ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ನವರಾತ್ರಿ ಸಂಭ್ರಮಕ್ಕೆ ದಾಂಡಿಯಾ ಮೆರಗು

ನವರಾತ್ರಿ ಸಂಭ್ರಮಕ್ಕೆ ದಾಂಡಿಯಾ ಮೆರಗು ನೀಡುತ್ತಿರುವುದು ನಮ್ಮ ಸಂಸ್ಕೃತಿ ಪ್ರತಿಬಿಂಬವಾಗಿದೆ- ಬಿಜೆಪಿ ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ


ನವರಾತ್ರಿ ಸಂಭ್ರಮ ಒಂಬತ್ತು ದಿನ ರಂಗೇರುತ್ತಿದ್ದು, ನಗರದ ವಿವಿಧೆಡೆ ನಡೆಯುತ್ತಿರುವ ದಾಂಡಿಯಾ ಹಾಗೂ ಗಾರ್ಬಾ ನೃತ್ಯ ಎಲ್ಲರಿಗೂ ನಮ್ಮ ಸಂಸ್ಕೃತಿಗಳ ಮಹತ್ವವನ್ನು ತಿಳಿಸಲು ಹಾಗೂ ಎಲ್ಲರ ನಡುವಿನ ಸಂಬಂಧವನ್ನು ಗಟ್ಟಿಮಾಡುತ್ತಿರುವುದು ಸಂತಸ ತಂದಿದೆ. ಕರ್ನಾಟಕದ ಎಲ್ಲ ಭಾಗದಲ್ಲಿ ಈಚೆಗೆ ದಸರಾದ ಭಾಗವಾಗಿ ದಾಂಡಿಯಾ ನೃತ್ಯ ಪರಂಪರೆಯು ಪ್ರಮುಖ ಆಕರ್ಷಣೆಯಾಗಿ ಬೆಳೆದು ನಿಂತಿದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷರು, ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ ಹೇಳಿದರು.
ಅವರು ಧಾರವಾಡದ ಕಲಾಶಕ್ತಿ ಫೌಂಡೇಷನ್ ವತಿಯಿಂದ ಎಮ್ ಬಿ ನಗರದ ಶಿವಾಲಯದ ಸಭಾಭವನದಲ್ಲಿ ದಾಂಡಿಯಾ ನೃತ್ಯ ತರಬೇತಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ದಾಂಡಿಯಾ ನೃತ್ಯದ ಮೂಲಕ ಜನರು ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪೀಳಿಗೆಯಿಂದ ಸಂರಕ್ಷಿಸಲು ಸಹಾಯ ಮಾಡುತ್ತದೆ.ಇದು ನಮ್ಮ ಸಂಸ್ಕೃತಿಗಳ ಪರಂಪರೆ ಜೀವಂತವಾಗಿರುವುದು. ದಾಂಡಿಯಾ ನೃತ್ಯವು ಗುಜರಾತ್‌ನ ವರ್ಣರಂಜಿತ ಸಾಂಸ್ಕೃತಿಕ ಪರಂಪರೆಯನ್ನು ತೋರಿಸುತ್ತದೆ. ಇದು ರಾಜ್ಯದ ಮೌಲ್ಯಗಳು, ಸಾಮಾನ್ಯ ಸಂಪ್ರದಾಯಗಳು, ಸಂಗೀತ ಮತ್ತು ಕಲಾತ್ಮಕ ಪ್ರದರ್ಶನ ಮಾಡುವ ಮೂಲಕ ಸಂಬಂಧವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತಮಾಡಿ ದಾಂಡಿಯಾ ತನ್ನ ಕಲಾತ್ಮಕ ಸೌಂದರ್ಯವನ್ನು ಮೀರಿ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಸಾರುತ್ತದೆ ಅಂತಹ ಸಂಸ್ಕೃತಿಗಳನ್ನು ಉಳಿಸಲು ಕಲಾಶಕ್ತಿ ಪೌಂಡೇಷನನ ಮಲ್ಲನಗೌಡ ಪಾಟೀಲ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಹಬ್ಬಗಳು ಸಮುದಾಯ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಳೆಸುತ್ತದೆ, ವಿವಿಧ ಹಿನ್ನೆಲೆಯ ಜನರನ್ನು ಏಕತೆಯ ಆಚರಣೆಯಲ್ಲಿ ಒಟ್ಟಿಗೆ ತರುತ್ತದೆ. ನವರಾತ್ರಿಯಲ್ಲಿ ನರ್ತಕರು ದುರ್ಗಾ ಮಾತೆಗೆ ಪೂಜೆ ಸಲ್ಲಿಸುವುದರಿಂದ ಇದು ಭಕ್ತಿಯ ಸಂಕೇತವಾಗಿದೆ. ನೃತ್ಯವು ಕಥೆ ಹೇಳುವ, ಜಾನಪದವನ್ನು ಉಳಿಸುವ ಮತ್ತು ಸಂಪ್ರದಾಯಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಕಲಾಶಕ್ತಿ ಫೌಂಡೇಷನ್ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣಾ ಪಾಟೀಲ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ್, ಮಲ್ಲನಗೌಡ ಪಾಟೀಲ ಇದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಅಮೃತಾ ಪಾಟೀಲ ಪ್ರಾರ್ಥಿಸಿದರು.ಪೂಜಾ ಪಾಟೀಲ  ನಿರೂಪಿಸಿದರು. ಶಿಭಿರಾರ್ಥಿ ಶೈಲಾ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು.ಕಲಾಶಕ್ತಿ ಫೌಂಡೇಷನ್ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ ವಂದಿಸಿದರು
 ಮತ್ತು ಕಾರ್ಯಕ್ರಮದಲ್ಲಿ  ಸ್ಟಾನಿಲಿ ಕಣ್ಣೂರು, ಆಕಾಶ ಸಾಸ್ವಿಹಳ್ಳಿ, ರೋಹಿತ, ಹಾಗೂ 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು