಾಂತೇಶ್ ನರೇಗಲ್ಲ, ಇವರು ವಂದಿಸಿದರು.ಶ್ರೀಮತಿ ಪ್ರಮೀಳಾ ಜಕ್ಕನ್ನವರ ಪ್ರಾರ್ಥನೆ ಮಾಡಿದರು. ವೇದಿಕೆ ಮೇಲೆ ದತ್ತಿ ದಾನಿಗಳಾದ ವಿಠ್ಠಲ ಕಮ್ಮಾರ, ಶ್ರೀಮತಿ ಲಲಿತಾ ಕಮ್ಮಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಂತಾಮಣಿ ಪತ್ತಾರ, ಶಾಂತವೀರ ಬೆಟಗೇರಿ, ಎಸ್ ಎಚ್ ಪ್ರತಾಪ, ಎಮ್ ಬಿ ಕಟ್ಟಿ, ವಿ. ಆರ್ ಬಡಿಗೇರ.. ಡಾ. ವೆಂಕಟೇಶ್ ಮಾಚಕನೂರ ಶ್ರೀಧರ ಕುಲಕರ್ಣಿ , ಕರಿಕಟ್ಟಿ, ಮರೇದ, ಎಫ್ ಬಿ ಪಾಟೀಲ , ಸುಧಾ ಕಬ್ಬೂರ ,ಸುವರ್ಣ ಸುರಕೋಡ ,ಎಚ್ ಎಸ್ ಬಡಿಗೇರ, ಕೆ ಕೆ ಪಾಟೀಲ, ರಾಘವೇಂದ್ರ ಬಡಿಗೇರ.. ವಿಶ್ವ ಕರ್ಮ ಸಮಾಜದ ಎಲ್ಲರೂ ಭಾಗವಹಿಸಿದ್ದರು..
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ