ಕಾದಂಬರಿ- ಸಂಚಿಕೆ -35

ಪ್ರಕರಣಗಳು ಕಿರುಗತೆ ಸ್ಪರ್ಧೆಯ ಫಲಿತಾಂಶ.








ಧಾರವಾಡದ ಗಣಕರಂಗ ಸಂಸ್ಥೆಯು ೭೮ನೇಯ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ಆಯೋಜಿಸಿದ್ದ “ಪ್ರಕರಣಗಳು” ಕಿರುಗತೆ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದೆ. ಪ್ರಥಮ ಬಹುಮಾನಕ್ಕೆ ಸಂತೆಬೆನ್ನೂರ ಪೈಟ್ಮಟ್ರಾಜ್‌ ಅವರ ಒಲವೇ ಜೀವನ ಸಾಕ್ಷಾತ್ಕಾರ, ದ್ವಿತೀಯ ಬಹುಮಾನಕ್ಕೆ ಇಬ್ಬರು ಕಥೆಗಾರರಾದ ಜಮಖಂಡಿಯ ಡಾ.ವೈ.ವೈ.ಕೊಕಣ್ಣವರ ಅವರ ಕಥೆಯಾದಳು ಮುದುಕಿ ಮತ್ತು ಕರಡಿಗುದ್ದಿಯ ಗಂಗಾದೇವಿ ಚಕ್ರಸಾಲಿ ಅವರ ಕುಲಮರ್ಯಾದೆ ಹಾಗೂ ತೃತೀಯ ಬಹುಮಾನಕ್ಕೆ ತುಮರಿಕೊಪ್ಪದ ಜೊಸೆಪ್‌ ಮಲ್ಲಾಡಿ ಅವರ ಚಾಕ್ಲೆಟ್‌ ತರತೇನಿ ಕಥೆ ವಿಜೇತವಾಗಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಿತರಿಗೆ ಅನುಕ್ರಮವಾಗಿ ಮೂರು ಸಾವಿರ, ಎರಡು ಸಾವಿರ (ಈ ಸಲ ಇಬ್ಬರಿಗೆ ಸಮಾನ ಹಂಚಿಕೆ) ಮತ್ತು ಒಂದು ಸಾವಿರ ನಗದು ಹಣ ನೀಡಲಾಗುತ್ತದೆ. ಜೊತೆಗೆಐವರು ಕಥೆಗಾರರಾದ ಮುದೋಳದ ವೆಂಕಟೇಶ ಗುಡೆಪ್ಪನವರ, ಹಳಿಯಾಳದ ಭಾರತಿ ನಲವಡಿ, ಬಾಗಲಕೋಟೆಯ ಡಾ.ಉಮಾ ಅಕ್ಕಿ,ಕಲಬುರಗಿಯ ಡಾ.ಶರಣಮ್ಮ ಪಾಟೀಲ ಮತ್ತು ಹುಬ್ಬಳ್ಳಿಯ ಪದ್ಮಜಾ ಉಮರ್ಜಿ ಮುಂತಾದವರು ತೀರ್ಪುಗಾರರ ಮೆಚ್ಚುಗೆ ಬಹುಮಾನವಿಜೇತರಾಗಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಭಾಗವಹಿಸಿದವರಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಗೌರವ ನೀಡಲಾಗುವುದು.ವಿಜೇತರಿಗೆ ಧಾರವಾಡದಲ್ಲಿ ಶೀಘ್ರದಲ್ಲಿಯೇ ಆಯೋಜಿಸಲಾಗುವ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಸ್ಪರ್ಧೆಗೆ ತೀರ್ಪುಗಾರರಾಗಿ ಧಾರವಾಡ ಆಕಾಶವಾಣಿಯ ನಿವೃತ್ತ ನಿರ್ದೇಶಕ ಮತ್ತು ಸಾಹಿತಿ ಡಾ.ಬಸೂ ಬೇವಿನಗಿಡದ ಮತ್ತು ಸಾಹಿತಿ ಶ್ರೀಧರ ಗಸ್ತಿಯವರು ಕಾರ್ಯನಿರ್ವಹಿಸಿದ್ದರು. ಗಣಪತಿ ಚಲವಾದಿ ಸ್ಪರ್ಧೆಯನ್ನು ಸಂಯೋಜನೆ ಮಾಡಿದ್ದರ

ಕಾಮೆಂಟ್‌ಗಳು