ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ಕ್ರೀಯಾಶೀಲ ರಂಗಕರ್ಮಿ ಶ್ರೀ ಈರಣ್ಣ ಪಾಳೇದ.

 ಮೂಲತಃ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಭಂಕಲಗಿ ಗ್ರಾಮದ ಈರಣ್ಣನವರು ತಮ್ಮ ತಂದೆ ಸಿದ್ಧರಾಮಪ್ಪನವರ ಮಾರ್ಗದರ್ಶನದಲ್ಲಿ ಚಿಕ್ಕಂದಿನಲ್ಲಿಯೇ ರಂಗಭೂಮಿಗೆ ಪಾದಾರ್ಪಣೆ ಮಾಡಿ, ಹಿರಿಯ ರಂಗ ಕಲಾವಿದ ಚಿತ್ತರಂಜನ ಚಟರ್ಜಿ ಯವರ ತಂಡದೊಂದಿಗೆ ಹವ್ಯಾಸಿ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡ ಇವರ ವೃತ್ತಿ ಜೀವನದಲ್ಲಿ ಇವತ್ತಿನವರೆಗೆ ಹಲವಾರು ಏರಿಳಿತಗಳ ನಡುವೆ ಜನಮನ್ನಣೆ ಗಳಿಸಿದ್ದಾರಲ್ಲದೆ ಇಂದಿಗೂ ಪ್ರಚಲಿತದಲ್ಲಿದ್ದಾರೆ.  

ಈರಣ್ಣನವರ ಕಲಾಪಯಣ ೧೯೬೦ರಿಂದ ಪ್ರಾರಂಭವಾಗಿ ತಮ್ಮ ೭೦ರ ಇಳಿವಯಸ್ಸಿನಲ್ಲಿಯೂ ಅವಳಿ ನಗರದಲ್ಲಿ ಹಾಗೂ ಗ್ರಾಮಾಂತರ ಪರಿಸರದಲ್ಲಿ ಜರಗುವ ರಂಗಚಟುವಟಿಕೆಗಳಲ್ಲಿ ಸಕ್ರೀಯರಾಗಿ ಭಾಗವಹಿಸುವುದರೊಂದಿಗೆ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡುವುದರಲ್ಲಿ ಮುಂಚುಣಿಯಲ್ಲಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಎಂ.ಎ ಪದವಿ ಪಡೆದ ಈರಣ್ಣ ಪಾಳೇದ ರವರು ಹವ್ಯಾಸಿ ರಂಗಭೂಮಿಯ ಎಲ್ಲ ಆಯಾಮಗಳಲ್ಲಿ ಪರಿಣಿತಿಯನ್ನು ಹೊಂದಿ, ಅನುಭವಿಸಿದ ಇವರು, ರಂಗಭೂಮಿಗಾಗಿ ನಟ,ನಿರ್ಧೇಶಕರಾಗಿ, ನಾಟಕಕಾರರಾಗಿ ಹಾಗು ಸಂಘಟಕರಾಗಿ ಅನುವಾದಿತ, ಐತಿಹಾಸಿಕ, ಕ್ರಾಂತಿಕಾರಿ ಮತ್ತು ಮಕ್ಕಳ ನಾಟಕ ಸೇರಿದಂತೆ ಸುಮಾರು ೨೫ ನಾಟಕಗಳನ್ನು ರಚಿಸಿ, ಪ್ರಕಟಿಸಿ, ನಿರ್ಧೇಶಸಿರುವುದರೊಂದಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳು ಸಂದಿರುವುದು ಅವರ ರಂಗಭೂಮಿಯ ಬಗೆಗಿನ ಬದ್ಧತೆಗೆ ಸಾಕ್ಷಿಯಾಗಿದೆ.

ಮಕ್ಕಳಿಗಾಗಿ ರಂಗ ಕಾರ್ಯಾಗಾರ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸುವದರೊಂದಿಗೆ ರಂಗಭೂಮಿಗೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ನಗರದ ಪ್ರಗತಿ ಕಲಾವೃಂದದ ಸದಸ್ಯರಾಗಿ, ಕಾರ್ಮಿಕ ಮಖಂಡರಾಗಿ ಸಾಮಾಜಿಕ ಸೇವೆಸಲ್ಲಿಸುವದರೊಂದಿಗೆ ಲೆಖಕರಾಗಿ ಹಾಗು ಪತ್ರಕರ್ತರಾಗಿ ತಮ್ಮ ಕಾರ್ಯನಿಷ್ಠೆಯಲ್ಲಿ ಎಳ್ಳಷ್ಟು ಚ್ಯುತಿಬರದಂತೆ ನುಡಿದಂತೆ ನಡದು ಯುವ ಪೀಳಿಗೆಗೆ ಮಾದರಿಯಾಗುವಂತೆ ಜೀವನ ನಡೆಸುತ್ತಿರುವ ಇವರು ನಿಸ್ವಾರ್ಥ,ನಿಷ್ಕಳಂಕ ಪ್ರತಿರೂಪದ ಖಣಿಯಂತಿರುವರು. 

ಶ್ರೀ ಈರಣ್ಣ ಪಾಳೇದ ರವರ ಪ್ರತಿಭೆಗೆ ನ್ಯಾಯವಾಗಿ ಸಿಗಬೇಕಾದ ಗೌರವಗಳು, ಪುರಸ್ಕಾರಗಳು ಸಿಗದೇ ಇರುವದಕ್ಕೆ ಅವರ ಕಲಾ ಬಳಗದಲ್ಲಿ ಮತ್ತು ಅಭಿಮಾನಿಗಳಿಗೆ ಬೇಸರ ತಂದಿದೆಯಾದರೂ, ಈರಣ್ಣ ನವರು ಮಾತ್ರ ಇದಾವದಕ್ಕೂ ಕಿವಿಗೊಡದೆ ಇತ್ತೀಚೆಗೆ ತೀರ್ಥಯಾತ್ರೆಯನ್ನು ತಮ್ಮ ಶ್ರೀಮತಿಯೊಂದಿಗೆ ಪೂರ್ಣಗೊಳಿಸಿ, ತಮ್ಮ ನಿರಂತರ ಕಾಯಕದೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿ, ಸದ್ಗುರು ಶ್ರೀ ಸಿದ್ಧಾರೂಢರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.


ಕಾಮೆಂಟ್‌ಗಳು