ದೃಢ ಸಂಕಲ್ಪದಿಂದ ಪ್ರಯತ್ನಿಸಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ.-ಡಾ. ನಿರ್ಮಲಾ ಹಿರೇಗೌಡರ
ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಶ್ರೀ ಎಮ್ ಸಿ ಭಂಡಿ ವಿಜ್ಞಾನ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ದಿ .ನಿರಂಜನ ವಾಲಿಶೆಟ್ಟರ ಹಾಗೂ ದಿ .ಬಸವರಾಜ ದೊಡ್ಡಭಾವೆಪ್ಪ ಮೂಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಡಾ. ನಿರ್ಮಲಾ ಹಿರೇಗೌಡರ ಪ್ರತಿಭಾ ಪುರಸ್ಕಾರ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ದೃಢ ಸಂಕಲ್ಪದಿಂದ ಪ್ರಯತ್ನಿಸಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ಪ್ರತಿಭೆ ಬಾಡುವ ಮುನ್ನ ಅದನ್ನು ಗುರ್ತಿಸಿ ಹೊರ ಹಾಕಬೇಕು ಎಂದು ಹೇಳಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜು, ನಿಗದಿ ಯ ಪ್ರೊ.ಶ್ರೀಧರ ಹೆಗಡೆ ಭದ್ರನ್ ಅವರು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಿಗೆ ಲಿಪಿ ಪಡೆದ ಸುಂದರ ಭಾಷೆ ಕನ್ನಡ ಭಾಷೆ ಇದು ಹೆಮ್ಮೆ ಎಂದರು. ಕನ್ನಡ ಕಾವ್ಯ ಪರಂಪರೆಯ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಹಾವಿದ್ಯಾಲಯ ಕ್ಕೆ ಪ್ರಥಮ, ದ್ವಿತೀಯ ಸ್ಥಾನ ಪಡೆದ ಕಲಾ ವಿಭಾಗದಲ್ಲಿ ಕು. ಹರ್ಷಾ ಪಟ್ಟಣಶೆಟ್ಟಿ, ಪ್ರಥಮ ಸ್ಥಾನ, ಕವಿತಾ ಹಿತ್ತಲಮನಿ ದ್ವಿತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಕು. ಅಮೀದಾ ಮುಲ್ಲಾ ಪ್ರಥಮ ಸ್ಥಾನ ಹಾಗೂ ಲಕ್ಷ್ಮಿ ಪಾಟೀಲ್ ದ್ವಿತೀಯ ಸ್ಥಾನ ಪಡೆದಿದ್ದಕ್ಕೆ ಸನ್ಮಾನ ಮಾಡಲಾಯಿತು. ದೇಶ ಭಕ್ತಿ ಗೀತೆಗಳನ್ನು ಶ್ರೀಮತಿ ಪ್ರಮಿಳಾ ಜಕ್ಕನ್ನವರ ಹಾಗೂ ಶ್ರೀ ಬಸವರಾಜ ಗೊರವರ ಪ್ರಸ್ತುತ ಪಡಿಸಿದರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸನ್ಮಾನಕ್ಕೆ ಉತ್ತರವಾಗಿ ಕು. ಅಮೀದಾ ಮುಲ್ಲಾ ಹಾಗೂ ಕು. ಲಕ್ಷ್ಮೀ ಪಾಟೀಲ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ನಿರ್ದೇಶಕರಾದ ಶ್ರೀಮತಿ ಶಕುಂತಲಾ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಕು. ಕೋಮಲ, ರೂಪಾ ಹಾಗೂ ರಶ್ಮತಾ ಪ್ರಾರ್ಥಿಸಿದರು. ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಂತೇಶ ನರೇಗಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಪ್ರೊ.ಎಮ್ ಐ ಸಣ್ಣಮನಿ ವಂದಿಸಿದರು. ಶ್ರೀಮತಿ ಗಂಗೂ ಬೆಟಗೇರಿ ನಿರೂಪಿಸಿದರು. ವೇದಿಕೆ ಮೇಲೆ ಪ್ರಾಚಾರ್ಯ ಡಾ. ರಾಜೇಶ್ವರಿ ಶೆಟ್ಟರ್ , ಶ್ರೀಮತಿ ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಶ್ರೀಮತಿ ದಾನೇಶ್ವರಿ ಭೂಯ್ಯಾರ, ಶ್ರೀ ಯು ಬಿ ನದಾಫ ಉಪಸ್ಥಿತರಿದ್ದರು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ